ಪಂ. ವಡವಾಟಿ ಅವರಿಗೆ ರಾಜ್ಯ ಮಟ್ಟದ `ಬಿದರಿ ದತ್ತಿ ಪ್ರಶಸ್ತಿ’ ಘೋಷಣೆ

ಬೀದರ:ಆ.2:ಬಿದರಿ, ಬೀದರ ಜಿಲ್ಲೆಯ ಸಾಂಸ್ಕøತಿಕ ವೇದಿಕೆಯು ಸ್ವಾತಂತ್ರ್ಯದ ಅಮೃತ ಮಹೋತ್ಸದ ನಿಮಿತ್ತ ಇದೇ ಆಗಷ್ಟ 12ರಿಂದ 14ರ ವರೆಗೆ ಮೂರು ದಿನಗಳ ಕಾಲ ನಡೆಸಲಿರುವ ಬಿದರಿ ಉತ್ಸವ 2022ರಲ್ಲಿ ವಿಶ್ವ ವಿಖ್ಯಾತ ಕ್ಲಾರಿಯೋನೇಟ್ ವಾದಕ ಡಾ. ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿ ಘೋಷಿಸಿದೆ.

ಬಿದರಿ ಸಾಂಸ್ಕøತಿಕ ವೇದಿಕೆಯ ಸಭೆಯಲ್ಲಿ ಈ ನಿರ್ಧಾರಕ್ಕೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದು, ರಾಯಚೂರು ಜಿಲ್ಲೆಯ ಮೂಲದ ಡಾ. ಪಂಡಿತ ನರಸಿಂಹಲು ವಡವಾಟಿ ಅವರು ಕ್ಲಾರಿಯೋನೇಟ್ ವಾದ್ಯವನ್ನು ಸುಮಾರು 50 ವರ್ಷಗಳಿಂದಲೂ ನುಡಿಸುವ ಮೂಲಕ ಭಾರತದ ಉದ್ದಗಲಕ್ಕೂ ಚಿರಪರಿಚಿತರಾಗಿದ್ದು ಜೈಪುರ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು ಮೂಲತಃ ಗಾಯಕರಾಗಿದ್ದರೂ ಅಮೇರಿಕದ ಲಾಸೋನಿಲಿಸ್ ವಿಶ್ವ ವಿದ್ಯಾಲಯ 2011ರಲ್ಲಿ ನಡೆಸಿದ ಅಂತರರಾಷ್ಟ್ರೀಯ ಕ್ಲಾರಿಯೋನೇಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಮ್ಮ ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸಿದವರಾಗಿದ್ದಾರೆ.

ರಾಜ್ಯ ಮಟ್ಟದ ಮೊದಲನೇ ಬಿದರಿ ದತ್ತಿ ಪ್ರಶಸ್ತಿಯನ್ನು ಕಳೆದ ಬಾರಿ ಹಿರಿಯ ಖ್ಯಾತ ಸಂಗೀತಗಾರರಾದ ಬೀದರ್ ಜಿಲ್ಲೆಯ ಮೂಲದ ಪಂಡಿತ ವೈಕುಂಠ ದತ್ತ ಮಹಾರಾಜ ಅವರಿಗೆ ನೀಡಿ ಗೌರವಿಸಲಾಗಿತ್ತು. ಇದೀಗ ಈ ಎರಡನೇ ವರ್ಷದ ಬಿದರಿ ದತ್ತಿ ಪ್ರಶಸಿ, 15 ಸಾವಿರ ನಗದು, ಪ್ರಶಸ್ತಿ ಫಲಕ, ಗೌರವ ಸನ್ಮಾನವನ್ನು ವಿಶ್ವ ವಿಖ್ಯಾತ ಕ್ಲಾರಿಯೋನೇಟ್ ವಾದಕ ಡಾ. ಪಂಡಿತ್ ನರಸಿಂಹಲು ವಡವಾಟಿ ಅವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಬಿದರಿ ವೇದಿಕೆಯ ಅಧ್ಯಕ್ಷರಾದ ರೇಖಾ ಅಪ್ಪಾರಾವ್ ಸೌದಿ ತಿಳಿಸಿದ್ದಾರೆ.

