ಪಂಜಾಬ್ ವಿರುದ್ಧ ಹೈದರಾಬಾದ್ ಗೆ ಭರ್ಜರಿ ಗೆಲುವು

ಚೆನ್ನೈ, ಏ 21- ಇಲ್ಲಿನ ಚಿದಂಬರಂ ಕ್ರೀಡಾಂಗಣ ದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 9 ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿತು.
ಗೆಲುವಿಗೆ ಅಗತ್ಯವಿದ್ದ 121 ರನ್ ಅಲ್ಪಮೊತ್ತದ ಸವಾಲನ್ನು ನಿರಾಯಾಸವಾಗಿ ಎಸ್ ಆರ್ ಎಚ್ ಗಳಿಸಲು ಸಫಲವಾಯಿತು.


ಸತತ ಮೂರು ಪಂದ್ಯಗಳಲ್ಲಿ ಸೋತಿದ್ದ ಹೈದರಾಬಾದ್ ಕೊನೆಗೂ ಗೆಲುವಿನ ಹಳಿಗೆ ಬಂದಿದೆ.
ಜಾನಿಬೈರ್ ಸ್ಟೋ ಅವರ ಅಜೇಯ ಬಿರುಸಿನ ಅರ್ಧ‌ ಶತಕದ ನೆರವಿನಿಂದ 18.4 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 121 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಮೂರು ಸಿಕ್ಸರ್ ಹಾಗೂ ಮೂರು ಬೌಂಡರ ಬಾರಿಸಿ ಬೈರ್ ಸ್ಟೋ ಅಜೇಯ 63 ರನ್ ಗಳಿಸಿದರು. ಕೇನ್ ವಿಲಿಯಮ್ಸ್ 17 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ವಾರ್ನರ್ 37 ರನ್ ಬಾರಿಸಿದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 19.4 ಓವರ್ ಗಳಲ್ಲಿ 120 ರನ್ ಗಳ ಅಲ್ಪಮೊತ್ತಕ್ಕೆ
ಸರ್ವ ಪತನ ಕಂಡಿತು.
ಮಯಾಂಕ್ ಅಗರ್ ವಾಲ್ ಶಾರೂಖ್ ಖಾನ್ ತಲಾ 22 ರನ್ ಗಳಿಸಿದರು. ಕ್ರಿಸ್ ಗೇಲ್ 15 ರನ್ ಗಳಿಸಿ ನಿರಾಸೆ ಮೂಡಿಸಿದರು.
ನಾಯಕ ಕೆ.ಎಲ್ ರಾಹುಲ್ ಸೇರಿದಂತೆ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು. ಖಲೀಲ್ ಅಹ್ಮದ್ ಮೂರು ಹಾಗೂ ಅಭಿಷೇಕ್ ಶರ್ಮಾ ಎರಡು ವಿಕೆಟ್ ಪಡೆದರು.