
ಕೋಲಾರ,ಮೇ,೨೨- ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಲ್ಲಾ ಅನುಕೂಲ ಪಡೆದು ಕೊಂಡವರು, ಚುನಾವಣೆಯಲ್ಲಿ ದುಡ್ಡು ಕೊಟ್ಟರೆಂದು ಅವರಿಗೆ ಮತ ಹಾಕಿದವರನ್ನು ನಾವು ಎಂದಿಗೂ ಸರಿ ಪಡೆಸುವುದಕ್ಕೆ ಅಗುವುದಿಲ್ಲ. ನಮ್ಮ ಪಕ್ಷದಲ್ಲಿಯೇ ಇದ್ದು ಪಕ್ಷಕ್ಕೆ ದ್ರೋಹ ಮಾಡಿದವರು ತಾಯಿಗೆ ದ್ರೋಹ ಬಗೆದಂತೆ ಅವರುಗಳು ಎಂದಿಗೂ ವಿಶ್ವಾಸಕ್ಕೆ ಆರ್ಹರಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಕಿಡಿ ಕಾರಿದರು,
ನಗರದ ಕೋಗಿಲಹಳ್ಳಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ವರ್ತೂರು ಪ್ರಕಾಶ್ ಅವರು ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಾ ಆಡಳಿತದಲ್ಲಿ ಸೌಲಭ್ಯಗಳನ್ನು ಪಡೆದು ಕೊಂಡು ಚುನಾವಣೆಯಲ್ಲಿ ಅವರಿಗೆ ವಿರೋಧ ಮಾಡಿದವರನ್ನು ನಾವು ಮತ್ತೆ ಸೇರ್ಪಡೆ ಮಾಡಿ ಕೊಳ್ಳದೆ ವಿರೋಧಿಸ ಬೇಕು. ಚುನಾವಣೆಯಲ್ಲೂ ಅವರನ್ನು ಎದುರಿಸಿಯೇ ಚುನಾವಣೆ ನಡೆಸುವಂತಾಗ ಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಕಳೆದ ವಾರ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷವು ಅಧರ್ಮದಿಂದ ಗೆದ್ದಿದೆ. ರಮೇಶ್ ಕುಮಾರ್ ತಿಳಿಸಿರುವಂತೆ ಕಾಂಗೇಸ್ ಪಕ್ಷದವರ ಬಳಿ ಮೂರು ನಾಲ್ಕು ತಲೆಮಾರುಗಳಿಗೆ ಅಗುವಷ್ಟು ಹಣ ಇದೆ. ಅದರೆ ನಮ್ಮ ಬಳಿ ಅಷ್ಟೊಂದು ಹಣ ಇಲ್ಲ. ನಾವು ಜಾತಿ ಜಾತಿಗಳನ್ನು ವಿಭಜಿಸಿ ಮತ ಕೇಳಿಲ್ಲ ಎಂದ ಅವರು ಈ ಚುನಾವಣೆಯಲ್ಲಿ ಮತದಾನಕ್ಕೆ ೨ ದಿನ ಇರುವಾಗ ಬದಲಾವಣೆಗಳು ಕಂಡು ಬಂದಿತು ಎಂದು ಹೇಳಿದರು,
ರಾಜ್ಯದ ಮುಖ್ಯ ಮಂತ್ರಿ ಪ್ರಮಾಣ ವಚನ ಪಡೆದ ಬೆನ್ನ ಹಿಂದೆಯೇ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೇಸ್ ಪಕ್ಷ ನೀಡಿರುವಂತ ಗ್ಯಾರೆಂಟಿ ಬಗ್ಗೆ ಇಲ್ಲ ಸಲ್ಲದ ಕರಾರು ಹಾಕಿ ತಕರಾರುಗಳನ್ನು ಆರಂಭಿಸಿದ್ದಾರೆ. ದಾರಿಯಲ್ಲಿ ಹೋಗುವವರೆಗೆಲ್ಲಾ ನೀಡಲು ಅಗುವುದಿಲ್ಲ. ಇದಕ್ಕೆ ೫೦ ಸಾವಿರ ಕೋಟಿ ವೆಚ್ಚ ಅಗಲಿದೆ ಎನ್ನುತ್ತಿದ್ದಾರೆ. ಇದು ಗ್ಯಾರೆಂಟಿ ಕಾರ್ಡ ಹಂಚುವಾಗ ಗೊತ್ತಿರಲಿಲ್ಲವಾ ? ೨೦೦ ಯೊನಿಟ್ ಬಡವರು ಬಳಿಸುತ್ತಾರೆಯೇ ? ಎಂದು ಪ್ರಶ್ನಿಸಿದ ಅವರು ಈ ಎಲ್ಲಾ ಗ್ಯಾರೆಂಟಿ ವೆಚ್ಚವನ್ನು ಮುಂದೆ ನಮ್ಮ ತಲೆ ಮೇಲೆಯೇ ಹಾಕುತ್ತಾರೆ. ಇದರ ಪರಿಣಾಮ ಕಾಂಗ್ರೇಸ್ ಪಕ್ಷಕ್ಕೆ “ಮುಂದರ ವುಂದಿ ಮುಸಲಮ್ಮ ಪಂಡಾಗ”ಎಂಬ ಗಾದೆಯಂತೆ ಮುಂದೆ ಬರಲಿರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು,
ಸಭೆಯಲ್ಲಿ ಮುಖಂಡರಾದ ಬೆಗ್ಲಿಸೂರ್ಯಪ್ರಕಾಶ್, ಜಿ.ಪಂ. ಸದಸ್ಯ ಅರುಣ್ ಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಸೋಲೂರು ಅಂಜನಪ್ಪ,,ಕೆ.ಯು.ಡಿ.ಎ. ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿಚಲಪತಿ, ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪ್ರವೀಣ್ ಗೌಡ, ಮಂಜುನಾಥ್,ಮು.ರಾಘುವೇಂದ್ರ ಸೌಭಾಗ್ಯಮ್ಮ, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ರಾಜಣ್ಣ, ನರಸಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್ ಬಾಬು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರ ಅದ್ಯಕ್ಷ ತಿಮ್ಮರಾಯಪ್ಪ, ನಗರ ಪ್ರಧಾನ ಕಾರ್ಯದರ್ಶಿ ಓಹಿಲೇಶ್, ಯುವಮೋರ್ಚ ಅಧ್ಯಕ್ಷ ಬಾಲಾಜಿ, ಗಾಂಧಿನಗರ ವೆಂಕಟೇಶ್. ಮಂಜುನಾಥ್ ಮುಂತಾದವರು ಇದ್ದರು.