ಪಂಜಾಬ್ ಗೆ ನಾಲ್ಕು ರನ್ ಗಳ ರೋಚಕ ಜಯ: ಸಂಜು ಶತಕ ವ್ಯರ್ಥ

ಮುಂಬೈ, ಏ.12- ನಾಯಕ ಕೆ.ಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿಂದಾಗಿ ರಾಜಸ್ಥಾನ್ ರಾಯಲ್ಸ್ ‌ವಿರುದ್ದ ಪಂಜಾಬ್ ಕಿಂಗ್ಸ್ ನಾಲ್ಕು ರನ್ ಗಳಿಂದ ರೋಚಕ ಜಯ ದಾಖಲಿಸಿತು.


ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸಾಮ್ಸನ್ ಶತಕ ವ್ಯರ್ಥವಾಯಿತು.
ಈ ಮೂಲಕ ಆರಂಭಿಕ ಪಂದ್ಯದಲ್ಲೇ ರಾಹುಲ್ ಬಳಗ‌ ಮಿಂಚಿನ ಆಟವಾಡಿ ಗೆಲುವಿನ ನಾಗಾಲೋಟಕ್ಕೆ ಮುನ್ನುಡಿ ಬರೆದಿದೆ.
ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 221 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಜತೆಗೆ ಟೂರ್ನಿಯಲ್ಲಿ , ಮೊತ್ತವನ್ನು 200 ಗಡಿ ದಾಟಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆರಂಭದಲ್ಲೇ ಮಯಾಂಕ್ ಅಗರ್ ವಾಲ್ ವಿಕೆಟ್ ಕಳೆದುಕೊಂಡಿತು. ನಂತರ ಜತೆಗೂಡಿದ ಕ್ರಿಸ್ ಗೇಲ್ ತಂಡದ ಮೊತ್ತ 85 ರನ್ ಗಳಿಸಿದ್ದಾಗ ಗೇಲ್ 28 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.
ಈ ವೇಳೆ ಕಣಕ್ಕಿಳಿದ ದೀಪಕ್ ಹೂಡಾ ಮತ್ರು ರಾಹುಲ್ ರಾಜಸ್ಥಾನ ಬೌಲಿಂಗ್ ದಾಳಿಯನ್ನು ದೂಳಿಪಟ ಮಾಡಿತು. ಈ ಜೋಡಿ ತಂಡದ ಮೊತ್ತವನ್ನು 89 ರನ್ ಗಳಿಂದ 194 ರನ್ ಗಳವರೆಗೆ ಕೊಂಡೊಯ್ಯಿತು. ಹೂಡಾ ಕೇವಲ 28 ಎಸೆತಗಳಲ್ಲಿ ಆರಯ ಸಿಕ್ಸರ್ ನಾಲ್ಕು ಬೌಂಡರಿಗಳಿಂದ 64 ರನ್ ಗಳಿಸಿ ನಿರ್ಗಮಿಸಿದರು.
ನಾಯಕ ರಾಹುಲ್ ಎಸೆತಗಳಲ್ಲಿ 7 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 91 ರನ್ ಗಳಿಸಿ ಔಟಾದರು.
ಈ ಬೃಹತ್ ಮೊತ್ತದ ಸವಾಲಿನ ಬೆನ್ನಹತ್ತಿದ ರಾಜಸ್ತಾನ್ ರಾಯಲ್ಸ್ 25 ರನ್ ಆಗುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ನಾಯಕ‌ ಸಂಜು ಸ್ಯಾಮ್ಸನ್ ಹಾಗೂ ಬಟ್ಲರ್ ರನ್ ಗಳಿಸಲು ಮುಂದಾದರು. ಆದರೆ 25 ರನ್ ಗಳಿಸಿದ್ದಾಗ ಬಟ್ಲರ್ ಔಟಾದರು.
ಆದರೆ ಸಂಜು ನಡೆಸಿದ ಏಕಾಂಗಿ ಹೋರಾಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲ. 64 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಸಿಡಿಸಿ 119 ರನ್ ಬಾರಿಸಿದರು. ಅದರೆ ಒಂದು ಎಸೆತದಲ್ಲಿ ಐದು ರನ್ ಅಗತ್ಯವಿತ್ತು.


ಸಿಕ್ದರ್ ಬಾರಿಸುವ ಪ್ರಯತ್ನದಲ್ಲಿ ಸಂಜು ಔಟಾಗಿ‌‌‌ ನಿರಾಸೆ ಮೂಡಿಸಿದರು. ದುಬೆ 23 ಹಾಗೂ ಪರಾಗ್ 25 ರನ್ ಗಳಿಸಿದರು.
ಒಟ್ಟಿನಲ್ಲಿ ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿಯಿತು. ಅಂತಿಮವಾಗಿ ರಾಹುಲ್ ‌ಪಡೆ‌ ಗೆಲುವಿನ ನಗೆ ಬೀರಿತು.

ಸ್ಕೋರ್ ವಿವರ
ಪಂಜಾಜ್ ಆರು ವಿಕೆಟ್ ನಷ್ಟಕ್ಕೆ 221
ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 217