ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 109ನೇ ಜಯಂತಿ

ಗುರುಮಠಕಲ್:ಮಾ.23: ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಅಂದ ಅನಾಥ ಧೀನದಲಿತರಿಗೆ ಆತ್ಮ ವಿಶ್ವಾಸವನ್ನು ನೀಡಿದ್ದಾರೆ. ಕಾವ್ಯಗಳನ್ನು ರಚಿಸಿ ಕವಿ ಯಾಗಿರುವಂತೆಯೇ ಅವರು ಗಾನವಿಶಾರದರೂ ಆಗಿದ್ದರು. ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ ದಿಗ್ಗಜರಲ್ಲಿ ಅಗ್ರ ಗಣ್ಯರಾಗಿದ್ದರು ಅವರು ಕಠ ಸಂಗೀತ ಮತ್ತು ವಾದ್ಯ ಸಂಗೀತಗಳೆರಡರಲ್ಲಿಯೂ ನೈಪುಣ್ಯವನ್ನು ಸಾಧಿಸಿದ್ದರು. ಸಾವಿರಾರು ಅಂದ ಅನಾಥ ಮಕ್ಕಳ ತಾಯಿಯಾಗಿದ್ದರು ಅವರ ಮಾತೃ ವಾತ್ಸಲ್ಯ ಸ್ಮರಣೀಯ ವಾಗಿತ್ತು ಎಂದು ರೇವಣ ಸಿದ್ದಯ್ಯ ಹಿರೇಮಠ ಕಲ್ಲೂರು ಅಭಿಪ್ರಾಯ ಪಟ್ಟರು. ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ದಿನಾಂಕ 19-03-2023 ರವಿವಾರ ದಂದು ಶ್ರೀ ರಾಚಪಯ್ಯ ಕಡ್ಲಪಯ ದೇವಸ್ಥಾನದ ಆವರಣದಲ್ಲಿ ಡಾಕ್ಟರ್ ಪಂಡಿತ್ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 109 ನೇ ಜಯಂತಿಯ ನಿಮಿತ್ತ ಸಂಗೀತ ನೃತ್ಯ ಹಾಗೂ ಜ್ಞಾನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರೇಮಠ ಅವರು ರಾಗದಿಂದ ಹಾಡಿದರೆ ಜನರ ಮನಸ್ಸನ್ನು ಗೆಲ್ಲಬಹುದು ಆದರೆ ಅನುರಾಗದಿಂದ ಹಾಡಿದಾಗ ಮಾತ್ರ ಸಾಕ್ಷಾತ್ ಭಗವಂತನನ್ನು ಗೆಲ್ಲಬಹುದು ಅಂತಹ ಶಕ್ತಿ ಕೇವಲ ಸಂಗೀತಕ್ಕೆ ಮಾತ್ರ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಾರಾಯಣ ಪೇಟ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಜಯ ಅಕ್ಕನವರು ಮಾತನಾಡಿದರು. ಪ್ರಾಸ್ತಾವಿಕವಾಗಿ ಶಾಂತವೀರಯ್ಯ ಸ್ವಾಮಿ ಪತ್ರಿಮಠ ಗಾಜರಕೋಟ ಮಾತನಾಡಿದರು. ಮೆಹಬೂಬ್ ನಗರದ ಕೆ.ಬಿ. ಅನಸೂಯಾ ಅಕ್ಕನವರು ಮಾತನಾಡಿದರು. ಬೆನಕನಹಳ್ಳಿ ಶ್ರೀ ಸಿದ್ಧಲಿಂಗೇಶ್ವರ ವಿರಕ್ತಮಠ ಬಾಲ ತಪೆÇೀನಿಧಿ ಶ್ರೀ ಕೇದಾರನಾಥ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸ್ಪೂರ್ತಿ ಡ್ಯಾನ್ಸ್ ಅಕಾಡೆಮಿಯ ಶಾಂಭವಿ ಮತ್ತು ಖುಷಿ ರೆಡ್ಡಿ ಅವರ ಭರತನಾಟ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಇದೇ ಅಕಾಡೆಮಿಯ ನಿರ್ದೇಶಕಿ ಶ್ವೇತಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಡಿತ್ ಪುಟ್ಟರಾಜ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಭಾಗರೆಡ್ಡಿ ಗಾಜರಕೋಟ. ಸೋಮಶೇಖರಪ್ಪ ಸಜ್ಜನ್. ಶರಣಯ್ಯ ಸ್ವಾಮಿ ಪತ್ರಿಮಠ. ಶಿವಲಿಂಗ ರೆಡ್ಡಿ ಪೆÇಲೀಸ್ ಪಾಟೀಲ್.ಗೌರಿಶಂಕರ ಅರುಣಿ. ಬಸರೆಡ್ಡಿ. ರೇವಣ
ಸಿದ್ದಯ್ಯ ಹಿರೇಮಠ. ಎಸ್ ಡಿ ಎಮ್ ಸಿ ಅಧ್ಯಕ್ಷರು ಕಾಶಪ್ಪ ಮುಷ್ಟಿ ಪಲ್ಲಿ. ಶರಣು ಕುಮಾರ ವಠಾರ ಯಾದಗಿರಿ.ರಾಜಲಿಂಗಪ್ಪ ಸಜ್ಜನ್ ಚಂಡ್ರಿಕಿ . ದಯಾನಂದಯ್ಯ ಸ್ವಾಮಿ ಕಲ್ಲೂರು ಹಾಗೂ ಸಾರ್ವಜನಿಕರು ಇದ್ದರು.