ಪಕ್ಷದ ಕಾರ್ಯಕರ್ತರೆ ನನ್ನ ಗಾಡ್ ಫಾದರ್: ಕೇಂದ್ರ ಸಚಿವ ಭಗವಂತ ಖೂಬಾ

ಬೀದರ: ಜು.9:ಪಕ್ಷದ ಆದೇಶದಂತೆ, ದೇಶದಾದ್ಯಂತ ಸಂಪರ್ಕ ಸೇ ಸಮರ್ಥನ ಅಭಿಯಾನವನ್ನು ಹಮ್ಮಿಕೊಂಡು, ಕೇಂದ್ರ ಸರ್ಕಾರದ 9 ವರ್ಷಗಳ ಸಾಧನೆಗಳು ತಿಳಿಸಲಾಗುತ್ತಿದೆ, ಈ ಅಭಿಯಾನದ ಅಂಗವಾಗಿ ಬೀದರ ನಗರದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ, ಕೇಂದ್ರ ಸಚಿವ ಖೂಬಾರವರು ಹಿರಿಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ, ಅವರಿಂದ ಸಲಹೆಗಳು ತೆಗೆದುಕೊಂಡರು ಹಾಗೂ ಹಿರಿಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾರವರು, ರಾಜಕೀಯದಲ್ಲಿ ನನಗ್ಯಾರು ಗಾಡ್ ಫಾದರ್ ಇಲ್ಲ, ಪಕ್ಷದ ಕಾರ್ಯಕರ್ತರೆ ನನ್ನ ಗಾಡ್ ಫಾದರ್ ಎಂದು ಹೇಳಿದರು. ಔರಾದ ಪಟ್ಟಣದಲ್ಲಿ ಹುಟ್ಟಿ ಬೇಳೆದ ನನ್ನಂತವರಿಗೆ ಇಂದು ಸಂಸದನಾಗಿ ಮಾಡಿ, ಮೋದಿಜಿಯವರ ಕ್ಯಾಬಿನೇಟನಲ್ಲಿ ಮಂತ್ರಿ ಮಾಡಿದ್ದಾರೆ ಅಂದರೆ ಅದು ನನ್ನಲ್ಲಿರುವ ನಿಷ್ಠೆ ಹಾಗೂ ಕೆಲಸ ಮಾಡುವ ಸಾಮಥ್ರ್ಯ ನೋಡಿ ಎಂದು ತಿಳಿಸಿದರು.

2014ರಲ್ಲಿ ಎಲ್ಲರ ಆಶೀರ್ವಾದದಿಂದ ಸಂಸದನಾದ ಮೇಲೆ, ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗಿವೆ, ಜಿಲ್ಲೆಯ ಹೆಸರು ದೇಶದಲ್ಲೆ ಹೆಸರುವಾಸಿಯಾಗಿಸಿದ್ದೇನೆ, ನಮ್ಮ ಸರ್ಕಾರದ ಸಾಧನೆ, ನನ್ನ ಅವಧಿಯಲ್ಲಾದ ಸಾಧನೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು, ಪಕ್ಷದ ವಿರುದ್ಧ ಮಾತನಾಡುವವರಿಗೆ ನಮ್ಮ ಸಾದನೆಗಳು ತಿಳಿಸಿ ಉತ್ತರಿಸಬೇಕು.

ಮೋದಿ ಅಂತಹ ನಾಯಕರು ಇರುವುದರಿಂದ ನಮ್ಮ ದೇಶ ಇಂದು ಆರ್ಥಿಕವಾಗಿ ಸಧೃಢವಾಗಿದೆ, ಕೋವಿಡ್‍ನಂತ ಮಹಾಮಾರಿಯಲ್ಲೂ ದೇಶದ ಜನ ಆರೋಗ್ಯವಾಗಿದ್ದಾರೆ, ರೈತರಿಗೆ, ಮಹಿಳೆಯರಿಗೆ, ಗರ್ಭೀಣಿಯರಿಗೆ, ದಲಿತರಿಗೆ, ಯುವಕರಿಗೆ ಇತ್ಯಾದಿ ಎಲ್ಲಾ ವರ್ಗದವರ ಏಳ್ಗೆ ನಮ್ಮ ಮೋದಿ ಸರ್ಕಾರದಿಂದ ಆಗುತ್ತಿದೆ, ನಾವೆಲ್ಲರೂ ನಮ್ಮ ಸರ್ಕಾರದ ನಮ್ಮ ಲೋಕಸಭಾ ಕ್ಷೇತ್ರದ ಸಾಧನೆಗಳು ಎದೆ ತಟ್ಟಿ ಗರ್ವದಿಂದ ಹೇಳಿಕೊಳ್ಳಬೇಕು, ಪ್ರಚಾರ ನಮ್ಮ ಮನೆಯಿಂದ ಪ್ರಾರಂಭವಾಗಬೇಕೆಂದು ತಿಳಿಸಿದರು.

