ಪಂಜಾಬ್ ಕಿಂಗ್ಸ್ ಗೆ ಐದು ರನ್ ಗಳ ರೋಚಕ ಜಯ

ಶಾರ್ಜಾ, ಸೆ.25- ಐಪಿಎಲ್ ಟೂರ್ನಿಯಲ್ಲಿಂದು ಸನ್ ರೈಸ್ ಹೈದರಾಬಾದ್ ವಿರುದ್ದ ಪಂಜಾಬ್ ಕಿಂಗ್ಸ್ ಐದು ರನ್ ಗಳಿಂದ ರೋಚಕ ಜಯಗಳಿಸಿದೆ.


ಅಲ್ಪಮೊತ್ತದ ಸವಾಲಿನ ಬೆನ್ನಹತ್ತಿದ ಎಸ್ ಆರ್ ಎಚ್ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 120 ರನ್ ಗಳಿಸಲಷ್ಟೇ ಸಾಧ್ಯವಾಗಿ ಕೇವಲ ಐದು ರನ್ ಗಳಿಂದ ಸೋಲು ಅನುಭವಿಸಿತು.
ಜೇಸನ್ ಹೋಲ್ಡರ್ 47, ವೃದ್ದಿಮಾನ್ ಸಾಹಾ 31ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಪಂಜಾಬ್ ಬೌಲಿಂಗ್ ದಾಳಿಗೆ‌ ದಿಟ್ಟ ಉತ್ತರ ನೀಡಲು ವಿಫಲರಾದರು. ರವಿ ಬಿಷ್ನೋಯ್ ಮೂರು ಹಾಗೂ ಮೊಹ್ಮದ್ ಶಮಿ ಎರಡು ವಿಕೆಟ್ ಪಡೆದ ಯಶಸ್ವಿ ಬೌಲರ್ ಎನಿಸಿದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 127 ರನ್ ಗಳ ಅಲ್ಪಮೊತ್ತ ದಾಖಲಿಸಿತು.
ಪಂಜಾಬ್ ಪರ ಯಾರೂ ಕೂಡ ಉತ್ತಮ‌ ಪ್ರದರ್ಶಿಸಲು ವಿಫಲರಾದರು. ಮರ್ ಕರಂ 27, ರಾಹುಲ್ 21, ಹರ್ ಪ್ರೀತ್ 18 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಆಟಗಾರರು ಉತ್ತಮ‌ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.
ಹೋಲ್ಡರ್ ಮೂರು ವಿಕೆಟ್ ಪಡೆದರು. ಸಂದೀಪ್ ಭುವನೇಶ್ವರ್, ರಶೀದ್ ಖಾನ್ ರವಿ ಬಿಷ್ನೊಯ್ ತಲಾ ಒಂದು ರನ್ ಗಳಿಸಿದರು.