ಪಂಢರಾಪುರ: 29ರಿಂದ ಋಗ್ವೇದ-ಯಜುರ್ವೇದ ಸಂಹಿತಾ ಹೋಮ

ಕಲಬುರಗಿ:ಡಿ.27: ಶ್ರೀ ಸುಶಮೀಂದ್ರತೀರ್ಥ ವೇದ ವಿದ್ಯಾರ್ಥಿ ಸಂಘದ ವತಿಯಿಂದ ಡಿ. 29ರಿಂದ 31ರವರೆಗೆ ಮಹಾರಾಷ್ಟ್ರದ ಸುಪ್ರಸಿದ್ಧ ತೀರ್ಥಕ್ಷೇತ್ರ ಪಂಢರಾಪುರದಲ್ಲಿ ಲೋಕ ಕಲ್ಯಾಣಾರ್ಥ ಋಗ್ವೇದ ಮತ್ತು ಯಜುರ್ವೇದ ಸಂಹಿತಾ ಹೋಮ ಹಾಗೂ ಇತರ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪಂಢರಾಪುರದ ಸಂಗೋಳ ರಸ್ತೆಯಲ್ಲಿರುವ ಪಲಿಮಾರು ಮಠದ ಶ್ರೀರಾಮಧಾಮದಲ್ಲಿ ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಸುಶಮೀಂದ್ರತೀರ್ಥ ವೇದ ವಿದ್ಯಾರ್ಥಿ ಸಂಘ ಹಮ್ಮಿಕೊಂಡಿರುವ 7ನೇ ವರ್ಷದ ಕಾರ್ಯಕ್ರಮ ಇದಾಗಿದೆ.
ಮೂರು ದಿನಗಳಂದು ಬೆಳಿಗ್ಗೆ 7ರಿಂದ 8ರವರೆಗೆ ಸಾಮೂಹಿಕ ಅಷ್ಟೋತ್ತರ ಪಾರಾಯಣ ನಡೆಯಲಿದೆ. 29ರಂದು ಬೆಳಿಗ್ಗೆ ಪ್ರಾರ್ಥನೆ, ಗೋಪೂಜೆ, ಗಂಗಾಪೂಜೆ, ಕಳಸ ಸ್ಥಾಪನೆ, ಶ್ರೀ ಸುವಿದ್ಯೇಂದ್ರತೀರ್ಥರಿಂದ ಪ್ರವಚನ, ಸಂಸ್ಥಾನ ಪೂಜೆ, ಭಕ್ತರಿಗೆ ತೀರ್ಥಪ್ರಸಾದ, ಅನ್ನಸಂತರ್ಪಣೆ, ಸಂಜೆ ಶ್ರೀಗಳಿಂದ ಪ್ರವಚನ, ರಾಯಚೂರಿನ ಶ್ರೀ ರಾಘವ ನಾಟ್ಯಾಮೃತ ಕಲಾನಿಕೇತನದ ಶ್ರೇಯಸ್ ಆರ್. ಜೋಶಿ ತಂಡದವರಿಂದ ಭರತನಾಟ್ಯ, ಖ್ಯಾತ ಗಾಯಕ ಶೇಷಗಿರಿದಾಸ್ ರಾಯಚೂರು ಮತ್ತು ತಂಡದಿಂದ `ದಾಸವಾಣಿ’ ನಡೆಯಲಿದೆ.
30ರಂದು ಅರಣಿಮಥನ, ಹೋಮ ಪ್ರಾರಂಭ, ಶ್ರೀಗಳಿಂದ ಪ್ರವಚನ, ಪೂಜೆ, ಸಂಜೆ 5 ಗಂಟೆಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಖ್ಯಾತ ಗಾಯಕರಾದ ಬಾಗಲಕೋಟೆಯ ಅನಂತ ಕುಲಕರ್ಣಿ ಅವರಿಂದ “ದಾಸನಮನ”, ಡಿ. 31ರಂದು ಬೆಳಿಗ್ಗೆ ಹೋಮದ ಮುಂದುವರಿಕೆ, ಪೂರ್ಣಾಹುತಿ, ಶ್ರೀಗಳಿಂದ ಆಶೀರ್ವಚನ, ಪೂಜೆ, ಭಕ್ತರಿಗೆ ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೃತಾರ್ಥರಾಗಬೇಕೆಂದು ಶ್ರೀ ಸುಶಮೀಂದ್ರತೀರ್ಥ ವೇದ ವಿದ್ಯಾರ್ಥಿಗಳ ಸಂಘದ ಶ್ರೀಕಾಂತಾಚಾರ್ಯ ಬೆಂಗಳೂರು ಹಾಗೂ ಪದ್ಮನಾಭ ಆಚಾರ್ಯ ಬಾಡದ ಕೋರಿದ್ದಾರೆ.