ಪಂಜಾಬ್ ಜಯಭೇರಿ; ಆರ್ ಸಿಬಿ ಪ್ಲೇ ಆಫ್ ಕಠಿಣ

ಮುಂಬೈ, ಮೇ.13- ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಪಂಜಾಬ್ ಕಿಂಗ್ಸ್ , ಆರ್ ಸಿಬಿ ವಿರುದ್ಧ 54 ರನ್ ಗಳ ಭರ್ಜರಿ ಜಯ ದಾಖಲಿಸಿತು.


ರೇಸ್‌ನಲ್ಲಿ ಉಳಿಯಲು ಪಂಜಾಬ್ ಗೆ ಈ ಗೆಲುವು ಅನಿವಾರ್ಯವಾಗಿತ್ತು. ಒಟ್ಟು 12 ಪಂದ್ಯಗಳಲ್ಲಿ ಆರರಲ್ಲಿ ಸೋತಿದ್ದು, 12 ಅಂಕಗಳಿಸಿದೆ. ಪ್ಲೇ ಆಫ್ ತಲುಪಲು ಬಾಕಿ ಉಳಿದಿರುವ ಎರಡು ಪಂದ್ಯಗಳನ್ನು ಪಂಜಾಬ್ ಗೆಲ್ಲಲೇಬೇಕಾಗಿದೆ.
ಆರ್ ಸಿಬಿ 13 ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿ 14 ಅಂಕಗಳಿಸಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಪ್ಲೇ ಆಫ್ ಕಠಿಣವೆನಿಸಿದೆ.
210 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಹತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ ನಷ್ಟಕ್ಕೆ 155 ರನ್ ಗಳಿಸಿ ಸೋಲಿಗೆ ಶರಣಾಯಿತು.
ವಿರಾಟ್ ಕೊಹ್ಲಿ ಡುಪ್ಲೆಸಿಸ್ ಉತ್ತಮವಾಗಿಯೇ ಇನ್ನಿಂಗ್ಸ್ ಆರಂಭಿಸಲು ಮುಂದಾದರು.‌ಆದರೆ 33 ರನ ಗಳಿಸಿದ್ದಾಗ ಕೊಹ್ಲಿ 20 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಡುಪ್ಲೆಸಿಸ್ 10 ರನ್ ಗಳಿಸಿ ನಿರ್ಗಮಿಸಿದರು. ಮಹಿಪಾಲ್ ಕೊಡ ಹೆಚ್ಚು ಹೊತ್ತು ನಿಲ್ಲದೆ ಆರು ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆಹಾಕಿದರು.
ಈ ಹಂತದಲ್ಲಿ ರಜತ್ ಪಟ್ಟಿದಾರ್ ಹಾಗೂ ಮ್ಯಾಕ್ಸ್ ವೆಲ್ 4ನೇ ವಿಕೆಟ್ ಗೆ ಜತೆಯಾಗಿ ತಂಡದ ಮೊತ್ತವನ್ನು ಮುನ್ನಡೆಸಿದರು. ಪಟ್ಟಿದಾರ್ 26 ಹಾಗೂ ಮ್ಯಾಕ್ಸ್ ವೆಲ್ 35 ರನ್ ಗಳಿಸಿ ಔಟಾದರು.
ದಿನೇಶ್ ಕಾರ್ತಿಕ್11, ಶಹಬಾಜ್ 9, ಹರ್ಷಲ್ ಪಟೇಲ್ 11 ಹಾಗೂ ಹಸರಂಗ ಕೇವಲ ಒಂದು ರನ್ ಗಳಿಸಿ ನಿರ್ಗಮಿಸಿದರು.
ಪಂಜಾಬ್ ಪರ ಕಗಿಸೊ ರಬಾಡಾ 3, ರಿಷಿ ಧವನ್ ಹಾಗೂ ರಾಹುಲ್ ಚಹರ್ ತಲಾ ಎರಡು ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ಜಾನಿ ಬೆಸ್ಟೊ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಸೂಪರ್ ಕಿಂಗ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 209 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಶಿಖರ್ ಧವನ್ ಹಾಗೂ ಬೆಸ್ಟೊ ಮೊದಲ ವಿಕೆಟ್ ಗೆ ಐದು ಓವರ್‌ಗಳಲ್ಲಿ 60ರನ್ ಸೇರಿಸಿ ಉತ್ತಮ‌ ಆರಂಭ ಒದಗಿಸಿದರು. ಧವನ್ 21 ರನ್ ಗಳಿಸಿ ನಿರ್ಗಮಿಸಿದರು.
ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬೆಸ್ಟೊ 21 ಎಸೆತಗಳಲ್ಲಿ 50 ರನ್ ಬಾರಿಸಿದರು. ಆದರೆ ಈ ಹಂತದಲ್ಲಿ ಭಾನುಕ‌ ರಾಜಪಕ್ಸ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
9 ಓವರ್ ನಲ್ಲಿ ಪಂಜಾಜ್ 100ರ ಗಡಿ ತಲುಪಿತು. ಚನ್ನಾಗಿ ಆಡುತ್ತಿದ್ದ ಬೆಸ್ಟೊ 66 ರನ್ ಗಳಿಸಿ ನಿರ್ಗಮಿಸಿದರು. 29 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸಿದರು.
ಐದನೇ ವಿಕೆಟ್ ಗ್ ಮಯಾಂಕ್ (19) ಜತೆಗೂಡಿದ ಲಿವಿಂಗ್ ಸ್ಟೋನ್ಸ್ ಅರ್ಧಶತದ ಜತೆಯಾಟ ವಾಡಿದರು. ಲಿವಿಂಗ್ ಸ್ಟೋನ್ 42 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು.ಜಿತೇಶಗ ಶರ್ಮಾ 9 ಹಾಗೂ ಹರ್ ಪ್ರೀತ್ ಹಾಗೂ ರಿಷಿ ಧವನ್ ತಲಾ ಏಳು ರನ್ ಗಳಿಸಿದರು.
ಆರ್ ಸಿಬಿ ಪರ ಹರ್ಷಲ್ ಪಟೇಲ್ 4 ಹಾಗೂ ಹಸರಂಗ ಎರಡು ವಿಕೆಟ್ ಗಳಿಸಿದರು.