ಪಂ. ದೀನದಯಾಳ್ ಜನ್ಮದಿನಾಚರಣೆ


ಹುಬ್ಬಳ್ಳಿ ಸೆ 26 ; ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯ ಪರಿಕಲ್ಪನೆಯ ಹರಿಕಾರ, ಪ್ರಖರ ರಾಷ್ಟ್ರವಾದಿ, ಮಹಾನ್ ಚಿಂತಕ ಹಾಗೂ ಮಾರ್ಗದರ್ಶಕರಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯ ವಾರ್ಡ್ ನಂಬರ್ 34 ರ ರೂಗಿ ಬಿಲ್ಡಿಂಗ್ ನಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಲ್ಲಣ್ಣವರ್ ಗುರೂಜಿ, ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನ ಚರಿತ್ರೆವನ್ನು ಸ್ಪಷ್ಟವಾಗಿ ತಿಳಿಹೇಳಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಜಾದವ್ ಅವರು ಪ್ರತಿಜ್ಞಾ ಬೋಧನೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಮಂಡಿಸಿದರು.
ಈ ಸಂದರ್ಭದಲ್ಲಿ ಗುರುಸಿದ್ದಪ್ಪ ಅಂಗಡಿ, ಶಂಕರ್ ಭುಜನವರ್ , ಅಕ್ಷತಾ ರವಿಕುಮಾರ್ ರೂಗಿ, ರೂಪ ಬೊಂಗಾಳೆ, ಹುಚ್ಚಪ್ಪ ರೂಗಿ, ನಾಗಪ್ಪ ಹೆಗಡಲ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ವಂದನಾರ್ಪಣೆಯನ್ನು ಜಗದೀಶ್ ಬಟ್ಟೂರ್ ರವರು ನೆರವೇರಿಸಿದರು.