ಪಂಜಾಬ್ ವಿರುದ್ಧ ಸಿಎಸ್ಕೆಗೆ ಆರು ವಿಕೆಟ್ಗಳ ಭರ್ಜರಿ ಗೆಲುವು

ಮುಂಬೈ ಏ.16- ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ದ ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.


ಮೊದಲ ಪಂದ್ಯದಲ್ಲಿ ಸೋತಿದ್ದ ಧೋನಿ ಪಡೆ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿ ಗೆಲುವಿನ ನಗೆ ಬೀರಿದೆ.
ಅಲ್ಪಮೊತ್ತದ ಸವಾಲಿನ ಬೆನ್ನಹತ್ತಿದ ಸಿಎಸ್ ಕೆ 24 ರನ್ ಗಳಿಸಿದ್ದಾಗ ಗಾಯಕ್ ವಾಡ್ ವಿಕೆಟ್ ಕಳೆದು ಕೊಂಡಿತು.
ನಂತರ ಪಾಪ್ ಡುಪ್ಲೆಸಿಸ್ ಉತ್ತಮ ಜತೆಯಾಟವಾಡಿದರು. ಚೆನ್ನಾಗಿ ಆಡುತ್ತಿದ್ದ ಮೊಯಿನ್ ಅಲಿ 31ಎಸೆತಗಳಲ್ಲಿ 46 ರನ್ ಗಳಿಸಿ ಔಟಾದರು. ಸುರೇಶ್ ರೈನಾ ಎಂಟು ರನ್ ಗಳಿಸಿ ನಿರ್ಗಮಿಸಿದರು. ಅಂಬಟಿ ರಾಯುಡು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಡುಪ್ಲೆಸಿಸ್ ಹಾಗೂ ಸ್ಯಾಮ್ ಕ್ಯುರ್ರನ್ 15.4 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 107 ರನ ಗಳಿಸಿ ಗೆಲುವಿನ ನಗೆ ಬೀರಿತು. ಡುಪ್ಲೆಸಿಸ್ 36 ಹಾಗೂ ಕ್ಯೂರ್ರನ್ 5 ರನ್ ಗಳಿಸಿ ಅಜೇಯ ರಾಗುಳಿದರು.
ಇದಕ್ಕೂ ಮುನ್ನು ಮೊದಲ ಬ್ಯಾಟ್ ಮಾಡಿದ ಪಂಜಾಂಬ್ ಕಿಂಗ್ಸ್ , ಸಿಎಸ್ ಕೆ ಬೌಲಿಂಗ್ ದಾಳಿ ತತ್ತರಿಸಿತು. 20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 106 ರನ್ ಗಳಿಸಿತು.
ನಾಯಕ ಕೆ.ಎಲ್ ರಾಹುಲ್ ರನೌಟ್ ಹಾಗೂ ಮಯಾಂಕ್ ವಿಕೆಟ್ ಬಿದ್ದ ಬಳಿಕ ತಂಡ ಒತ್ತಡಕ್ಕೆ ಸಿಲುಕಿತು.


ಶಾರೂಖ್ ಖಾನ್ 47 ರನ್ ಗಳಿಸಿದ್ದನ್ನು ಹೊರತು ಪಡಿಸಿ ಉಳಿದ ಆಟಗಾರರು ಉತ್ತಮ ಆಟವಾಡಲು ವಿಫಲರಾದರು. ಸಿಎಸ್ ಕೆ ಪರ ಚಹರ್ ಮಾರಕ ಬೌಲಿಂಗ್ ಪ್ರದರ್ಶಿಸಿ ನಾಲ್ಕು ವಿಕೆಟ್ ಕಬಳಿಸಿದರು.