ಪಂಜಿನ ಮೆರವಣಿಗೆ ಮೂಲಕ “ಮತದಾನ ಜಾಗೃತಿ ಜಾಥಾ”


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.05: ಚುನಾವಣೆ ಆಯೋಗ, ತಾಲ್ಲೂಕು ಆಡಳಿತ, ತಾಲ್ಲೂಕು ಸ್ವೀಪ್ ಸಮಿತಿ, ನಗರಸಭೆ ಹಾಗೂ ವಿವಿಧ ತಾಲ್ಲೂಕು ಮಟ್ಟದ ಇಲಾಖೆಯ ಸಹಯೋಗದಲ್ಲಿ ಸೋಮವಾರ ರಾತ್ರಿ ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ  ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವು ನಡೆಸಿದರು.
ಚುನಾವಣಾಧಿಕಾರಿ ಸತೀಶ, ತಾ.ಪಂ.ಇ.ಒ ಮಡಗಿನ ಬಸಪ್ಪ, ನಗರಸಭೆ ಪೌರಾಯುಕ್ತ ಜೀವನ್ ಕುಮಾರ್, ತೋಟಗಾರಿಕೆ ಅಧಿಕಾರಿ ಮಹೇಶ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜೇಶ್ವರಿ, ಪಿ.ಎಸ್.ಐ ಕೆ.ರಂಗಯ್ಯ ಇದ್ದರು.