ಪಂಜಾಬ್ ನ  ಚಂಡೀಗಢದಲ್ಲಿ ನಡೆಯಲಿರುವ  ವಾರ್ಷಿಕ ಸಾಮಾನ್ಯ ಸಭೆಗೆ ಎ.ಎಂ.ಕೊಟ್ರೋಶ್ 

ಜಗಳೂರು.ಏ.೨೧ :- ಪಂಜಾಬ್ ರಾಜ್ಯದ ಚಂಡಿಗಡದಲ್ಲಿ ಏಪ್ರಿಲ್ 22 ಹಾಗೂ 23 ರಂದು ರಾಷ್ಟ್ರೀಯ ಪತ್ರಕರ್ತರ ಕಾರ್ಯಕಾರಿ ಸಮಿತಿ ಸಭೆಗೆ ರಾಷ್ಟ್ರೀಯ ಮಂಡಳಿಯ ಒಕ್ಕೂಟದ  ಸದಸ್ಯರಾದ ಜಗಳೂರು ನನ್ನ ಮಿತ್ರ ಪತ್ರಿಕೆಯ ಸಂಪಾದಕರಾದ ಎ.ಎಂ.ಕೊಟ್ರೋಶ್ ಸೇರಿದಂತೆ ರಾಜ್ಯದ ನಾಲ್ಕು ಜನ  ರಾಷ್ಟ್ರೀಯ ಮಂಡಳಿಯ ಒಕ್ಕೂಟದ ಸದಸ್ಯರುಗಳು ಸಭೆಗೆ ಭಾಗವಹಿಸಲಿದ್ದಾರೆರಾಷ್ಟ್ರೀಯ ಪರಿಷತ್ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನ್ ಸಭೆಯ ಅಧ್ಯಕ್ಷತೆ ವಹಿಸುವರು. ಜಗಳೂರಿನಿಂದ ಪಂಜಾಬ್ ರಾಜ್ಯದ ಚಂಡಿಗಡಕ್ಕೆ  ಪ್ರಯಾಣ ಬೆಳಿಸಲಿರುವ ಅಣಬೂರು ಮಠದ ಕೊಟ್ರೇಶ್ ಅವರಿಗೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿದಾನಂದ ಜಿ.ಎಸ್. ಜಿಲ್ಲಾ ಉಪಾಧ್ಯಕ್ಷ ಡಿ ಶ್ರೀನಿವಾಸ್. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಪಿ ಸುಭಾನ್  ಉಪಾಧ್ಯಕ್ಷರಾದ ಸೈಯದ್ ವಾಸಿಂ.ಪ್ರಧಾನ ಕಾರ್ಯದರ್ಶಿ ಲೋಕೇಶ್. ಕಾರ್ಯದರ್ಶಿ ರವಿಕುಮಾರ್  ಖಜಾಂಚಿ ಜಗದೀಶ್. ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು ಹೆಚ್ ಮರೇನಹಳ್ಳಿ. ಮಂಜಣ್ಣ. ಧನ್ಯಕುಮಾರ್.ರಾಜಪ್ಪ. ಸೇರಿದಂತೆ ಸರ್ವ ಸದಸ್ಯರುಗಳು ಶುಭ ಕೋರಿದ್ದಾರೆ.