ಪಂಢರಪುರದ ಪ್ರಸಿದ್ಧ ಕಲಾವಿದರಿಂದ ಚಕ್ರ ಭಜನೆ

ಸೇಡಂ,ಮೇ,05: ಇಲ್ಲಿನ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಪಂಢರಪುರದ ಪ್ರಸಿದ್ಧ ಕಲಾವಿದ ತಂಡದಿಂದ ಚಕ್ರ ಭಜನೆ ಕಾರ್ಯಕ್ರಮ ಜರುಗಿತು. ಈ ವೇಳೆಯಲ್ಲಿ ಗುರುಬಾಬಾ ಮಹಾರಾಜು ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಶಿವಶಂಕ್ರಯ್ಯ ಶಿವಾಚಾರ್ಯರು ಶ್ರೀ ಪಂಚಾಕ್ಷರಿ ಸ್ವಾಮೀಜಿ, ಬಸವರಾಜ್ ಪಾಟೀಲ್ ಸೇಡಂ, ರಮೇಶ್ ಮಾಲಪಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.