ಪಕ್ಷದ ಕಾರ್ಯಕರ್ತರು  ಕೈ ಜೋಡಿಸಿ ಕಾಂಗ್ರೆಸ್ ಗೆಲುವಿಗೆ ಮುಂದಾಗಬೇಕು

 ಹರಿಹರ.ಸೆ.೧೮;  ಕಾಂಗ್ರೆಸ್‌ ಪಕ್ಷವನ್ನು ‘ಮಾಸ್‌ ಬೇಸ್‌’ ರಿಂದ ‘ಕೇಡರ್‌ ಬೇಸ್‌’ ಪಕ್ಷವನ್ನಾಗಿ ಮಾಡುವುದು ಪಕ್ಷದ ಗುರಿಯಾಗಿದೆ ಜಾತಿ- ಸಮುದಾಯಗಳನ್ನು ಒಗ್ಗೂಡಿಸುವ  ಕೆಲಸದಲ್ಲಿ ಪಕ್ಷದ ಕಾರ್ಯಕರ್ತರು  ಕೈ ಜೋಡಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಕೆಪಿಸಿಸಿ ಸಂಯೋಜಕ ಎಸ್.ವಿಜಯಕುಮಾರ್ ಹೇಳಿದರು.ಹರಿಹರ ರಚನ ಕ್ರೀಡಾ ಕ್ಲಬ್ ನಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಆಯೋಜಿಸಿದ ವಾರ್ಡ್ ಹಾಗೂ ಪಂಚಾಯತ್ ಅದ್ಯಕ್ಷರ ಹಾಗೂ ವೀಕ್ಷಕ ರ ಸಭೆಯಲ್ಲಿ ಮಾತನಾಡಿ  ಹಿಂದೆ ಕಾಂಗ್ರೆಸ್ ಮಾಸ್‌ ಬೇಸ್‌’ ಪಕ್ಷ ವಾಗಿತ್ತು ಅಂದು ಇಂದಿರಾಗಾಂಧಿ ಯನ್ನು ಪೂಜಾ ಭಾವನೆಯಿಂದ ನೋಡುವ ಕಾಲವಿತ್ತು ಅದರೆ 2014 ರ ಬಳಿಕ ದೇಶದಲ್ಲಿ ಕೋಮುಭಾವನೆ ಕೆರಳಿಸಿ ಅಧಿಕಾರವನ್ನು ಹಿಡಿದುಕೊಂಡಿರುವ ಬಿಜೆಪಿ ಪಕ್ಷವನ್ನು ಹಿಮ್ಮೆಟ್ಟಿಸಲು ಪಕ್ಷದ ಕಾರ್ಯಕರ್ತರು ಪಕ್ಷದನಿಸ್ವಾರ್ಥ ಸೇವೆ ಗೆ ಮುಂದೆ ಬರಬೇಕು ಎಂದರು.  ನಾವು ಸ್ವಾತಂತ್ರ್ಯ ಹೋರಾಟದ ಮಾದರಿಯ ಹೋರಾಟ ಮಾಡಬೇಕಿದೆ. ಅದಕ್ಕಾಗಿ ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆ ಕೈಗೊಂಡಿದ್ದಾರೆ ಎಂದರು  ಕೆಪಿಸಿಸಿ ಸಂಯೋಜಕ ಅಮೃತೇಶ್ವರ ಸ್ವಾಮಿ ಮಾತನಾಡಿ ಪಕ್ಷದ ಸಂಘಟನೆ ಗೆ ಪಂಚಾಯತ್ ಮಟ್ಟದ ಸಮಿತಿಗಳ ರಚನೆ ಯ ಪ್ರಾಮುಖ್ಯತೆ ಯನ್ನು ವಿವರಿಸಿದರು  ಶಾಸಕ ಎಸ್.ರಾಮಪ್ಪ ಮಾತನಾಡಿ ಪಕ್ಷದಲ್ಲಿ ಗುಂಪು ಗೊಂದಲ ಮಾಡಬಾರದು ಎಂದರು  ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ,ಬ್ಲಾಕ್ ಅದ್ಯಕ್ಷ ರಾದ ಎಲ್.ಬಿ.ಹನುಮಂತಪ್ಪ. ಎಂ.ಬಿ.ಅಬಿದ್ ಅಲಿ ಮುಖಂಡರಾದ ಬಾಬು ಲಾಲ್. ಎಂ.ನಾಗೇಂದ್ರ ಪ್ಪ.ಮಹೇಶ್ವರ ಪ್ಪ.ಎ.ಗೋವಿಂದ ರೆಡ್ಡಿ. ಜಿಗಳಿಅನಂದಪ್ಪ. ಹಾಲೇಶ್ ಗೌಡ  ಅಸೀಫ ಜುನೈದಿ.ವಿರೂಪಾಕ್ಷ ಪ್ಪ .ಎಂ.ವಾಸುದೇವ ಮುರ್ತಿ.ಕೆ.ಪಿ.ಗಂಗಾಧರ. ಅರಿಫ್ ಅಲಿ.ರೋಷನ್‌ ಜಾಮಿರ್. ಸೈಯದ್ ಅಲಿಂ.ಸೈಯದ್ ಸನಾವುಲ್ಲಾ.ಹನುಮಂತಪ್ಪ ಹನಗವಾಡಿ ಉಮೇಶ್ ಗೌಸ್ ಪಿರ್.ಭಾಗವಹಿಸಿದ್ದರು