ಪಂಡಿತ್ ಪುಟ್ಟರಾಜರ ಜಯಂತ್ಯೋತ್ಸವ ಆಚರಣೆ

ನರೇಗಲ್ಲ,ಮಾ4 : ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳು ನಾಡಿನ ಅಂಧ, ಅನಾಥ, ಅಂಗವಿಕಲರಿಗೆ ಆಶ್ರಯ ನೀಡಿ ಸಂಗೀತ ವಿದ್ಯೆ, ಪ್ರಸಾದ ನೀಡಿ ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಿದ್ದಾರೆ. ರಾಜ್ಯ ದೇಶದಾದ್ಯಂತ ಇಂದು ಗವಾಯಿಗಳವರ ಶಿಷ್ಯ ಬಳಗ ಹಿರಿಯ ಕಲಾವಿದರಾಗಿ ಸಂಗೀತ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.

ಪಂಡಿತ್ ಡಾ. ಪುಟ್ಟರಾಜ ಗವಾಯಿಗಳ 109 ನೇ ಜಯಂತ್ಯೋತ್ಸವದಲ್ಲಿ ಅವರು ಮಾತನಾಡಿದರು.

ಪ.ಪಂ ಸದಸ್ಯ ಕುಮಾರಸ್ವಾಮಿ ಕೋರಧ್ಯನಮಠ,ಪ.ಪಂ ಸದಸ್ಯ ವೀರಪ್ಪ ಜೋಗಿ, ಪ.ಪಂ ಸದಸ್ಯ ಮತ್ತಪ್ಪ ನೂಲ್ಕಿ, ಜಗದೀಶ್ ಬಂಡಿವಡ್ಡರ,ಮಂಜುನಾಥ ಕಡೆತೋಟದ,ಕಾರ್ಯಕ್ರಮದಲ್ಲಿ ನರೇಗಲ್ಲನ ಗುರುಮಾತೆಯರು ಹಾಗೂ ಗುರುಹಿರಿಯರು ಪಾಲ್ಗೊಂಡಿದ್ದರು.