ಪಂಡಿತ್ ದೀನ್‌ದಯಾಳ್ ಜಯಂತಿ ಆಚರಣೆ

ಬೆಂಗಳೂರು,ಸೆ.೨೫- ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ದೇಶದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿದ್ದು, ತಮ್ಮ ಸೈದ್ಧ್ಯಾತಿಕ ನಿಲುವಿನಲ್ಲಿ ಬದ್ಧತೆ ಕಾಯ್ದುಕೊಂಡಿದ್ದರು ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದ್ದಾರೆ
ಮಹಾಲಕ್ಷ್ಮಿ ಲೇಔಟ್‌ನ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಾಧ್ಯಾಯ ಅವರು ಜನಸಂಘದಲ್ಲಿ ಹಲವು ಬಾರಿ ಜವಾಬ್ದಾರಿ ವಹಿಸಿಕೊಂಡು ಬಿಜೆಪಿಯ ಸಂಸ್ಥಾಪಕರೂ ಆಗಿದ್ದರು. ಅವರ ಹೆಸರಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ರಾಘವೇಂದ್ರಶೆಟ್ಟಿ ಮಾತನಾಡಿ, ದೀನ್‌ದಯಾಳ್ ಉಪಾಧ್ಯಾಯ ಅವರು ಅಜಾತ ಶತ್ರುವಾಗಿದ್ದು, ಭಾರತ ದೇಶವನ್ನು ವಿಶ್ವಮಟ್ಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಕಂಡಿದ್ದರು ಎಂದರು.
ಕಾರ್ಯಕ್ರಮದಲ್ಲಿ ಎಲ್ಲ ೭ ವಾರ್ಡ್ ಮತ್ತು ಮೋರ್ಚಾಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಿದ್ದರು.ಕ್ಯಾಪ್ಷನ್
ಭಾರತೀಯ ಜನಸಂಘದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಯಂತಿಯ ಪ್ರಯುಕ್ತ ಚಿತಾಗಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಬಕಾರಿ ಸಚಿವ ಪೌರ ಸನ್ಮಾನ ಮಾಡಿ ಆರ್ಥಿಕ ಧನ ಸಹಾಯ ವಿತರಿಸಿದರು.