ಪಂಡಿತ್ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ

????????????????????????????????????

ಸಂಜೆವಾಣಿ ವಾರ್ತೆ
ಸಿರುಗುಪ್ಪ ಸೆ 25  : ನಗರದ ಶ್ರೀಅಭಯಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ತಾಲೂಕು ಘಟಕದವತಿಯಿಂದ ಶ್ರೀ ಪಂಡಿತ್ ದೀನ ದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನಾಚರಣೆಯ ಅಂಗವಾಗಿ ಶ್ರೀ ಪಂ.ದೀ.ದ.ಉಪಾಧ್ಯಾಯರ ಭಾವಚಿತ್ರಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪುಷ್ಪಾರ್ಚನೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಅಪ್ಪಟ ದೇಶಭಕ್ತರ ಸಾಲಿಗೆ ಸೇರುವ ದೀನ ದಯಾಳ ಉಪಾಧ್ಯಯರು ಬಾಲ್ಯದಿಂದಲೇ ಸಂಸ್ಕøತಿ, ಧರ್ಮ ಸಂಘಟನೆ, ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಬೆಳೆದರು, ಚಿಕ್ಕವಯಸ್ಸಿನಿಂದಲೇ ತಂದೆ ತಾಯಿಯನ್ನು ಕಳೆದು ಕೊಂಡು ಸಂಬಂಧಿಕರ ಮನೆಯಲ್ಲಿ ಬೆಳೆಯುತ್ತ ವಿದ್ಯಾಭ್ಯಾಸದ ಜೊತೆಯಲ್ಲಿ ಸಂಘ ಪರಿವಾರದ ನಂಟು ಬೆಳಸಿಕೊಂಡು ದೇಶ, ಧರ್ಮ, ಸಂಸ್ಕøತಿ ಉಳಿವಿಗಾಗಿ ಹಾಗೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಯುವಕರನೆಲ್ಲಾ ಸಂಘಟಿಸಿ ಹೋರಾಟದ ಮುಂದಾಳತ್ವದ ನಾಯಕರಾಗಿ ಬೆಳೆದರು. ದೇಶದ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದರೆಂದು ತಿಳಿಸಿದರು.
ಸಂಘ ಪರಿವಾರದ ಸಂಪನ್ಮೂಲ ವ್ಯಕ್ತಿ ಸತೀಶ ಕುಮಾರ್ ಅವರು ಪಂಡಿತ ದೀನ ದಯಾಳ್ ಉಪಾಧ್ಯಾಯರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಸಿ.ಪೊಂಪನಗೌಡ, ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಮಂಜುಳ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚಾಗಿಸುಬ್ಬಯ್ಯ, ಎ.ಪಿ.ಎಂ.ಸಿ ಅಧ್ಯಕ್ಷ ಶರಣಬಸವ, ನಗರಸಭೆ ಸದಸ್ಯರಾದ ಎಂ.ವೀರೇಶ, ನಟರಾಜ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಸ್ಕರ್ ಶೇಕಣ್ಣ, ಮುಖಂಡರಾದ ದಮ್ಮೂರು ಸೋಮಪ್ಪ, ಖಾಜಪ್ಪ, ಅಲ್ಲಿಪೀರ್, ವೈ.ಡಿ.ವೆಂಕಟೇಶ, ವೀರೇಶಗೌಡ, ವೀರೇಶಪ್ಪ ಮಹಾದೇವ, ಈರಣ್ಣ, ಸೇರಿದಂತೆ ಕಾರ್ಯಕರ್ತರು ಇದ್ದರು.