ಪಂಜಾಬಿನಲ್ಲಿ 1560 ರೂಪಾಯಿಗೆ ಲಸಿಕೆ: ವ್ಯಾಪಕ‌ ಟೀಕೆ

ಚಂದಿಗಡ,ಜೂ.4- ಪಂಜಾಬ್ ನಲ್ಲಿ ಕೊರೊನಾ ಲಸಿಕೆಯನ್ನು ಪ್ರತಿ ಡೋಸ್ ಗೆ 1560 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಮಾಡುವ ಆದೇಶವನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರ ಹಿಂಪಡೆದಿದೆ.

ಪ್ರತಿ ಡೋಸ್ ಲಸಿಕೆಯನ್ನು 400 ರೂಪಾಯಿಗೆ ಪಡೆದು ಖಾಸಗಿ ಆಸ್ಪತ್ರೆಗೆ 1060 ರೂಪಾಯಿಗೆ ಸರ್ಕಾರ ಮಾರಾಟ ಮಾಡಿದೆ. ಅದನ್ನು ಖಾಸಗಿ ಆಸ್ಪತ್ರೆಗಳು 1560 ರೂಪಾಯಿಗೆ ಮಾರಾಟ ಮಾಡುತ್ತಿವೆ ಎಂದು ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖಬೀರ್ ಸಿಂಗ್ ಗಂಭೀರ ಆರೋಪ ಮಾಡಿದ್ದರು .

ಮೂಲ ಬೆಲೆಗಿಂತ ಸರಿಸುಮಾರು ಮೂರು ಪಟ್ಟು ಬೆಲೆಯಲ್ಲಿ ಲಸಿಕೆ ಮಾರಾಟ ಮಾಡುವ ಮೂಲಕ ಹಣ ದೋಚಲಾಗುತ್ತಿದೆ ಎಂದು ಅವರು ದೂರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಖಾಸಗಿ ಸಂಸ್ಥೆಗಳಿಗೆ ಲಸಿಕೆ ಪೂರೈಕೆ ಮಾಡುವ ಆದೇಶವನ್ನು ಹಿಂದೆ ಪಡೆದಿದೆ

18ರಿಂದ 44 ವರ್ಷ ವಯೋಮಾನದ ಯುವ ಸಮುದಾಯಕ್ಕೆ ವಯಸ್ಸಿನ ಕೊವಾಕ್ಸಿನ್ ಲಸಿಕೆಯನ್ನು ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳು ಮಾರಾಟ ಮಾಡುವುದು ವ್ಯಾಪಕ ಟೀಕೆಗೂ ಗುರಿಯಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಲಸಿಕ ಅಭಿಯಾನದ ಉಸ್ತುವಾರಿ ವಿಕಾಸ್ ಗರ್ಗ್, ನಿಗದಿತ ಬೆಲೆಗಿಂತ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್ ಲಸಿಕೆಯನ್ನು 500 ರೂಪಾಯಿ ಅಂತರ ಇಟ್ಟುಕೊಂಡು ನೀಡುತ್ತಿದ್ದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೀಡುವ ಲಸಿಕೆಯನ್ನು ಆದೇಶ ಸರಕಾರ ಹಿಂದಕ್ಕೆ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಿರುವ ಲಸಿಕೆಗಳಲ್ಲಿ ಜನರಿಗೆ ನೀಡದೆ ಬಾಕಿ ಇರುವ ಲಸಿಕೆಯನ್ನು ರಾಜ್ಯಸರ್ಕಾರಕ್ಕೆ ಹಿಂತಿರುಗಿಸುವಂತೆಯೂ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆಯಷ್ಟೇ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಪಂಜಾಬ್ ನಲ್ಲಿ ದುಬಾರಿ ಬೆಲೆಗೆ ಲಸಿಕೆ ಮಾರಾಟ ಮಾಡಲಾಗುತ್ತಿದೆ .ಅದರಲ್ಲಿಯೂ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ದುಪ್ಪಟ್ಟು ಬೆಲೆ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು