ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಸರಳ ಜೀವಿ

ಕೆಂಭಾವಿ:ಸೆ.26:ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರು ಸರಳ ಜೀವಿಯಾಗಿದ್ದು ಬಿಜೆಪಿಗೆ ಭದ್ರ ಬುನಾದಿ ಹಾಕಿದ ಧೀಮಂತ ನಾಐಕರಲ್ಲಿ ಅವರು ಒಬ್ಬರು ಎಂದು ಸಂಪನ್ಮೂಲ ವ್ಯಕ್ತಿ ಯಲ್ಲಯ್ಯ ನಾಐಕ ಹೇಳಿದರು.

ಪಟ್ಟಣದ ಸಿದ್ದೇಶ್ವರ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಶಹಾಪುರ ಗ್ರಾಮೀಣ ಮಂಡಲದ ವತಿಯಿಂದ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ 105 ನೆ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ದೀನ್ ದಯಾಳ ಅವರು ಉತ್ತಮ ಲೇಖಕ, ಪತ್ರಕರ್ತ, ರಾಜಕಾರಣಿ, ಭಾಷಣಕಾರರಾಗಿದ್ದರು. ತಮ್ಮ ಜೀವನದುದ್ದಕ್ಕೂ ದೇಶ, ಜನ, ದೇಶದ ಘನತೆಯನ್ನು ಎತ್ತಿ ಹಿಡಿಯುವ ಬಗ್ಗೆ ಚಿಂತನೆ ನಡೆಸಿದರು. ಸ್ನೇಹಶೀಲರು, ಚಿಂತನಾಶೀಲರಾಗಿದ್ದ ನಿಸ್ವಾರ್ಥ ನಾಯಕನ ತತ್ವ ಸಿದ್ದಾಂತವನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡಯಬೇಕು ಎಂದು ತಿಳಿಸಿದರು.

ಶಹಾಪುರ ಗ್ರಾಮೀಣ ಮಂಡಲದ ಅಧ್ಯಕ್ಷ ರಾಜುಗೌಡ ಪಾಟೀಲ ಉಕ್ಕನಾಳ ಮಾತನಾಡಿ, ದೀನ್ ದಯಾಳ ಉಪಾಧ್ಯಾಯ ನಮಗೆ ಅಪಾರ ಸೈದ್ದಾಂತಿಕ ಭಂಡಾರವನ್ನು ಬಿಟ್ಟು ಹೋಗಿದ್ದಾರೆ. ಅವರ ಆದರ್ಶ ರಾಜಕಾರಣದ ಹಾದಿಯಲ್ಲಿ ನಾವೆಲ್ಲ ಮುನ್ನೆಡೆದು ಅವರ ಕನಸುಗಳನ್ನು ಈಡೇರಿಸುವ ಜವಾಬ್ಧಾರಿಯನ್ನು ಹೊತ್ತುಕೊಳ್ಳೊಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಯುವ ಮುಖಂಡರಾದ ಶ್ರೀನಿವಾಸರೆಡ್ಡಿ ಯಾಳಗಿ, ಸಿದ್ದರಾಮಪ್ಪ ಕುಂಬಾರ, ಶರಣು ಮಂಡಗಳ್ಳಿ, ಭೀಮರಾಯ ಭಂಡಾರಿ, ಭೀಮರೆಡ್ಡಿ ರಾಜಪುರ, ದೇವೇಂದ್ರ ಬೆನಕನಹಳ್ಳಿ, ಸುರೇಶಬಾಬು ಹೊಸಮನಿ, ರೇವಣಸಿದ್ದಪ್ಪ ಮಾವಿನಕಟ್ಟಿ, ಸಂಗಣ್ಣ ತುಂಬಗಿ, ಬಸವರಾಜ ಸೊನ್ನದ, ವಿಕಾಸ ಸೊನ್ನದ, ತಾಹೇರಪಾಶಾ ಖಾಜಿ, ಸದ್ದಾಂ ಕೆಕೆಎನ್, ಉಮೇಶರೆಡ್ಡಿ, ಭಾಗ್ಯಶ್ರೀ ಕರಣಗಿ, ಶೋಭಾ ಮಾಲಗತ್ತಿ, ಪರಮಣ್ಣಗೌಡ, ರಮೇಶ ಜಾಧವ, ಸಾಯಬಣ್ಣ, ಗುರುಮೂರ್ತಿ ಪತ್ತಾರ, ನಂದಪ್ಪ ಕವಾಲ್ದಾರ, ಶ್ರೀನಿವಾಸ ಕುಲಕರ್ಣಿ, ಭೀಮು, ಚಾಂದಪಾಶಾ, ರವಿ ಡಿಗ್ಗಾವಿ, ರಮೇಶ, ರಾಘು, ಶಿವು ಸೇರಿದಂತೆ ಅನೇಕರಿದ್ದರು.

ನಾಗಣ್ಣಗೌಡ ಕನ್ಯಾಕೋಳುರ ನಿರೂಪಿಸಿದರು, ರವಿ ಸೊನ್ನದ ಸ್ವಾಗತಿಸಿದರು. ರಾಜು ಮಾಲಗತ್ತಿ ವಂದಿಸಿದರು.