
ಗುರುಮಠಕಲ್:ಎ.26: ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಪಕ್ಷದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಚುನಾವಣೆ ಆಯವ್ಯಯ ವೀಕ್ಷಕ ಗೌತಮ್ ಪತ್ರ ಮಾತನಾಡಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಹಣಕಾಸು ನಿರ್ವಹಣೆ ಮತ್ತು ಸಂಬಂಧ ಪಟ್ಟ ಸೂಕ್ತ ದಾಖಲೆಗೆ ಆಧ್ಯತೆ ನೀಡಬೇಕು ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಪರವಾನಿಗೆ ಪಡೆದ ವಾಹನಗಳಿಗೆ ಮಾತ್ರ ಚುನಾವಣೆ ಪ್ರಚಾರಕ್ಕೆ ವಾಹನ ವನ್ನು ಬಳಸಿ ಕೊಳ್ಳಬಹುದು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೂಕ್ತ ನಿಯಮ ದಾಖಲೆ ಹೊಂದಿರುವದರ ಜೊತೆಗೆ ಬ್ಯಾಂಕ್ ನಲ್ಲಿ ಹಣ ಠೇವಣಿ ಇಟ್ಟು ಅದರ ಮೂಲಕ ಹಣ ಖರ್ಚು ಮಾಡಬೇಕು ನಾಲ್ವತ್ತು ಲಕ್ಷ ರೂಪಾಯಿಗಳ ಖರ್ಚಿನ ಮಿತಿ ಮೀರಬಾರದು. ಹಾಗೂ ಪ್ರಚಾರದ ಸಂದರ್ಭದಲ್ಲಿ ಬೆಲೆ ಬಾಳುವಂತಹ ವಸ್ತುಗಳು ನೀಡಬಾರದು ಅದು ಕಾನೂನು ಬಾಹಿರವಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಚುನಾವಣಾ ಅಧಿಕಾರಿ ಸಂತೋಷ್ ಕುಮಾರ ಪಾಟೀಲ್. ತಹಸೀಲ್ದಾರ್ ಮೊಹಮ್ಮದ್ ಮೋಸಿನ್ ಆಹ್ಮದ್. ಲೆಕ್ಕ ಪತ್ರ ವಿಭಾಗ ಮಾರ್ಗದರ್ಶಕಿ ಕಾಜಲ್. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ. ಉಪನ್ಯಾಸಕರಾದ ಸುದರ್ಶನ್ ರೆಡ್ಡಿ. ಬಿಜೆಪಿ ಪಕ್ಷದ ಮುಖಂಡ ವೆಂಕಟೇಶ್ ವಿಶ್ವಕರ್ಮ ಚಂಡ್ರಿಕಿ. ಜೆಡಿಎಸ್ ಪಕ್ಷದ ಮುಖಂಡ ಮಲ್ಲಿಕಾರ್ಜುನರೆಡ್ಡಿ. ಬಿಎಸ್ ಪಿ ಪಕ್ಷದ ಮುಖಂಡ ಭೀಮಶಪ್ಪ ಗಡದಾನ. ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಎಸ್ ನಿಜಲಿಂಗಪ್ಪ ಪೂಜಾರಿ ದೊಡ್ಡ ಸಂಬ್ರಾ. ಉತ್ತಮ ಪ್ರಜಾಕಿಯ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.