ಪಂಬಾಜ್ ಸಿಎಂ- ರಾಜ್ಯಪಾಲರ ತಿಕ್ಕಾಟ: ಹೆಲಿಕ್ಯಾಪ್ಟರ್ ಬಳಸದಿರಲು ಶಪಥ

ಚಂಡಿಗಡ,ಜೂ.21- ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯಪಾಲ ಭನ್ವರಿ ಲಾಲ್ ಪುರೋಹಿತ್ ನಡುವೆ ಮಾತಿನ ಚಕಮಕಿ,ಲೇವಡಿ ನಡೆದಿದ್ದು ತಾವು ಪಂಜಾಬ್‍ನಲ್ಲಿ ರಾಜ್ಯಪಾಲರಾಗಿರುವ ತನಕ ಹೆಲಿಕ್ಯಾಪ್ಟರ್ ಬಳಸುದಿಲ್ಲ ಎಂದು ಶಪಥ ಮಾಡಿದ್ದಾರೆ.

ರಾಜ್ಯಪಾಲರು ತುಂಬಾ ಪ್ರೇಮ ಪತ್ರಗಳನ್ನು ಬರೆಯುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ನನ್ನನ್ನು ಲೇವಡಿ ಮಾಡಿದ್ದಾರೆ. ರಾಜ್ಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆಯುವ ಹಕ್ಕು ರಾಜ್ಯಪಾಲರಿಗೆ ಇದೆ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗಿನ ತಿಕ್ಕಾಟದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ರಾಜ್ಯಪಾಲ ಭನ್ವರಿ ಲಾಲ್ ಪುರೋಹಿತ್, ರಾಜ್ಯಪಾಲರಾಗಿ ನಾನು ಮುಖ್ಯಮಂತ್ರಿಗಳ ವೈಯಕ್ತಿಕ ವಿವರಗಳನ್ನು ನಾನು ಕೇಳಿಲ್ಲ. ಸಂವಿಧಾನ ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅವರು ನನ್ನ ಎಲ್ಲಾ ಪತ್ರಗಳಿಗೆ ಉತ್ತರಿಸಬೇಕು ಎಂದು ಖಡಕ್ ಆಗಯೇ ತಿರುಗೇಟು ನೀಡಿದ್ದಾರೆ.

ಹೆಲಿಕ್ಯಾಪ್ಟರ್ ಬಳಸುವುದಿಲ್ಲ

ಮುಖ್ಯಮಂತ್ರಿಗಳು ತಮಗೆ ಹೆಲಿಕಾಪ್ಟರ್ ನೀಡಲಾಗಿದೆ ಎಂದು ಹೇಳಿದ್ದಾರೆ. ಹೆಲಿಕ್ಯಾಪ್ಟರ್ ಅನ್ನು ಅಧಿಕೃತ ಕರ್ತವ್ಯಕ್ಕಾಗಿ ಬಳಸಿದ್ದೇನೆ ಹೊರತು ವೈಯಕ್ತಿಕ ಬಳಕೆಗಾಗಿ ಅಲ್ಲ ಎಂದು ತಿಳಿಸಿದ್ದಾರೆ.

ತಾವು ಹೆಲಿಕ್ಯಾಪ್ಟರ್ ಬಳಿಸಿದ ಸಂದರ್ಭದಲ್ಲಿ ಪಂಜಾಬ್ ಅಧಿಕಾರಿಗಳೂ ನನ್ನ ಜೊತೆಗಿದ್ದ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.ಅದು ಸರ್ಕಾರದ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

ರಾಜ್ಯಪಾಲನಾಗಿ ಪಂಜಾಬ್‍ನಲ್ಲಿರುವವರೆಗೂ ಪಂಜಾಬ್ ಸರ್ಕಾರದ ಹೆಲಿಕಾಪ್ಟರ್ ಬಳಸುವುದಿಲ್ಲ ಎಂದು ಈಗ ಘೋಷಿಸಿದ್ದೇನೆ. ಅದಕ್ಕೆ ಬದ್ದನಾಗಿದ್ದೇನೆ. ರಾಜ್ಯ ಸರ್ಕಾರದ ಲೋಪದೋಷಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರಗಳಿಗೆ ಅವರು ಸಂವಿಧಾನದ ಚೌಕಟ್ಟಿನಲ್ಲಿ ಉತ್ತರ ಕೊಡಲೇ ಬೇಕು ಎಂದಿದ್ದಾರೆ.