ಪಂಡಿತ್ ಮಠಂ ಗುರುಪ್ರಸಾದ್ಪಂಚಾಂಗ ಬಿಡುಗಡೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,10- ನಗರದ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ನಿನ್ನೆ ಸಂಜೆ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ  ಹಾಗೂ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ.  ಮಠಂ ಗುರುಪ್ರಸಾದ್ ಅವರು ರಚಿಸಿದ ಪಂಚಾಂಗವನ್ನು ಕೊಕ್ಕರಚೇಡಿನ ಶರಣಮ್ಮ  ಬಿಡುಗಡೆ ಮಾಡಿದರು.
ಪಂಚಾಂಗ ಪಠಣವನ್ನು ಪಂಡಿತ್ ಗುರುಪ್ರಸಾದ್ ಅವರು ಮಾಡಿದರು. 2024-2025 ನೇ ವರ್ಷವು ಸಮ್ಮಿಶ್ರ ಫಲಗಳನ್ನು ನೀಡುತ್ತಿದ್ದು,ಅತಿ ವೃಷ್ಟಿ,
ಅನಾವೃಷ್ಟಿ,ಭೂಕಂಪಗಳು ಉಂಟಾಗುತ್ತವೆ.ಬೆಲೆಗಳು ಹೆಚ್ಚಾಗುತ್ತವೆ.ಯುದ್ಧಗಳು ಸಂಭವಿಸಿ,ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅಶಾಂತಿ ತಲೆದೋರಲಿದೆ ಎಂದು ಮಠಂ ಗುರುಪ್ರಸಾದ್ ಹೇಳಿದರು.
ಕೊಕ್ಕರಚೇಡು ಶ್ರೀ ಶಂಕರಾನಂದ ಗಿರಿ ಗುರು ಸೇವಾಶ್ರಮದ ಮಾತಾಜಿ, ಶರಣಮ್ಮ ಮಾತನಾಡಿ, ಭಾರತೀಯ‌ ಪರಂಪರೆಯಲ್ಲಿ ಪಂಚಾಂಗ ಶ್ರವಣದಿಂದ ಶ್ರೇಯಸ್ಸು ಲಭಿಸುತ್ತದೆ.ಪ್ರತಿ ವ್ಯಕ್ತಿಯು ತನ್ನ ರಾಶಿ‌ ಫಲವನ್ನು ತಿಳಿಯುವುದರಿಂದ ಜಾಗರೂಕತೆಯಿಂದ ಜೀವನ ಸಾಗಿಸಲು ಅನುಕೂಲ ವಾಗುವುದೆಂದರು.
ಎಸ್.ಕೆ.ಆರ್.ಜೀಲನ್ ಬಾಷಾರ ಶ್ರೀಲಕ್ಷ್ಮೀ ಕಲಾ ಟ್ರಸ್ಟ್ ನ ವಿಧ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು.
ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ. ಹೆಚ್. ಎಂ. ಬಸವರಾಜ್ , ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ , ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಅಧ್ಯಕ್ಷ ಶೀಲ ಬ್ರಹ್ಮಯ್ಯ, ನಿವೃತ್ತ ಶಿಕ್ಷಕರಾದ ಸಿದ್ದಲಿಂಗಪ್ಪ, ಎಂ.ಟಿ.ಮಲ್ಲೇಶ್, ಎಪಿಎಂಸಿಯ ರಾಮಚಂದ್ರ, ಯಶವಂತರಾಜ್ ನಾಗೀರೆಡ್ಡಿ ಪೂಜಾರಿ ಗಾದೆಪ್ಪ ಮೊದಲಾದವರು ಇದ್ದರು.