ಪಂಜಾಬ್ ನಲ್ಲಿ ಪ್ರಧಾನಿ ಪ್ರತಿಕೃತಿ ದಹನ: ಸಲ್ಲದು: ರಾಹುಲ್ ಗಾಂದಿ

ಚಂಪಾರಣ್,( ಬಿಹಾರ) ಅ. 28- ದಸರಾ ಹಬ್ಬದ ಸಮಯದಲ್ಲಿ ಪಂಜಾಬ್ ನ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿದ್ದಾರೆ.‌ದೇಶದ ಪ್ರಧಾನಿಗೆ ಹೀಗೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ‌‌ ಪ್ರತಿಕೃತಿ ದಹಿಸುತ್ತಾರೆ ಎಂದರೆ ಆ ರಾಜ್ಯವು ಜನರ ಆಕ್ರೋಶ ಎಷ್ಟಿರಬಹುದು ನೀವೇ ಯೋಚಿಸಿ ಎಂದು ಅವರಿ ಹೇಳಿದರು‌

ಬಿಹಾರ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಪ್ರಧಾನಿ ಅವರ ಪ್ರತಿಕೃತಿ ದಹಿಸಿವುದು ಸರಿಯಲ್ಲ ಇದನ್ನೂ ಯಾರೂ ಕೂಡ ಮಾಡಬಾರದು ಎಂದು ಹೇಳಿದ್ದಾರೆ.

ಜನತೆ ಪ್ರಧಾನಿಯ ಪ್ರತಿಕೃತಿ ದಹನ ಮಾಡುವುದನ್ನು ಟಿ‌ವಿಗಳಲ್ಲಿ ನೋಡಿ ಬೇಸರ ಆಯುತು.ದೇಶದ ಅತ್ಯುತ್ತಮ ಸ್ಥಾನದಲ್ಲಿರುವ ವ್ಯಕ್ತಿಯ ಪ್ರತಿಕೃತಿ ದಹನಾ ಮಾಡಬಾರದು.ಪ್ರತಿಭಟನೆ ಮಾಡಲು ಬೇರೆ ದಾರಿಗಳಿವೆ ಎಂದು ತಿಳಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ ಕೃಷಿ ಕಾಯ್ದೆಯ ಬಗ್ಗೆ ಪಂಜಾಬ್ ಜನತೆ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಅವರು ದಸರಾ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ

ಟೀ ಕೊಟ್ಟಿದ್ರಾ?

ಚಂಪಾರಣ್ ನಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು.ಅದನ್ನೂ ಈಡೇರಿಸಿದ್ದಾರಾ ಇಲ್ಲ.. ಕಡೇ ಪಕ್ಷ ಒಂದು ಕಪ್ ಟೀ ಕೋಟ್ರಾ ಅದೂ ಇಲ್ಲ ಎಂದು ಅವರು ಲೇವಡಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ಹೀಗಾಗಿ ಈ ಬಾರಿ ನೀಡುತ್ತಿರುವ ಪ್ರಣಾಳಿಕೆ ಹಾಗು ಭರವಸೆ ಬಗ್ಗೆ ಗಮನ ಕೊಡಬೇಡಿ. ಚುನಾವಣೆಯಲ್ಲಿ ಸಮಯದಲ್ಲಿ ಭರವಸೆ ನೀಡಿ ಅದನ್ನು ಅವರು ಮರೆಯುತ್ತಾರೆ. ಮತ್ತೆ ಚುನಾವಣೆ ಬಂದಾಗ ಭರವಸೆ ಬಗ್ಗೆ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧ ವಾಗ್ದಾಳಿ ನಡೆಸಿದ್ದಾರೆ
[4:27 PM, 10/28/2020] Prakash SV1: ನೆಲಮಂಗಲ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಬಂಧನ ವಾರಂಟ್ ಜಾರಿ

ಬೆಂಗಳೂರು,ಅ.28-ಪತಿ ಬೇಕು ಡಾಟ್ ಕಾಂ’ ಸಿನಿಮಾದ ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕನಿಗೆ ಬೆದರಿಸಿ ಚೆಕ್​ಗಳಿಗೆ ಸಹಿ ಪಡೆದ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ಪೊಲೀಸ್
ಠಾಣೆ ಸಬ್ ಇನ್ಸ್‌ಪೆಕ್ಟರ್(ಪಿಎಸ್‌ಐ)ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
ನಗರದ 24ನೇ ಎಸಿಎಂಎಂ ಕೋರ್ಟ್​ ಪೊಲೀಸ್ ಆಯುಕ್ತರ ಮೂಲಕ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ ಹಾಗೂ ಕಾನ್ಸ್​ಟೇಬಲ್ ಕೇಶವ್​​ ವಿರುದ್ಧ ವಾರಂಟ್ ಜಾರಿಗೊಳಿಸಲು ಆದೇಶ ನೀಡಿದೆ. ಮಂಜುನಾಥ ಪತಿ ಬೇಕು ಡಾಟ್ ಕಾಂ ಸಿನಿಮಾಗೆ ಬಂಡವಾಳ ಹೂಡಿದ್ದು ಸಿನಿಮಾ ನಷ್ಟ ಅನುಭವಿಸಿದ್ದರಿಂದ ನಿರ್ದೇಶಕ ರಾಕೇಶ್​ಗೆ ಹಣ ಹಿಂದಿರುಗಿಸಲು ಒತ್ತಡ ಹೇರಿದ್ದಾರೆ.
ನೆಲಮಂಗಲ ಪೊಲೀಸ್​ ಠಾಣೆಗೆ ಕರೆಸಿಕೊಂಡು ಬೆದರಿಸಿ ಚೆಕ್​ಗೆ ಸಹಿ ಪಡೆದಿದ್ದರು. ಹೀಗಾಗಿ ಪೊಲೀಸರ ವಿರುದ್ಧ ರಾಕೇಶ್ ಖಾಸಗಿ ದೂರು ಸಲ್ಲಿಸಿದ್ದರು.
ಆದರೆ ಸಮನ್ಸ್ ನೀಡಿದರೂ ಪೊಲೀಸರು ಕೋರ್ಟ್​ಗೆ ಹಾಜರಾಗಿರಲಿಲ್ಲ. ವಾರಂಟ್ ಜಾರಿಗೊಳಿಸುವಂತೆ ವಕೀಲ ವೇದಮೂರ್ತಿ ವಾದ ಮಂಡಿಸಿದ್ದರು. ಸಿವಿಲ್ ಕೇಸ್​ನಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಗರಂ ಆಗಿತ್ತು. ಸದ್ಯ ಈಗ ಎಸಿಎಂಎಂ ಕೋರ್ಟ್​ ಜಡ್ಜ್​ ಬಾಲಗೋಪಾಲಕೃಷ್ಣ 2021ರ ಜನವರಿ 29ರೊಳಗೆ ವಾರಂಟ್ ಜಾರಿಗೆ ಆದೇಶಿಸಿದ್ದಾರೆ.