ಪಕೀರನಿಗೆ ಹರಕೆ, ಹುಲಿ, ಕರಡಿ,ಕಳಳ್ಳಿ ಬುವಾ ವೇಷಧರಿಸಿದ ಭಕ್ತರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಆ. 5 :- ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮದಲ್ಲಿ ಮೊಹರಂ ಆಚರಣೆಯನ್ನು ಬಹುವಿಜೃಂಬಣೆಯಿಂದ ಆಚರಿಸಲಾಗುತ್ತಿದ್ದು ಪಕೀರಸ್ವಾಮಿಗೆ ಹರಕೆ ಹೊತ್ತ ಭಕ್ತರು ಹುಲಿ,  ಕರಡಿ, ಕಳ್ಳಳ್ಳಿ ಬುವಾ ವೇಷಗಳನ್ನು ಧರಿಸಿ ಪಟ್ಟಣದಲ್ಲಿ ಓಡಾಡಿ ಕುಣಿದು ಕುಪ್ಪಳಿಸಿ ಅವರಿವರು ಕೊಟ್ಟ ಹಣವನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸುವರು.
ಪಟ್ಟಣದ ದೊಡ್ಡ ಮಸೀದಿ ಹತ್ತಿರದಲ್ಲಿರುವ ಪಕೀರಸ್ವಾಮಿಯ ದೇವಸ್ಥಾನವಿದ್ದು ಅಲ್ಲಿ ಪಕೀರದೇವರುಗಳನ್ನು ಕೂಡಿಸಿ ದೇವಸ್ಥಾನದ ಮುಂದೆ ಅಲೆಗುಣಿ ತೊಡುವ ಮೂಲಕ ಏಳು ದಿನದ ಸವಾರಿ, ಕತ್ತಲರಾತ್ರಿ ಹಾಗೂ ಮೊಹರಂ ಕೊನೆ ದಿನ ದೇವರನ್ನು ಹೊತ್ತು ಕೆಂಡಹಾಯುವ ಪರಿಪಾಠವಿದೆ ಅನೇಕ ಭಕ್ತರ ಹರಕೆಯನ್ನು  ಮಾತನಾಡದೆ ಸನ್ನೆಯಲ್ಲೇ ಹರಕೆ ತೀರಿಸುವ ದೈವ ಎಂದು ತಿಳಿದ ಭಕ್ತರು ದೇವರ ಹರಕೆ ಹೊತ್ತು ಅನೇಕ ವೇಷ ಭೂಷಣ ಧರಿಸಿ ಹಲಗೆ ಸದ್ದಿನಲ್ಲಿ ಕುಣಿದು ಕುಪ್ಪಳಿಸುತ್ತಾರೆ ಇನ್ನು ಕೆಲವರು ಕೇಳಿದ ವರಕೊಡುವಂತೆ ಅಲೆಕುಣಿಯಲ್ಲಿ ಹಾಕಿದ  ಬೆಂಕಿಗೆ ಉಪ್ಪು ಹುಳ್ಳಿ ಕಟ್ಟಿಗೆ ತುಂಡುಗಳನ್ನು ಹಾಕಿ ಹರಕೆ ಕಟ್ಟಿಕೊಳ್ಳುತ್ತಾರೆ ಇಲ್ಲವೇ ಹರಕೆ ಪೂಜೆ ಸಲ್ಲಿಸುತ್ತಾರೆ ಈ ಹಬ್ಬ  ಮುಸ್ಲಿಂ ಸಮುದಾಯದ ಹಬ್ಬವಾದರೂ ಅನ್ಯ ಧರ್ಮದವರೇ ಹೆಚ್ಚಾಗಿ ಆಚರಿಸಲಿದ್ದಾರೆ ಪಟ್ಟಣದಲ್ಲಿ 99% ರಷ್ಟು ಜನತೆ ಹಿಂದೂ ಧರ್ಮದವರೇ ಈ ಮೊಹರಂ ಹಬ್ಬವನ್ನು ಆಚರಿಸಲಿದ್ದಾರೆಂದು ಹೇಳಬಹುದಾಗಿದೆ.ಕತ್ತಲರಾತ್ರಿಯಂದು ದೇವಸ್ಥಾನ ಮುಂದೆ ಭಕ್ತ ಸಮೂಹದ  ನೂಕುನುಗ್ಗಲನ್ನು ನಿಯಂತ್ರಣ ಮಾಡಲು ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಿರುತ್ತಾರೆ.