ಪಂಪನ ಕೊಲೆಯ ಸುತ್ತಾ…

ಸಾಹಿತ್ಯಪ್ರೇಮಿ. ಕನ್ನಡ ಪ್ರಾಧ್ಯಾಪಕ ಪಂಚಳ್ಳಿ ಪರಶಿವಮೂರ್ತಿ  –  ಪಂಪ ಚಿತ್ರದ ಮೂಲಕ  ಹಿರಿಯ ನಿರ್ದೇಶಕ ಎಸ್.ಮಹೇಂದರ್  ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಕೀರ್ತಿಭಾನು ಪ್ರೊಫೆಸರ್ ಪಂಪನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೆಲರ್ ಹಾಗೂ ಹಾಡಿನ ಪ್ರದರ್ಶನವಿತ್ತು.

ಪ್ರೊಫೆಸರ್ ಪಂಪನ ಹತ್ಯೆ ನಡೆದ ನಂತರ ನಡೆಯುವ ಕುತೂಹಲಕಾರಿ ಘಟನೆಗಳೇ ಚಿತ್ರದ ಕಥಾವಸ್ತು. ಯಾರ ಮನಸ್ಸನ್ನೂ ನೋಯಿಸದ, ಪಂಪರನ್ನು ಕೊಲೆ ಮಾಡುವಷ್ಟು ದ್ವೇಷ ಯಾರಿಗಿತ್ತು ಹತ್ಯೆಯ ಹಿಂದೆ ಯಾವ ಹಿತಾಸಕ್ತಿಗಳು ಕಾರ್ಯ ನಿರ್ವಹಿಸಿದ್ದವು ಎನ್ನುವ ತಿರುಳು ಒಳಗೊಂಡಿದೆ.

ನಿರ್ದೇಶಕ ಮಹೇಂದರ್ ಮಾತನಾಡಿ,ಇದುವರೆಗೂ ತೆರೆಮೇಲೆ ಹೇಳಿದರದ  ಹಲವಾರು ವಿಚಾರಗಳನ್ನು ಈ ಚಿತ್ರದಲ್ಲಿ ತಂದಿದ್ದೇವೆ. ಚಿತ್ರದ ಫಸ್ಟ್ ಫ್ರೇಮ್‌ನಿಂದ ಲಾಸ್ಟ್ ಫ್ರೇಮ್‌ವರೆಗೆ ಸಂಗೀತವೇ ನೋಡಿಸಿಕೊಂಡು ಹೋಗುತ್ತದೆ. ಮರ್ಡರ್ ಮಿಸ್ಟರಿ ಜೊತೆಗೆ ಅದ್ಭುತವಾದ ಲವ್‌ಸ್ಟೋರಿ ಕೂಡ ಚಿತ್ರದಲ್ಲಿದೆ. ಬೆಂಗಳೂರು, ತೀರ್ಥಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದರು.

ಸಂಗೀತ  ನಿರ್ದೇಶಕ  ಹಂಸಲೇಖ ಮಾತನಾಡಿ ಚಿತ್ರದಲ್ಲಿ ಕ್ರಾಂತಿಕಾರಿ ವಿಷಯಗಳಿವೆ. ಒಳ್ಳೆಯ ಸಿನಿಮಾಗಳು ಗೆಲ್ಲಬೇಕು, ೪ ವರ್ಷಗಳ ಹಿಂದೆ ಹುಟ್ಟಿದ ಕಥೆಯಿದು. ಸಂಗೀತದ ಜತೆಗೆ ಸಾಹಿತ್ಯವೂ ಪಂಪನಿಗೆ ಪೂರಕವಾಗಿ ಬಂದಿದೆ ಎಂದರು. ನಿರ್ಮಾಪಕ ಲಕ್ಷಿಕಾಂತ್ ಮಾತನಾಡಿ ಕನ್ನಡದ ಬಗ್ಗೆ ಒಂದು ಸಿನಿಮಾ ಮಾಡಬೇಕೆನ್ನುವುದು  ೨೦ ವರ್ಷಗಳ ಕನಸು. ಅದನ್ನು ಹಂಸಲೇಖಾರ ಬಳಿ ಹೇಳಿದಾಗ ಮಹೇಂದರ್ ಅವರನ್ನು ಪರಿಚಯಿಸಿದರು ಎಂದು ಹೇಳಿದರು.

ನಾಯಕಿ ಸಂಗೀತಾ ಮಾತನಾಡಿ , ಚಿತ್ರದಲ್ಲಿ  ಬ್ಯೂಟಿ ಇತ್ತು, ನಿರ್ದೇಶಕರ ಜೊತೆ ವರ್ಕ್ ಮಾಡಿದ್ದೇ ನನ್ನ ಅದೃಷ್ಟ ಎಂದರು. ರಮೇಶ್‌ಬಾಬು ಛಾಯಾಗ್ರಹಣ, ಮೋಹನ್ ಕಾಮಾಕ್ಷಿ ಸಂಕಲನವಿದೆ. ಸಂಗೀತಾ, ರಾಘವ್ ನಾಯಕ್, ಅರವಿಂದ್, ಆದಿತ್ಯಶೆಟ್ಟಿ, ರೇಣುಕಾ, ರವಿಭಟ್, ಶ್ರೀನಿವಾಸಪ್ರಭು ತಾರಾಬಳಗದಲ್ಲಿದ್ದಾರೆ ಸದ್ಯದಲ್ಲೇ ತೆರೆಗೆ ಬರಲಿದೆ.