ಪಂ. ಪುಟ್ಟರಾಜ ಸೇವಾ ಸಮಿತಿ  ಜಿಲ್ಲಾ ಅಧ್ಯಕ್ಷರಾಗಿ‌ ಸೌಮ್ಯ ಸತೀಶ್ ನೇಮಕ

ದಾವಣಗೆರೆ. ಏ.೨೯; ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಸೌಮ್ಯ ಸತೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವೇ. ಚನ್ನವೀರ ಸ್ವಾಮಿ ಹಿರೇಮಠ ತಿಳಿಸಿದ್ದಾರೆ.ಡಾ. ಪಂ. ಪುಟ್ಟರಾಜರ ಜೀವನ ಸಾಧನೆ ಸಂದೇಶವನ್ನು ಮತ್ತು ಅವರ ಸಾಹಿತ್ಯ ಪ್ರಚಾರ ಮತ್ತು ಪ್ರಸಾರದೊಂದಿಗೆ ಭಕ್ತಿ ಪಂಥದ ಕವಿ, ಗಾಯಕರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಗುರು ಸೇವೆ ಮಾಡುವ ಭಾಗ್ಯ ತಮ್ಮ ಪೂರ್ವ ಜನ್ಮದ ಸುಕೃತವೆಂದು ಭಾವಿಸಿ ಫಲಾಪೇಕ್ಷರಹಿತವಾಗಿ ಪ್ರಾಂಜಲ ಮನಸ್ಸಿನಿಂದ ಗುರುವಿಗೆ ಸೇವೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.