ಪಕ್ಷಕ್ಕಿಂತ ರಾಷ್ಟ್ರ ದೊಡ್ಡದು ಬಿಜೆಪಿ ಮಂತ್ರ: ಮೋದಿ

ನವದೆಹಲಿ, ಏ. ೬- ಪಕ್ಷ ರೂಪಿಸಿದ ದೇಶದ ಅಭಿವೃದ್ಧಿಯ ಮಂತ್ರದ ಮೇಲೆ ಬಿಜೆಪಿ ಕೆಲಸ ಮಾಡುತ್ತಿದೆ. ವ್ಯಕ್ತಿಗಿಂತ ಪಕ್ಷ ದೊಡ್ಡದಾಗಿದೆ. ಮತ್ತು ಪಕ್ಷಕ್ಕಿಂತ ರಾಷ್ಟ್ರ ದೊಡ್ಡದಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಹೇಳಿದ್ದಾರೆ.
ಬಿಜೆಪಿಯ ೪೧ನೇ ಸ್ಥಪ್ನಾ ದಿವಸ್ (ಪ್ರತಿಷ್ಟಾನ ದಿನ) ದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಂದ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಮತ್ತು ಇಲ್ಲಿವರೆಗೂ ನಡೆದುಕೊಂಡು ಬಂದಿದೆ.
ಪಕ್ಷವನ್ನು ರೂಪಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ಪ್ರಮುಖರಾದ ಲಾಲ್ ಕೃಷ್ಣಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಕೊಡುಗೆಯನ್ನು ಪ್ರಧಾನಿ ಮೋದಿ ಈ ವೇಳೆ ಶ್ಲಾಘಿಸಿದರು.
ವಿಶೇಷ ಸ್ಥಾನಮಾನ ೩೭೦ ವಿಧಿಯನ್ನು ರದ್ದುಪಡಿಸಿ, ಕಾಶ್ಮೀರಕ್ಕೆ ಸಂವಿಧಾನ ಬದ್ಧ ಹಕ್ಕನ್ನು ನೀಡುವ ಮೂಲಕ ನಮ್ಮ ಸರ್ಕಾರ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಯೋಚನೆಯನ್ನು ಈಡೇರಿಸಿದೆ ಎಂದರು.
ಬಿಜೆಪಿ ಪಕ್ಷ ರೂಪಿಸಲು ೧೯೭೭ರಲ್ಲಿ ೧೯೫೧ರ ನಂತರ ಜನಸಂಘವನ್ನು ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಥಾಪಿಸಿದರು. ಹಲವಾರು ಪಕ್ಷಗಳನ್ನು ವಿಲೀನಗೊಳಿಸಿ, ಈ ಜನಸಂಘ ಹುಟ್ಟಿಕೊಂಡಿದೆ. ೧೯೮೦ರಲ್ಲಿ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯು ಹೊಸ ರಾಜಕೀಯ ಉಡುಪನ್ನು ನಿರ್ದೇಶಿಸಿದ ಹಿನ್ನೆಲೆ ತನ್ನ ಸದಸ್ಯರನ್ನು ಪಕ್ಷದ ಮತ್ತು ಉಭಯ ಸದಸ್ಯರನ್ನು ದ್ವಿ ಸದಸ್ಯರೆಂದು ನಿಷೇಧಿಸಿತು. ನಂತರ ೧೯೮೦ರ ಏ. ೬ ರಂದು ಬಿಜೆಪಿ ಅಸ್ತಿತ್ವಕ್ಕೆ ಬಂದಿತು.