ಪಂಚಾರ್ಯರು ಹಾಗು ಬಸವಾದಿ ಶಿವಶರಣರ ಜೀವನ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು: ರಂಭಾಪೂರಿ ಜಗದ್ಗುರುಗಳು

ಕಲಬುರಗಿ.ಜು.28: ಪಂಚಾಚಾರ್ಯರು ಹಾಗೂ ಬಸವಾದಿ ಶಿವಶರಣರ ಜೀವನಮೌಲ್ಯವನ್ನು ಅಳವಡಿಸಿಕೊಂಡು ಭಕ್ತರು ಮುನ್ನಡೆಯಬೇಕು, ವೀರಶೈವ ಧರ್ಮವನ್ನು ಸ್ಥಾಪಿಸಿದ ಪಂಚಪೀಠಗಳು ಎಂದಿಗೂ ಸತ್ಯದ ಸಂಕೇತಗಳು ಎಂದು ಬಾಳೇನೊನ್ನೂರಿನ ಶ್ರೀಮದ್ ರಂಭಾಪೂರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯರ ಮಹಾಸ್ವಾಮಿಗಳು ನುಡಿದರು.

ಅವರು ನಗರದ ಮಹಾತ್ಮಾ ಬಸವೇಶ್ವರ ಬಡಾವಣೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಧರ್ಮಸಭೆ ಸಾನಿಧ್ಯ ವಹಿಸಿ ಆಶೀರ್ವಚನ ಉಪದೇಶಿಸುತ್ತಾ ಸಮಾಜದಲ್ಲಿ ಸಾಮರಸ್ಯ, ಸಾಮಾಜೀಕ ಮೌಲ್ಯಗಳು ಹಾಗೂ ವಿಸ್ವಾಸ ಮೂಡಿಸುತ್ತ ಧರ್ಮದ ಶಕ್ತಿಯನ್ನು ಹೆಮ್ಮರವಾಗಿ ಬೆಳೆಸಿವೆ. ಶಿಕ್ಷಣದಿಂದ ಮನುಷ್ಯನ ಬುದ್ದಿ ಶಕ್ತಿ ಬೆಳೆದರೆ, ಧರ್ಮದಿಂದ ಭಾವನೆಗಳು ಬೆಳೆಯುತ್ತವೆ, ಬುದ್ಧಿ ಭಾವನೆಗಳೆರಡನ್ನು ವಿಕಾಸಗೊಳಿಸುವುದೆ ನಿಜವಾದ ಧರ್ಮದ ಗುರಿ, ಮಾನವ ಧರ್ಮ ಸಕಲ ವಳತಿಗಾಗಿ ಜನ್ಮತಾಳಿದೆ, ಪಂಚ ಪೀಠಗಳು ಜನರ ಶ್ರೇಯಸ್ಸಿಗಾಗಿ ಕಾರ್ಯಮಾಡುತ್ತಾ ಬಂದಿವೆ ಎಂದು ನುಡಿದರು. ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು, ರೋಜಾದ ಕೆಂಚಬಸವ ಶಿವಾಚಾರ್ಯರು, ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಬಸವರಾಜ ಶಟಗಾರ, ವಿರುಪಾಕ್ಷಯ್ಯಸ್ವಾಮಿ, ಗುರುಸ್ವಾಮಿ, ಶಿವಾನಂದ ಯಳವಂತಗಿ, ಶಿವಕುಮಾರ ಸ್ವಾಮಿ, ಸಂಗಮೇಶ ಹಿರೇಮಠ, ಸಿದ್ದು ಮಹಾಗಾಂವ, ಶರಣಪ್ಪ ಗೊಬ್ಬೂರ, ಬಸವರಾಜ ಹರಸೂರ, ಸುರೇಶ ಉಡಚಣ ಇದ್ದರು. ಬಿ.ಎಸ್. ಮಾಲಿ ಪಾಟೀಲ ಸರ್ವರನ್ನು ಸ್ವಾಗತಿಸಿದರು, ಡಾ. ಶಾಮಲಾ ಶಿವುಕುಮಾರ ಸ್ವಾಮಿ ನಿರೂಪಿಸಿದರು.