ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಭರ್ಜರಿ ಜಯ

ಮುಂಬೈ,‌ ಏ 18- ಶಿಖರ್ ಧವನ್ ಅವರ ಬಿರುಸಿನ ಆಟದ ನೆರವಿನಿಂದ ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ‌ಕ್ಯಾಪಿಟಲ್ ಆರು ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು.
196 ರನ್ ಗಳ ಬೆನ್ನಹತ್ತಿದ ಡೆಲ್ಲಿ‌ ಪರ ಪೃಥ್ವಿ‌ ಷಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 59 ರನ್ ಸೇರಿಸಿದರು. ಷಾ 32 ರನ್ ಗಳಿಸಿ ಅರ್ಷ್ ದೀಪ್ ಗೆ ವಿಕೆಟ್ ಒಪ್ಪಿಸಿದರು.


ಬಳಿಕ ಸ್ಟೀವನ್ ಸ್ಮಿತ್ 9 ರನ್ ಗಳಿಸಿ ನಿರ್ಗಮಿಸಿದರು. ಧವನ್ ಪಂಜಾಬ್ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿದರು. 49 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್ ನೊಂದಿಗೆ 92 ರನ್ ಗಳಿಸಿ ಕೇವಲ ಎಂಟು ರನ್ ಗಳಿಂದ ಶತಕ ವಂಚಿತರಾದರು.
ಬಳಿಕ‌ ಪಂತ್ 15 ರನ್ ಗಳಿಸಿ ರಿಚರ್ಡ್ ಸನ್ ಗೆ ವಿಕೆಟ್ ಒಪ್ಪಿಸಿದರು.
ಲಲಿತ್ ಹಾಗೂ ಸ್ಟೋನಿಸ್ ಜತೆಗೂಡಿ ತಂಡಕ್ಕೆ ಗೆಲುವು ತಂದುಕೊಟ್ಟರು 10 ಎಸೆತಗಳು ಬಾಕಿಯಿರುವಾಲೇ ನಾಲ್ಕು ವಿಕೆಟ್ ಕಳೆದುಕೊಂಡು 198 ರನ್ ಗಳಿಸಿ ಗೆಲುವು ಸಾಧಿಸಿತು. ಮಾರ್ಕಸ್ 27 ಹಾಗೂ ಲಲಿತ್ 12 ರನ್ ಗಳಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 195 ರನ್ ಗಳಿಸಿತು.
ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ ವಾಲ್ ಮೊದಲ ವಿಕೆಟ್ ಗೆ 122 ರನ್ ಸೇರಿಸಿ ಉತ್ತಮ ಮುನ್ನಡೆ ದೊರಕಿಸಿಕೊಟ್ಟರು.
ಅಗರ್ ವಾಲ್ 39 ಎಸೆತಗಳಲ್ಲಿ ಏಳು ಬೌಂಡರಿ‌ ಹಾಗೂ ನಾಲ್ಕು ಸಿಕ್ಸರ್ ನೊಂದಿಗೆ 69 ರನ್ ಗಳಿಸಿದರು.
ನಾಯಕ ರಾಹುಲ್ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 61 ರನ್ ಬಾರಿಸಿದರು. ದೀಪಕ್ ಹೂಡಾ 22 ಹಾಗೂ ಶಾರುಖ್ ಖಾನ್ 15 ರನ್ ಗಳಿಸಿ ಅಜೇಯರಾಗುಳಿದರು.