ಪಂಪ್‍ಸೆಟ್‍ಗಳ ಆರ್‍ಆರ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಲು ಸೂಚನೆ

ಕಲಬುರಗಿ,ಆ.19:ಎಲ್ಲಾ ವಿದ್ಯುತ್ ಕಂಪನಿಗಳು ಐಪಿ ಪಂಪ್‍ಸೆಟ್‍ಗಳ ಆರ್‍ಆರ್ ಸಂಖ್ಯೆಗೆ ಮಾಲೀಕರ ಆಧಾರ ಸಂಖ್ಯೆ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿದ್ದು, ಇದರಿಂದ 10 ಹೆಚ್.ಪಿ.ಒಳಗಿನ ಎಲ್ಲಾ ಐಪಿ ಸೆಟ್ ಹೊಂದಿರುವವರ ಮಾಹಿತಿಯು ವಿದ್ಯುತ್ ಕಂಪನಿಗಳಿಗೆ ಸಿಗಲಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಕೃಷಿ ಬಳಕೆಯ 10 ಹೆಚ್.ಪಿ.ಒಳಗಿನ ಪಂಪ್‍ಸೆಟ್‍ಗಳ ಆರ್‍ಆರ್ ಸಂಖ್ಯೆಗೆ ಮಾಲೀಕರಾದವರ ಆಧಾರ ಸಂಖ್ಯೆಯನ್ನು ಜೋಡಣೆ ಮಾಡುವುದನ್ನು ರಾಜ್ಯದ ಎಲ್ಲಾ ವಿದ್ಯುತ್ ಕಂಪನಿಗಳು ಆರಂಭಿಸಿದ್ದು, ಇದರಿಂದ ಕೃಷಿ ಪಂಪಸೆಟ್‍ಗಳ ನಿಖರತೆ, ಒದಗಿಸಲಾಗುವ ಅನುದಾನ ಅರಿಯುವ ಕೆಲಸಕ್ಕೆ ಜೆಸ್ಕಾಂ ಮುಂದಾಗಿದೆ.

ಒಂದು ವೇಳೆ ಜೋಡಣೆಯಾಗದಿದ್ದಲ್ಲಿ, ಮುಂದಿನ ದಿನಗಳಲ್ಲಿ ಆಧಾರ ಸಂಖ್ಯೆ ಜೋಡಣೆಯಾಗದೆ ಇರುವ ಐಪಿ ಪಂಪಸೆಟ್ ಸ್ಥಾವರಗಳಿಗೆ ಸರ್ಕಾರವು ಅನುದಾನ ಒದಗಿಸಲಾಗುವುದಿಲ್ಲವೆಂದು ಹೇಳಿರುವ ಹಿನ್ನಲೆಯಲ್ಲಿ ಎಲ್ಲಾ ಜೆಸ್ಕಾಂಗಳಲ್ಲಿ ಆಧಾರ್ ಸಂಖ್ಯೆ ಜೋಡಣೆ ಕಾರ್ಯವು ಚುರುಕಾಗಿದೆ.

ಹಾಗಾಗಿ ಜೆಸ್ಕಾಂ ಇಲಾಖೆಯ ಅಡಿಯಲ್ಲಿ ಪಂಪ್ ಸೆಟ್‍ಗಳ ಆರ್‍ಆರ್ ನಂಬರ್ ಹೊಂದಿರುವ ಎಲ್ಲಾ ಮಾಲೀಕರು ಕೂಡಲೇ ಹತ್ತಿರದ ಪವರ್‍ಮ್ಯಾನಗಳ ಹಾಗೂ ಶಾಖಾಧಿಕಾರಿಗಳು ಮತ್ತು ಮೇಲ್ವಿಚಾರಕರನ್ನು ಸಂಪರ್ಕಿಸಿ ಪಂಪಸೆಟ್‍ಗಳ ಆರ್‍ಆರ್ ಸಂಖ್ಯೆಗೆ ಆಧಾರ್‍ಸಂಖ್ಯೆ ಜೋಡಣೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.