ಪಕ್ಷದಲ್ಲಿ ಅಂತರ ಜಗಳ: ವಿಪಕ್ಷಗಳ ಬಾಯಿಗೆ ಆಹಾರ

ಕೋಲಾರ, ಮಾ.೨೨- ಕೋಲಾರದ ಕಾಂಗ್ರೇಸ್ ಪಕ್ಷದಲ್ಲಿ ಭಸ್ಮಸೊರರ ಮತ್ತು ರಾವಣಾಸೂರ ಪಾತ್ರಧಾರಿಗಳಿಂದಾಗಿ ಇಂದು ಮಾಡಿದ್ದೋಣ್ಣೂ ಮಾರಾಯ ಎಂದು ಅನುಭವಿಸುತ್ತಿದ್ದಾರೆ. ರಮೇಶ್ ಕುಮಾರ್ ಅವರ ಮಾತಿನಿಂದಾಗಿ ಪಕ್ಷದಲ್ಲಿ ಅಂತರ ಜಗಳದ ಕಿತ್ತಾಟದಿಂದಾಗಿ ಕಾರ್ಯಕರ್ತರು ತಲೆತಗ್ಗಿಸುವಂತೆ ಅಗಿ ವಿಪಕ್ಷಗಳ ಬಾಯಿಗೆ ಆಹಾರವಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ವ್ಯಂಗವಾಡಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಕಾಂಗ್ರೇಸ್ ಮುಖಂಡರಿಗೆ ಸಿದ್ದರಾಮಯ್ಯ ಅವರನ್ನು ಕರೆತರುವಂತ ಉದ್ದೇಶವೇನಾದರೂ ಇದೆಯೇ? ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿಯೇ ಸ್ವರ್ಧಿಸ ಬೇಕೆಂದು ಒತ್ತಾಯಿಸಲು ಅವರ ಮನೆ ಬಳಿ ತೆರಳಿರುವರಿಗೆ ಆ ಉದ್ದೇಶವೇ ಇದ್ದಂತೆ ಇಲ್ಲ. ಎಲ್ಲವೂ ಪರಧೆಯ ಮೇಲೆ ಕಾಣುವಂತ ನಾಟಕದಂತೆ ಕಂಡು ಬರುತ್ತಿದೆ ಎಂದು ಟೀಕಿಸಿದರು,
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ವರ್ಧಿಸಲಿ ಬಿಡಲಿ ನಮ್ಮ ಜೆ.ಡಿ.ಎಸ್ ಪಕ್ಷದಲ್ಲಿ ಯಾವೂದೇ ಬದಲಾವಣೆ ಇಲ್ಲ. ನಮ್ಮ ಕೆಲಸ ನಾವು ಮುಂದುವರೆಸಿದ್ದೇವೆ. ಮತದಾರರ ಆಶೀರ್ವಾದ ನಮಗೆ ಸಿಗಲಿದೆ ನಮಗೆ ಯಾವೂದೇ ಗೊಂದಲವೂ ಇಲ್ಲ, ಯಾವೂದೇ ಭೀತಿಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟ ಪಡೆಸಿದರು,
ಬಂಗಾರಪೇಟೆಯ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಜೆ.ಡಿ.ಎಸ್. ಪಕ್ಷದ ಕಾರ್ಯಕ್ರಮವು ಯಶಸ್ವಿಯಾಗಿದ್ದನ್ನು ಜೀರ್ಣಿಸಿ ಕೊಳ್ಳಲಾಗದೆ ವಿನಾಕಾರಣ ಜಗಳವನ್ನು ಕಾದಿದ್ದಾರೆ. ಸೇಠ್ ಕಾಂಪೌಂಡ್‌ನಲ್ಲಿ ಮತಯಾಚಿಸಲು ಹೋದವರ ಮೇಲೆ ದೌರ್ಜನ್ಯ ಎಸಗಿ ದಬ್ಬಳಿಕೆಯ ಪ್ರದರ್ಶನ ಮಾಡಿದ್ದಾರೆ. ಅಲ್ಲದೆ ನಮ್ಮ ಅಭ್ಯರ್ಥಿಯ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸೆಗಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡೆಸಿದರು.
