ಪಂಚ ಗ್ಯಾರಂಟಿಗಳ ಪ್ರಭಾವ, ಕಾಳಗಿ ಎಸ್.ಬಿ.ಐಗೆ ಹರಿದು ಬಂದ ಗ್ರಾಹಕರು

ಕಾಳಗಿ.ಜು.19. ತಾಲೂಕಿನ ಹಲವಾರು ಗ್ರಾಮಗಳ ಹಾಗೂ ಪಟ್ಟಣ ಸೇರಿ ವಿವಿಧ ತಾಲೂಕುಗಳ ಗ್ರಾಹಕರು, ಕಾಳಗಿ ಶಾಖೆ ಎಸ್.ಬಿ.ಐ ಖಾತೆಗಳ ಗ್ರಾಹಕರಾಗಿದ್ದು, ಉದ್ಯಮಿಗಳು, ಸರ್ಕಾರಿ ನೌಕರರು, ಕಾರ್ಮಿಕರು, ವಿವಿಧ ಗ್ರಾಪಂ.ಗಳು ಸೇರಿ ಹಣಕಾಸಿನ ವ್ಯವಹಾರಕ್ಕಾಗಿ ಕಾಳಗಿ ಎಸ್.ಬಿ.ಐಗೆ ಬರುವುದು ಸಹಜವಾಗಿದೆ.
ಅತಿ ದೊಡ್ಡ ಹಣಕಾಸಿನ ವ್ಯವಹಾರ ಇರುವ ಈ ಬ್ಯಾಂಕ್ ಕೇವಲ ಒಂದು ಶಾಖೆ ಮಾತ್ರ ಹೊಂದಿದ್ದು, ಗ್ರಾಹಕರ ಸಂಖ್ಯೆ ಹೆಚ್ಚು. ಬ್ಯಾಂಕ್ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿರುವ ಪರಿಣಾಮ, ಸಧ್ಯ ಕೆಲಸ ನಿರ್ವಹಿಸಲಿರುವ ಸಿಬ್ಬಂದಿಗಳಿಗೆ ತುಂಬಾ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರದ ಪಂಚಗ್ಯಾರಂಟಿಗಳ ಪ್ರಭಾವ:

ಸರ್ಕಾರ ಸಾರ್ವಜನಿಕರಿಗೆ ನೀಡುತ್ತಿರುವ ಪಂಚಗ್ಯಾರಂಟಿಗಳ ಪ್ರಭಾವ ದಿಂದಾಗಿ, ಸುತ್ತ-ಮುತ್ತಲಿನ ಗ್ರಾಮಗಳಿಂದ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಕಿಗೆ ಬರಲಾರಂಭಿಸಿದ್ದಾರೆ.

ತಮ್ಮ ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಇಲ್ಲದ ಪ್ರಯುಕ್ತ ಸರ್ಕಾರಿ ಸೌಲಭ್ಯ ಎಲ್ಲಿ ಕೈಗೆಟಕುವುದಿಲ್ಲವೆಂಬ ಉಧ್ಯೇಶದಿಂದ ಜನದಟ್ಟಣೆ ವಿಪರೀತವಾಗಿರುವ ಕಾರಣ ಬ್ಯಾಂಕ್ ಸಿಬ್ಬಂದಿಗಳಿಗೆ ದಿಕ್ಕು ತೋಚದಂತಾಗಿದೆ.
ಪ್ರತಿನಿತ್ಯ 300ಜನತೆಯ ಆಧಾರದ ಲಿಂಕ್ ಮಾಡುತ್ತಿದ್ದರೂ ಕೂಡ ಸಮಸ್ಯೆ ಪರಿಹಾರವಾಗದ ಕಾರಣ, ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳ ಕೊರತೆ ಎದ್ದು ಕಾಣಿಸುತ್ತಿದೆ.

ಜಿಟಿಜಿಟಿ ಮಳೆಗೂ ಜಗ್ಗದ ಗ್ರಾಹಕರು:
ಮಂಗಳವಾರ ಎಡೆಬಿಡದೆ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಜಿಟಿಜಿಟಿ ಮಳೆಗೂ ಕೂಡ ಜಗ್ಗದ ಕಾಳಗಿ ಎಸ್.ಬಿ.ಐ ಗ್ರಾಹಕರು, ಬ್ಯಾಂಕ್ ಮುಂಭಾಗದಲ್ಲಿ ನೂಕುನುಗ್ಗಲಿಂದ, ಮಳೆಯಿಂದ ಒಬ್ಬರ ಆಸರೆಯಾಗಿ ಮತ್ತೊಬ್ಬರು, ನಿಂತಿರುವ ದೃಶ್ಯ ಆಶ್ಚರ್ಯ ಪಡುವಂತಿತ್ತು.
ಇದಕ್ಕೆಲ್ಲ ಕಾರಣ ಸರ್ಕಾರ ಜಾರಿಗೊಳಿಸುತ್ತಿರುವ ಪಂಚಯೋಜನೆಗಳು, ಬೇಗ ಕೈಗೆಟಕಿಸಿಕೊಳ್ಳಬೇಕೆನ್ನುವ ಹಟವೇ ಸರಿ ಎನ್ನಲಾಗುತ್ತಿದೆ.

  ಇದರಿಂದಾಗಿ ಹಿರಿಯ ನಾಗರಿಕರು, ವಿಧವೆಯರು, ವೃದ್ಧಾಪ್ಯ ವೇತನ ಪಡೆಯುವವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಬ್ಯಾಂಕಿನಲ್ಲಿರುವ ಕೌಂಟರ್ ಗಳ ಸುತ್ತಲೂ ಗಿರಕಿ ಹೊಡೆದು ಸೂಸ್ತಾಗುವ ಸಂಗತಿ ನಿರ್ಮಾಣ ವಾಗಿದೆ. ಬ್ಯಾಂಕಿನ ಮೇಲಾಧಿಕಾರಿಗಳು ಆದಷ್ಟು ಬೇಗ ಈ ಶಾಖೆಗೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಸಾರ್ವಜನಿಕರ ತೊಂದರೆಗಳನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.