ಪಂಚೇಂದ್ರಿಯಗಳಿಲ್ಲದ ರಾಜ್ಯ ಸರಕಾರ ಎಸ್.ಆರ್ ಪಾಟೀಲ ಆಕ್ರೋಶ

ಇಂಡಿ:ಅ.28: ತಾಲೂಕಿನ ವಿವಿಧಡೆ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದ್ದು ರೈತರ ಬೆಳೆ, ಆಸ್ತಿ ,ಪಾಸ್ತಿ ಹಾನಿಯಾಗಿ ಜನರು ಇರಾಶ್ರೀತರಾಗಿದ್ದಾರೆ ಕೂಡಲೆ ಸರಕಾರ ಪರಿಹಾರ ಕ್ರಮಕೈಗೋಳ್ಳುವಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್ .ಆರ್ ಪಾಟೀಲ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳವಾರ ಇಂಡಿ ತಾಲೂಕಿನ ಭೀಮಾನದಿಯಿಂದ ಪ್ರವಾಹ ಪೀಡಿತ ಉಮರಾಣಿ, ಗೊಂವಿಂದಪುರ, ಉರ್ಮಜ ಗ್ರಾಮಗಳಿಗೆ ಭೇಟಿ ನೀಡಿದ ನಂತರ ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭೀಮಾನದಿಯ ಭಾಗದಲ್ಲಿ ಅನೇಕ ಹಳ್ಳಿಗಳು ಜಲಾವೃತ್ತವಾಗಿ ಆಸ್ತಿ,ಪಾಸ್ತಿ.ಮನೆ ,ಮಠಗಳನ್ನು ಕಳೆದುಕೊಂಡು ಜನರು ಬೀದಿಪಾಲಾಗಿದ್ದಾರೆ.
ರೈತರು ಬೆಳೆದ ಬೆಳೆ ಅಷ್ಠೇ ಅಲ್ಲ ನೀರಿನ ಪ್ರವಾಹದಿಂದ ಭೂಮಿ ಸಹಿತ ಸವಕಳಿಯಾಗಿ ಮಣ್ಣು ಕೊಚ್ಚಿಕೊಂಡು ಸಾವಿರಾರು ಎಕರೆ ಬೆಳೆ ಹಾನಿಯಾಗಿ ರೈತರು ಕಷ್ಟದಲ್ಲಿದ್ದಾರೆ. ರೈತರ ಪಂಪಸೇಟ್‍ಗಳು , ನೀರು ಎತ್ತುವ ಮೋಟಾರಗಳು ಕೋಡಾ ಕಿತ್ತುಹೋಗಿವೆ ಟಾನ್ರ್ಸಫಾರ್ಮ್‍ಗಳು ಸುಟ್ಟು ಹೋಗಿವೆ ಜನತೆ ಕಷ್ಟದಲ್ಲಿ ಇದ್ದಾಗ ಸರಕಾರಗಳು ಸ್ಪಂದಿಸಬೇಕಾಗಿರುವು ರಾಜ್ಯ ಧರ್ಮ . ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಸರಕಾರ ಬಂದರೆ ಸ್ವರ್ಗವನ್ನೆ ಧರಿಗೀಳಿಸುವದಾಗಿ ಘೋಷಣೆ ಮಾಡಿದ್ದೀರಿ ಸ್ವರ್ಗ ಬೇಡ ರಾಜ್ಯದ ಜನತೆಯ ಹಿತರಕ್ಷಣೆ ಮಾಡಿ ಪುಣ್ಯಕಟ್ಟಿಕೋಳ್ಳಿ. ಈಗ ಎರಡೂ ಕಡೇ ನಿಮ್ಮದೇ ಸರಕಾರ ವಿದ್ದರೂ ಸಹಿತ ಜನತೆ ಸಮಸ್ಯಗಳಿಗೆ ಕಿವಿಗೊಡುತ್ತಿಲ್ಲಾ ಎಕೆ ? ಎಂದು ಪ್ರಶ್ನಿಸಿದರು . ರಾಜ್ಯದ 26 ಜನ ಸಂಸದರು ಜನತೆ ಬಗ್ಗೆ ಕಾಳಜಿವಹಿಸಬೇಕು, ರಾಜ್ಯದಲ್ಲಿ ಪ್ರವಾಹ ಬಂದು ಜನತೆ ಮನೆ, ಬೆಳೆ ,ಗುಡಿಗುಂಡಾರಗಳು ಭೂಮಿ ,ರಸ್ತೆ ಕಳೆದುಕೊಂಡು ನಿರಾಶ್ರೀತರಾಗಿ ಕಷ್ಟದಲ್ಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಬಳಿ ಹೋಗಿ ರಾಜ್ಯದ ವಾಸ್ತವಿಕ ಸಮಸ್ಯ ಮನವರಿಕೆ ಮಾಡಿ ಪರಿಹಾರ ನೀಡುವಂತೆ ಅವರ ಬಳಿ ಕಳಿತುಕೊಳ್ಳಿ ಪ್ರವಾಹ ವಿಪತ್ತು ಎಂದು ಘೋಷಣೆ ಮಾಡಿಸಲು ಒತ್ತಾಯಿಸಬೇಕು ಎಂದರು.
ವಿಜಯಪೂರ ಜಿಲ್ಲೆಯಲ್ಲಿ ಕೃಷಿ ಬೆಳೆಗಳು 13211 ಕೋಟಿ ಹಾನಿಯಾಗಿದ್ದು ಇದಕ್ಕಿಂತ ಹೆಚ್ಚುಹಾನಿಯಾಗಿದ್ದ ಸರಕಾರ ಸಮಾರೂಪದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಪ್ರವಾಹದಿಂದ 28 ಗ್ರಾಮಗಳು ಸಂತ್ರಸ್ಥವಾಗಿವೆ. ಉಮರಾಜ ಭಾಗದಲ್ಲಿ 6ನೂರು ವರ್ಷದ ಹಳೆಯ ದೇವಸ್ಥಾನ ಸೇರಿದಂತೆ ಬ್ಯಾರೇಜ ,ರಸ್ತೆ ,ಸೇತುವೆ ,ಅಂಗನವಾಡಿ ,ಶಾಲೆಗಳು ಹಾಳಾಗಿವೆ.
ಮನಕಲಕುವ ವಿಚಾರವೆಂದರೆ ಜಿಲ್ಲೆಯಲ್ಲಿ ಯಾವುದೇ ಗೋಶಾಲೆ ಆರಂಭಿಸದೆ ಜಾನುವಾರಗಳ ಮೇವಿನ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ, ಕಾಳಜಿಕೇಂದ್ರಗಳು ನಿಷ್ಕಾಳಜಿ ಕೇಂದ್ರಗಳಾಗಿವೆ.
ಸೋನ್ನ ಬ್ಯಾರೇಜದಿಂದ ನೀರು ನಿರ್ವಹಣೆಯ ಲೋಪ ಎದ್ದು ಕಾಣುತ್ತಿದ್ದ ಅಧಿಕಾರಿಗಳು ಮುಂದಾಲೋಚನೆಯಿಂದ ಬ್ಯಾರೇಜಿನಿಂದ ನೀರು ಬೀಡುಗಡೆ ಮಾಡಬೇಕಾಗಿತ್ತು ಅದರಲ್ಲಿ ವೈಫಲ್ಯೆ ಎದ್ದು ಕಾಣುತ್ತದೆ.
ಪ್ರವಾಹ ಸಂಧರ್ಭಧಲ್ಲಿ ವಿಕ್ಷಣೆಗೆ ಎಂದು ಬಂದ ಬಿಜೆಪಿ ಉಸ್ತುವಾರಿಗಳು ಕೂಡಲೆ 10ಸಾವಿರ ಪರಿಹಾರ ಘೋಷಣೆ ಮಾಡುವುದಾಗಿ ಹೇಳಿರುವ ಸರಕಾರ ಕೆಲವರಿಗೆ ನೀಡಿದ್ದು ಇನ್ನು ಕೆಲವರಿಗೆ ನೀಡಿಲ್ಲಾ ತೋಟದ ವಸ್ತಿ ಮನೆಗಳಿಗೂ ಮನೆಗಳ ಸರ್ವೆ ಮಾಡಿ ಅವಗಳಿಗೂ ಪಿಹಾರ ನೀಡಬೇಕು.
ಸಪೂರ್ಣ ಮನೆ ಕಳೆದಕೋಂಡವರಿಗೆ 5 ಲಕ್ಷ ಭಾಗಶ; ಕಳೆದುಕೊಂಡವರಿಗೆ 3 ಲಕ್ಷ , ಅಲ್ಪಸ್ವಲ್ಪ ಹಾನಿಯಾದವರಿಗೆ 50ಸಾವಿರ ನೀಡುವ ಕಾರ್ಯ ತ್ವರಿತವಾಗಿ ಸಾಗಬೇಕು.

ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದವರಿಗೆ ಮಖ್ಯ ಮಂತ್ರಿ ಖುದ್ದು ಪರಿಶೀಲನೆ ಮಾಡಿ ಕೂಡಲೆ 25 ಸಾವಿರನೀಡಲು ನಿರ್ಣಯಕೈಗೊಂಡಿರುವ ಸರಕಾರ ಗ್ರಾಮದಕ್ಕೊಂದು ನ್ಯಾಯ ನಗರಕ್ಕೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

ಸಾರ್ವಜನಿಕ ಬದುಕಿನಲ್ಲಿ ಸರಕಾರ ನಿರ್ಲಕ್ಷೆ ಮಾಡಿದೆ .ಸರಕಾರಕ್ಕೆ ಕಣ್ಣು ,ಕಿವಿ, ಚರ್ಮ ಪಂಚೇಂದ್ರಿಗಳೆ ಇಲ್ಲದಂತಾಗಿದೆ . ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ ಸಾಮಾನ್ಯ ಜನರು ತೊಂದರೆಯಲ್ಲಿದ್ದರೂ ಕೂಡಾ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ .ಆರ್ ಪಾಟೀಲ.

ಶಾಸಕ ಯಶವಂತರಾಯಗೌಡ ಪಾಟೀಲ, ಜಿ.ಪಂ ಅಧ್ಯಕ್ಷ ಸುಜಾತಾ ಕಳ್ಳಿಮನಿ, ತಾ.ಪಂ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಸಾಂಬಾಜಿರಾವ ಮಿಸಾಳೆ, ತಾ.ಪಂ ಸದಸ್ಯ ಜೀತಪ್ಪ ಕಲ್ಯಾಣಿ,ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ, ಕಾಂಗ್ರೇಸ್ ಮುಖಂಡ ಸುರೇಶ ಗೋಣಸಗಿ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ, ಪ್ರಶಾಂತ ಕಾಳೆ ಇದ್ದರು.