ಪಕ್ಷಕ್ಕೆ ಮಹಿಳಾ ಶಕ್ತಿ ವಿಶೇಷವಾದುದು: ಸೋಮಶೇಖರ ರೆಡ್ಡಿ

ಬಳ್ಳಾರಿ, ನ.7: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಿನ್ನೆ ಮಹಿಳಾ ಮೋರ್ಚಾ ನಗರ ಮಂಡಲದ ಕಾರ್ಯಕಾರಿಣಿ ಸಭೆ ನಡೆಯಿತು.
ಸಭೆಯನ್ನು ನಗರ ಶಾಸಕ ಜಿ, ಸೋಮಶೇಖರ್ ರೆಡ್ಡಿ‌ ಅವರು ಉದ್ಘಾಟಿಸಿ. ಪಕ್ಷದಲ್ಲಿ ಮಹಿಳಾ ಮೋರ್ಚಾ ತನ್ನದೇ ಶಕ್ತಿಯನ್ನು ಹೊಂದಿದೆ. ನಮ್ಮ ಸರ್ಕಾರದ ಆಡಳಿತದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನತೆಗೆ ಮುಟ್ಟಿಸುವಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರು ಕವಿತಾ ಸಿಂಗ್ ಮಾತನಾಡಿ. ಪ್ರಧಾನಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಮಹಿಳೆಯರು ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು‌ ನೀಡಿದ್ದು ಅವನ್ನು ಜನರಿಗದ ತಲುಪುವಂತೆ ಮಾಡುವ ಕಾರ್ಯ ಆಗಬೇಕು. ಅಲ್ಲದೆ ಪಕ್ಷ ಸಂಘಟನೆಯು ಗ್ರಸಮ ಮಟ್ಟದಿಂದಲೂ ನಡೆಯಬೇಕು ಎಂದರು.
ಸಭೆಯಲ್ಲಿ ಮಾಜಿ ಸಂಸದ ಜೆ. ಶಾಂತಾ, ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣ, ಪ್ರಧಾನ ಕಾರ್ಯದರ್ಶಿ ಸುಗುಣ ಸುನಿತಾ ಜಿಲ್ಲಾ ಉಪಾಧ್ಯಕ್ಷರಾದ ಶಶಿಕಲ, ಸಾಧನಾ ಹಿರೇಮಠ್, ಜಿಲ್ಲಾ ಪದಾಧಿಕಾರಿಗಳಾದ ಶ್ರೀದೇವಿ, ಶೈಲಾ, ಪುಷ್ಪ, ರಮೀಜಾ, ನಗರ ಮಂಡಲ ಅಧ್ಯಕ್ಷ ಕೆ.ಬಿ. ವೆಂಕಟೇಶ್ವರ, ಪದಾಧಿಕಾರಿಗಳಾದ ಕೆ.ಎಸ್. ಅಶೋಕ್, ವೀರಶೇಖರ ರೆಡ್ಡಿ ಕೃಷ್ಣಾರೆಡ್ಡಿ ಮತ್ತು ನಗರ ಮಹಿಳಾ ಅಧ್ಯಕ್ಷೆ ಜ್ಯೋತಿ, ಪ್ರಧಾನ ಕಾರ್ಯದರ್ಶಿ ಪದ್ಮ ಮೊದಲಾದವರು ಇದ್ದರು.