ಅಭಿವೃದ್ದಿ ಎನ್ನುವುದು ಹರಿಯುವ ನದಿಯಾಗಿದೆ, ಅದರಂತೆ ಬೀದರ ಲೋಕಸಭಾ ಕ್ಷೇತ್ರದಲ್ಲಿಯೂ ಸಹ ಒಂಬತ್ತು ವರ್ಷಗಳಿಂದ ಕೇಂದ್ರದಿಂದ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಮಾಡಿರುವ, 12 ಹೈವೆಗಳು, 13 ಹೊಸ ರೈಲುಗಳು, ಪಾಸಪೋರ್ಟ ಸೆಂಟರ್, ಫಸಲ್ ಬಿಮಾ, ಪಿ.ಎಮ್. ಕಿಸಾನ್ ಸಮ್ಮಾನ ಅಡಿ ನೂರಾರು ಕೋಟಿ ಪರಿಹಾರ ಹಾಗೂ ಪ್ರೋತ್ಸಾಹಧನ ಸಾಕಷ್ಟು ಕೆಲಸಗಳು ನನ್ನಿಂದಾಗಿವೆ.

ನಮ್ಮ ಪಕ್ಷದಲ್ಲಿ ಮಾತ್ರ ಕಾರ್ಯಕರ್ತ ನಾಯಕನಾಗಲು ಸಾಧ್ಯ, ಕಾಂಗ್ರೇಸ್ , ಜೆ.ಡಿ.ಎಸ್. ನಲ್ಲಿ ಕೇವಲ ಕುಟುಂಬದವರು ಮಾತ್ರ ಬೆಳೆಯಲು ಸಾಧ್ಯ, 30 ವರ್ಷಗಳಿಂದ ಪಕ್ಷದಲ್ಲಿದ್ದು, ಪಕ್ಷ ವಹಿಸಿರುವ ಎಲ್ಲಾ ಜವಬ್ದಾರಿಗಳು ನಿಭಾಯಿಸಿದ್ದೇನೆ, ನನ್ನ ನಿಷ್ಠೆಗೆ ಮೆಚ್ಚಿ, ಪಕ್ಷ ಸಂಸದ ಸ್ಥಾನವನ್ನು ನೀಡಿ, ಇಂದು ಕೇಂದ್ರ ಸಚಿವನಾಗಿ ಮಾಡಿದೆ, 9 ವರ್ಷಗಳಲ್ಲಿ ಎಲ್ಲಿಯೂ ನನ್ನ ಸ್ಥಾನಕ್ಕೆ ಚ್ಯುತಿ ತರುವ ಕೆಲಸ ನನ್ನಿಂದಾಗಿಲ್ಲ, ನನ್ನ ವಿರುದ್ಧ ಅಪಪ್ರಚಾರ ಮಾಡುವವರಿಗೂ ಸಹ ನಾನು ಉತ್ತರಿಸುತ್ತಿಲ್ಲಾ ಕಾರಣ ನನ್ನಿಂದ ಪಕ್ಷಕ್ಕೆ ಮುಜುಗರವಾಗದಿರಲಿ ಎಂದು ನಾನು ಸುಮ್ಮನಿರುವೆ ಎಂದು ತಿಳಿಸಿರುವೆ.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಮಾಜಿ ಜಿಲ್ಲಾಧ್ಯಕ್ಷರಾದ ಬಾಬುರಾವ ಮದಕಟ್ಟಿ, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಬುಡಾ ಮಾಜಿ ಅಧ್ಯಕ್ಷರಾದ ಬಾಬುವಾಲಿ, ನಗರ ಅಧ್ಯಕ್ಷ ಶಶಿಧರ ಹೊಸಳ್ಳಿ, ಮುಖಂಡರಾದ ರೌಫೊದ್ದಿನ ಕಚೋರಿವಾಲೆ, ರಾಜೇಂದ್ರ ಪೂಜಾರಿ, ರಾಜಶೇಖರ ನಾಗಮೂರ್ತಿ, ಬಸವರಾಜ ಪಾಟೀಲ್ ಕಮಲನಗರ, ಮಲ್ಲಿಕಾರ್ಜುನ ಕುಂಬಾರ, ಗಜೇಂದ್ರ ಕನಕಟಕರ್, ರೇವಣಸಿದ್ದಪ್ಪ ಜಲಾದೆ, ಬಸವರಾಜ ಪವಾರ, ಸುಭಾಷ ಹೊನ್ನಡ್ಡಿ, ಸುಭಾಷ ಚೊಳ್ಕರ್, ಚಂದ್ರಶೇಖರ ಗಾದಾ ಇತರರು ಉಪಸ್ಥಿತರಿದ್ದರು.