ಬಿದರಿ ಉತ್ಸವವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರಲ್ಲಿ 3 ದಿನಗಳ ಕಾಲ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, ಜನಪದ ಗಾಯನ ಸ್ಪರ್ಧೆ, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಶ್ರೀಮತಿ ವೀಣಾಮೂರ್ತಿ ವಿಜಯ ನಿರ್ದೇಶನದ ಸ್ವಾತಂತ್ರ್ಯ ಹೋರಾಟವನ್ನು ಮೆಲಕು ಹಾಕುವಂಥ `ಅಲ್ಲೂರಿ ಸೀತಾರಾಂ ರಾಜು ಜಗತ್ ಮಾನ್ಯಂ’ ನೃತ್ಯ ರೂಪಕ ಪ್ರದರ್ಶನ, ದೇಶದ ಗಡಿಯ ರಕ್ಷಣೆಗಾಗಿ ಜೀವನವನ್ನೇ ತ್ಯಾಗ ಮಾಡಿರುವಂಥ ಯೋಧರಿಗೆ ಸನ್ಮಾನ, ಖ್ಯಾತ ಕೊಳಲು ವಾದಕ ಗಣೇಶ ಬೆಂಗಳೂರು ಅವರಿಂದ ಕೊಳಲು ಸೋಲೋ, ಮಹಿಳೆಯರಿಂದ ಒಗಟು ಒಡಪು, ವೇಶಭೂಷಣ ಸ್ಪರ್ಧೆ, ಎಸ್‍ಎಸ್‍ಎಲ್‍ಸಿ ಮಕ್ಕಳಿಗಾಗಿ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆ, ಕಲ್ಯಾಣ ಕರ್ನಾಟಕ ಭಾಗದ ಗಾಯಕರಿಂದ ಜನಪದ ಗಾಯನ ಸ್ಪರ್ಧೆ, ಜಿಲ್ಲೆಯ ನೃತ್ಯ ಹಾಗೂ ಸಂಗೀತಗಾರ, ಚಿತ್ರಕಲಾವಿದರಿಂದ ನೃತ, ಗಾಯನ ಮತ್ತು ಚಿತ್ರ ಸಮ್ಮಿಶ್ರಣದ ಕಾರ್ಯಕ್ರಮ ಅಲ್ಲದೆ ರಾಜ್ಯದ ಖ್ಯಾತ ಗಾಯಕರಿಂದ ಆಗಷ್ಟ್ 14ರಂದು ಸಂಜೆ ವಾದ್ಯ ಪರಿಕರ ಸಹಿತ ಬಿದರಿ ಸಂಗೀತ ಸಂಜೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಆಗಷ್ಟ 12ರಿಂದ 13ರ ವರೆಗೆ ನೆಹರು ಕ್ರೀಡಾಂಗಣದಲಿ ಹೊನಲು ಬೆಳಕಿನ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ಹಾಗೂ ವಾಲಿಬಾಲ್ ಸ್ಪರ್ಧೆ ಅಲ್ಲದೆ ಫುಟ್ಬಾಲ್ ಮತ್ತು ಬಾಸ್ಕೆಟ್‍ಬಾಲ್ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದಲ್ಲದೆ ಹಗ್ಗಜಗ್ಗಾಟ, ಕುರ್ಚಿ ಆಟ, ಬುಗರಿ ಆಟ, ನಿಂಬೆ ಹಣ್ಣಿನ ಆಟ ಮತ್ತಿತರ ದೇಶಿ ಕ್ರೀಡೆಗಳನ್ನೂ ನಡೆಸಲಾಗುತ್ತಿದೆ ಹೀಗೆಯೇ ಆಗಷ್ಟ 12ರಿಂದ 14ರ ವರೆಗೆ ಈ ಮೂರು ದಿನಗಳ ಕಾಲ ಸಂಗೀತ, ನಾಟಕ, ಕ್ರೀಡೆಗಳ ಹಬ್ಬವೇ ನಡೆಯಲಿದೆ.

ಸದರಿ ಕಾರ್ಯಕ್ರಮಗಳ ಅಂತಿಮ ಹಂತದ ಸಿದ್ದತೆಗಳು ನಡೆದಿದ್ದು ಜಿಲ್ಲೆಯ, ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದಲೂ ಕಲಾವಿದರು, ಪ್ರೇಕ್ಷಕರು ಆಗಮಿಸಲಿದ್ದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿದರಿ ವೇದಿಕೆಯ ಬಿದರಿ ಉತ್ಸವ ಯಶಸ್ವಿಗೊಳಿಸುವಂತೆ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.