ಪಂಡಿತ್ ದೀನದಯಾಳ ಉಪಾಧ್ಯಾಯರ ಸ್ಮರಣಿ

ನಾಯಕನಹಟ್ಟಿ.ಸೆ.೨೬; ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರು ಸ್ಮರಣಿಯರು  ದೇಶದ ಸ್ವಾಭಿಮಾನ, ಸಮಾನತೆ ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರು ಎಂದು ಓ.ಬಿ.ಸಿ.ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೆ.ಟಿ. ಹೇಳಿದರು.
 ನಾಯಕನಹಟ್ಟಿ ಪಟ್ಟಣದ ಯಾತ್ರಿ ನಿವಾಸದಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರು 105ನೇ ಜನ್ಮಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಂಡಿತ್ ದೀನದಯಾಳ ಉಪಾಧ್ಯಾಯರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ ಭ್ರಷ್ಟಚಾರದ ವಿರುಧ್ದ ಜನಾಗೃತಿ ಮೋಡಿಸಿವ ಕಳಕಳಿ ಹೊಂದಿದರು ಸಮಾಜದಲ್ಲಿ ಮೇಲು-ಕೀಳು ಭಾವನೆ ದೂರವಾಗಬೇಕೆಂದು ಬಯಸಿದರು. ಸರ್ಕಾರದ ಯೋಜನೆಗಳು ಶ್ರೀ ಸಾಮಾನ್ಯರಿಗೆ ತಲುಪುತಿಲ್ಲ ಬಡವರು ಸ್ವಯಂ ಪ್ರರೇಣೆಯಿಂದ ಬದುಕನ್ನು ಕಟ್ಟಿ ಕೊಳ್ಳಬೇಕು ಕಷ್ಟ ಮತ್ತು ಸುಖಕ್ಕೆ ಒಲಿಯುವುದೆ ನಾಗರಿಕತೆ ಯುವ ಜನತೆ ದುಷ್ಚಟಗಳ ದಾಸರಾಗುವ ಬದಲು ಪರಂಪರೆಯ ಮೌಲ್ಯಗಳ ದಾಸರಾಗಬೇಕು ಎಂದು ತಿಳಿಸಿದರು.ಪಂಡಿತ್ ದೀನದಯಾಳ ಉಪಾಧ್ಯಾಯರು ಜನಸಂಘದ ರಾಷ್ಟçಧ್ಯಕ್ಷರಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ ದೇಶದ ಬಡವರ ಕೂಲಿ ಕಾರ್ಮಿಕರ ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅಂತಹ ನಾಯಕರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

 ಪಂಡಿತ್ ದೀನದಯಾಳ ಉಪಾಧ್ಯಾಯರು ಮೂಲತಃ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದು, ನಂತರ ಭಾರತೀಯ ಸಂಘದ ಸದಸ್ಯರಾಗಿ ನಿಯುಕ್ತರಾದರು.1967-1968 ಅವಧಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ರೈಲ್ವೆ ನಿಲ್ದಾಣದಲ್ಲಿ ಸಂದೇಹಸ್ಪದ ರೀತಿಯಲ್ಲಿ ನಿಧನರಾದರು ಎಂದು ಹೇಳಿದರು.ನಾಯಕನಹಟ್ಟಿ ಮಂಡಲದ ಬಿ.ಜೆ.ಪಿ.ಅಧ್ಯಕ್ಷರಾದ ರಾಮರೆಡ್ಡಿ ಮಾತನಾಡಿ 3ನೇ ಅಲೆ ಬರುವ ಮುಂಚೆ ಪ್ರತಿಯೊಬ್ಬ ಕಾರ್ಯಕರ್ತರು ಲಸಿಕೆ ಹಾಕಿಸಿಕೊಳ್ಳಬೇಕು ಅಕ್ಕ-ಪಕ್ಕದವರ ಕೋರನಾ ಲಸಿಕೆ ಹಾಕಿಸಿಕೊಳ್ಳಿ ಪ್ರಾಣ ಹಾನಿಯಾಗುವುದಿಲ್ಲ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೂ ಲಸಿಕೆ ಬಗ್ಗೆ ಮಾಹಿತಿ ತಿಳಿಸಬೇಕು ಭಾರತದ ಪ್ರತಿಯೊಬ್ಬ ಸಾಮಾಜಿಕ ನ್ಯಾಯವನ್ನು ಕೊಡಿಸುವಲ್ಲಿ ಪಂಡಿತ್ ದೀನದಯಾಳ ಉಪಾಧ್ಯಾಯರು ಪ್ರಮುಖ ವ್ಯಕ್ತಿಯಾಗಿದ್ದರು.ಸರ್ಕಾರ ಯೋಜನೆಗಳು ಪ್ರತಿಯೊಂದು ಕುಟುಂಬಕ್ಕೆ ತಿಳಿಸಬೇಕು ಮುಂಬರುವ ಚುನಾವಣೆಗಳು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಯಾರಿಗೆ ಟಿಕೇಟ್ ನೀಡುತ್ತದೆ ಅವರ ಪರವಾಗಿ ಪ್ರಚಾರ ಮಾಡೋಣ ಎಂದರು.
ಜಿಲ್ಲಾ ಓ.ಬಿ.ಸಿ.ಮೊರ್ಚಾವತಿಯಿಂದ ನಿವೃತ್ತ ಸೈನಿಕರಿಗೆ ಹಾಗೂ ಶಿಕ್ಷಕರಿಗೆ ಪಂಡಿತ್ ದೀನದಯಾಳ ಉಪಾಧ್ಯಾಯರ 105ನೇ ಜನ್ಮ ದಿನೋತ್ಸವ ಅಂಗವಾಗಿ ಜಿಲ್ಲಾ ಓ.ಬಿ.ಸಿ. ಅಧ್ಯಕ್ಷರಾದ ಪ್ರವೀಣ್ ಕುಮಾರ್ ಕೆ.ಟಿ. ನೇತೃತ್ವದಲ್ಲಿ ಸನ್ಮಾನಿಸಲಾಯಿತು.ಜಿಲ್ಲಾ ಕಾರ್ಯಕರಣಿ ವೆಂಕಟೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ದಿಲಿಪ್ ಕುಮಾರ್ ಎಸ್. ಹಾಗೂ ಇತರೆ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಉಪಸ್ಥಿತರಾಗಿದ್ದ ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಪಿ.ಶಿವಣ್ಣ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಾಕ್ಷರಾದ ಶಾರದಮ್ಮ, ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಚನಗೇನಹಳ್ಳಿ ಮಲ್ಲೇಶ್, ಎಸ್.ಟಿ. ಮೋರ್ಚಾ ಅಧ್ಯಕ್ಷರಾದ ಸಿ.ಬಿ.ಮೋಹನ್, ರೂಪಾ ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷರಾದ ಎನ್.ಮಂಹತಣ್ಣ, ಗೋವಿಂದಪ್ಪ, ಪ್ರಕಾಶ್, ಕೌಸರ್, ಸುನಂದಮ್ಮ,ಮಮತ,ಗಂಗಮ್ಮ,ಲಕ್ಷಿö್ಮÃ,ವಿಷ್ಣು ಸಿಂಹ, ಪ್ರಕಾಶ್‌ರೆಡ್ಡಿ, ಎ.ವಿ.ಮಹೇಶ್ ಕುಮಾರ್ ಅಬ್ಬೇನಹಳ್ಳಿ ಮಲ್ಲಿಕಾರ್ಜುನ್, ಕೆ.ಟಿ.ಸ್ವಾಮಿ, ಎಂ.ವೈ.ಟಿ.ಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.Attachments area