ಪಂಪ್‍ಸೆಟ್ ಕಳ್ಳರ ಬಂಧನ

ವಿಜಯಪುರ: ಮಾ.31:ನೀರಿನ ಶುದ್ಧೀಕರಣ ಘಟಕದಲ್ಲಿನ ಮೋಟಾರ್ ಪಂಪ್ ಸೆಟ್‍ಗಳನ್ನು ಕಳ್ಳತನಗೈದಿರುವ ಕಳ್ಳರನ್ನು ಪೆÇಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ.
ರಸೂಲ್ ಸವಡಿ, ಸುನೀಲ್ ಮೇಣಸಗಿ, ವಿಜಯ ಪಂಚಂಪಾಟೀಲ ಬಂಧಿತರು. ದೇವರಹಿಪ್ಪರಗಿಯಲ್ಲಿ 17 ಪಂಪ್ ಸೆಟ್‍ಗಳನ್ನು ಕಳ್ಳತನ ಮಾಡಿದ್ದರು. ಪೆÇಲೀಸರು ತನಿಖೆಗೈದು ಆರೋಪಿಗಳನ್ನು ಬಂಧಿಸಿ 9.10 ಲಕ್ಷ ಮೌಲ್ಯದ 17 ಪಂಪ್ ಸೆಟ್, ಒಂದು ಕ್ರೂಜರ್ ಜಪ್ತಿಗೈದಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