ಪಂಜಾಬ್-ಸಿಎಸ್‌ಕೆ ಇಂದು ಹಣಾಹಣಿ

ಮುಂಬೈ, ಏ.೧೬- ಐಪಿಎಲ್ ಕ್ರಿಕೆಟ್ ನಲ್ಲಿಂದು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಕೆ.ಎಲ್ ರಾಹುಲ್ ಪಡೆ ೨ನೇ ಗೆಲುವಿನ ಹುಮ್ಮಸ್ಸಿನಲ್ಲಿದ್ದರೆ, ಧೋನಿ ನೇತೃತ್ವದ ಸಿಎಸ್‌ಕೆ ತಿರುಗೇಟು ನೀಡಲು ತಂತ್ರ ರೂಪಿಸಿದೆ.
ಪಂಜಾಬ್ ಕಿಂಗ್ಸ್ ಮೊದಲ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತ್ತು. ಕೆ.ಎಲ್ ರಾಹುಲ್ ಕ್ರಿಸ್‌ಗೇಲ್, ದೀಪಕ್ ಹೂಡಾ ಹಾಗೂ ದೇವದತ್ತ ಪಡಿಕಲ್, ಮಯಾಂಕ್ ಅಗರ್‌ವಾಲ್ ಅವರನ್ನು ಬಲವಾಗಿ ನಂಬಿಕೊಂಡಿದೆ.
ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಸೋಲನುಭವಿಸಿತ್ತು. ಹೀಗಾಗಿ, ಧೋನಿ ಪಡೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಸುರೇಶ್‌ರೈನಾ, ಅಂಬಟಿ ನಾಯ್ಡು, ರವೀಂದ್ರ ಜಡೇಜಾ, ಎಂ.ಎಸ್ ಧೋನಿ ಉತ್ತಮ ಆಟ ಪ್ರದರ್ಶಿಸಬೇಕಾಗಿದೆ.ಈ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕಳೆದ ಬಾರಿ ಐಪಿಎಲ್‌ನಲ್ಲಿ ಪ್ಲೇ ಆಫ್ ಹಂತ ತಲುಪಲು ವಿಫಲವಾಗಿತ್ತು.ಎರೆಡೂ ತಂಡಗಳ ನಡುವೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆ ತಳ್ಳಿ ಹಾಕಲಾಗದು.