ಮತಯಾಚಿಸಲು ಹೋದವರ ಮೇಲೆ ದಬ್ಬಾಳಿಕೆ ಮಾಡಿರುವಂತ ಬಂಗಾರಪೇಟೆ ಶಾಸಕರು ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ. ಮತ್ತು ಡಿ.ವೈ.ಎಸ್.ಪಿ. ಶಿವಕುಮಾರ್ ಅವರ ಮೇಲೂ ಸಹ ತಮ್ಮ ದಬ್ಬಾಳಿಕೆ ಪ್ರದರ್ಶಿಸಿದ್ದರು. ಹಲವಾರು ಭಾರಿ ಈ ಸಂಬಂಧವಾಗಿ ಮಾಧ್ಯಮಗಳಲ್ಲಿಯೇ ವರದಿಯಾಗಿದೆ. ಅವರ ಕೆಲಸಗಳಿಗೆ ಅಡ್ಡಿಯಾದಾಗ ಏನೇ ಮಾಡಲು ಸಿದ್ದರಾಗಿರುತ್ತಾರೆ ಎಂಬುವುದಕ್ಕೆ ಜೆ.ಡಿ.ಎಸ್. ಅಭ್ಯರ್ಥಿ ಮಲ್ಲೇಶ್‌ಬಾಬು ವಿರುದ್ದ ಪೋಲಿಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಾಗುವಂತೆ ಮಾಡಿದ್ದಾರೆ ಎಂದರು.
ಕ್ಷೇತ್ರದಲ್ಲಿನ ಅಭಿವೃದ್ದಿ ಕಾಮಗಾರಿಗೆ ಪೊಜೆ ಮಾಡಿಲ್ಲ ಎಂದು ಸಚಿವರು, ಮತ್ತು ಸಂಸದರು ಮುಂದುವರೆಸಲು ಹೋಗಿದ್ದ ಕಾಮಗಾರಿಗಳಿಗೆ ತಡೆ ಹಿಡಿದಿರುವುದು ಸಮಂಜಸವಲ್ಲ ಎಂದು ಅಸಮಾಧನ ವ್ಯಕ್ತ ಪಡೆಸಿದರು,
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಶಂಕು ಸ್ಥಾಪನೆ ಮಾಡಿದ ಮೇಲೆಯೇ ಕಾಮಗಾರಿಗಳು ಮುಂದುವರೆಸ ಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ಕಾಮಗಾರಿಗಳನ್ನು ತಡೆ ಹಿಡಿದ್ದಿದ್ದಾರೆ. ಅಧಿಕಾರಿಗಳಿಗೆ ಚುನಾವಣೆಯ ಭೀತಿಯಿಂದ ಕಾಮಗಾರಿಗೆ ಶೀಘ್ರವಾಗಿ ಚಾಲನೆ ನೀಡಬೇಕೆಂಬ ಕಾತರವಿದೆ ಎಂದು ಹೇಳಿದರು,
ಊರಿಗೌಡ ಮತ್ತು ನಂಜೇಗೌಡ ಅವರಿಂದ ಟಿಪ್ಪು ಹತ್ಯೆಯಾದ ಎಂಬ ಇತಿಹಾಸದ ಸೃಷ್ಠಿಗೆ ಸ್ವಾಮಿಜೀಗಳು ಬಿಜೆಪಿಗೆ ಕಿವಿ ಹಿಂಡಿರುವುದು ಸಮಂಜಸವಾಗಿದೆ. ಯಾವೂದೇ ದಾಖಲಾತಿಗಳು ಇಲ್ಲದೆ ಹೊಸ ಇತಿಹಾಸ ಸೃಷ್ಠಿಸಿ ಒಕ್ಕಲಿಗ ಸಮುದಾಯವನ್ನು ವಿಭಜಿಸುವ ಪ್ರಯತ್ನವಾಗಿದೆ. ಈ ಹಿಂದೆಯೂ ಸಹ ಆಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಪ್ರಯತ್ನವನ್ನು ನಡೆದಿರುವುದು ಜನಜನಿತವಾಗಿದೆ.
ಸಂವಿಧಾನವನ್ನು ತಿರುಚಿ ಹೊಸ ಇತಿಹಾಸ ಸೃಷ್ಠಿಸುವ ಪ್ರಯತ್ನ ಮಾಡಲು ಮುಂದಾಗಿದ್ದವರಿಂದ ಮತ್ತೊಂದು ಪ್ರಯತ್ನವಾಗಿದೆ. ಎಂದು ಟೀಕಿಸಿದರು,
ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಬರದಿದ್ದರೆ ಶ್ರೀನಿವಾಸಗೌಡರಿಗೆ ಟಿಕೆಟ್ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಕೆ.ಶ್ರೀನಿವಾಸಗೌಡರು ಚುನಾವಣೆಗೆ ಸ್ವರ್ಧಿಸಿ ಗೆದ್ದು ಬಿಟ್ಟೆರೇ ನಾನು ಅವರ ಮನೆಯ ವಾಚ್ ಮ್ಯಾನ್ ಅಗಿ ಕೆಲಸ ಮಾಡುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೆ ಆ ಮಾತಿಗೆ ನಾನು ಬದ್ದನಾಗಿರುತ್ತೇನೆ ಎಂದು ಸವಾಲ್ ಹಾಕಿದ ಮುಗಿದಿರುವ ಕಥೆಗೆ ಮತ್ತೆ ಜೀವ ತುಂಭಲು ಹೋಗಬೇಡಿ ಎಂದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಡಿ.ವಿ.ಹರೀಶ್ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಹಾಜರಿದ್ದರು.