ಪಂಚಾಯಿತಿ ಹಣ ದುರುಪಯೋಗ – ಕ್ರಮಕ್ಕೆ ಒತ್ತಾಯ

ಕೋಲಾರ ಸೆ,೨೧:ಕೋಲಾರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ೧೫ನೇ ಹಣಕಾಸು ಯೋಜನೆ ಮತ್ತು ವರ್ಗ೧ ಮತ್ತು ವರ್ಗ೨ ರ ಅಡಿಯಲ್ಲಿ ಕಾಮಗಾರಿಗಳನ್ನು ಮಾಡದೆ ಬಿಲ್ ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದು ಕಾನೂನು ಕ್ರಮ ಕೈಗೊಳ್ಳಬೇಕೆಂದು ನಮ್ಮ ಕೋಲಾರ ರೈತ ಸಂಘವು ಕೋಲಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುನಿಯಪ್ಪರವರಿಗೆ ಮನವಿ ನೀಡಿದರು.
ಕೋಲಾರ ತಾಲ್ಲೂಕು ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕವಾಗಿ ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದು, ೧೫ನೇ ಹಣಸಾಸು ಯೋಜನೆ ಮತ್ತು ವರ್ಗ-೧ ಮತ್ತು ವರ್ಗ-೨ರಲ್ಲಿ ಕಾಮಗಾರಿಗಳು ನಡೆಸದೆ ಕಾಮಗಾರಿ ನಡೆದಂತೆ ಬಿಲ್ ಮಾಡಿಕೊಂಡು ಅಕ್ರಮ ವೆಸಗಿದ್ದು, ತನಿಖೆ ನಡೆಸಿ ಕಾನೂನಿನ ಪ್ರಕಾರ ಕ್ರಮ ಜರುಗಿಸಲು ಮನವಿಯಲ್ಲಿ ಕೋರಿದ್ದಾರೆ.
ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ಅಂತ್ಯದ ಎನ್.ಆರ್.ಇ.ಜಿ.ಇ ಯೋಜನೆಯಡಿಯಲ್ಲಿ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕಾಗಿತ್ತು. ಆದರೆ ಅಧಿಕಾರಿಗಳು ಕೆರೆಯ ಮಧ್ಯ ಭಾಗದಲ್ಲಿ ರಸ್ತೆಯನ್ನು ಮಾಡಿ ಕೆರೆಯ ಉಳಿದ ಭಾಗವನ್ನು ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದರು. ಸದರಿ ಕಾಮಗಾರಿಯ ಬಿಲ್ಲುಗಳನ್ನು ತಡೆಹಿಡಿದು ಕಾನೂನಿನ ರೀತಿ ಕ್ರಮ ಜರುಗಿಸಲು ಕೋರಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡವರಿಗೆ, ನಿರ್ಗತಿಕರಿಗೆಂದು ಮೀಸಲಿಟ್ಟಿರುವ ಗ್ರಾಮನತ್ತವನ್ನು ಒತ್ತುವರಿದಾರೊಂದಿಗೆ ಪಿಡಿಒಗಳು ಶಾಮೀಲಾಗಿ ಗ್ರಾಮನತ್ತವು ಒತ್ತುವರಿದಾರರ ಪಾಲಾಗುವಂತೆ ಮಾಡಿದ್ದು. ಕಾನೂನಿನ ರೀತಿ ಕ್ರಮ ಕೈಗೊಂಡು ಮೀಸಲು ಸ್ಥಳ ಗ್ರಾಮನತ್ತವನ್ನು ಸರ್ಕಾರದ ವಶಕ್ಕೆ ಪಡೆಯಲು ಕೋರಿದ್ದಾರೆ.
ರಾಜ್ಯಾಧ್ಯಕ್ಷರ ಕೋಟಿಗಾನಹಳ್ಳಿ ಗಣೇಶ್‌ಗೌಡ, ರಾಜ್ಯ ಗೌರವಾಧ್ಯಕ್ಷ ನಾಗರಾಜ್, ಜಿಲ್ಲಾಧ್ಯಕ್ಷ ಶಿವಕುಮಾರ್.ಕೆ.ವಿ. ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಕಾಮಧೇನಹಳ್ಳಿ ವೆಂಕಟಾಚಲಪತಿ, ಜಿಲ್ಲಾ ಗೌರವಾಧ್ಯಕ್ಷ ಕೆಂಬೋಡಿ ಕೃಷ್ಣೇಗೌಡ, ಅಬ್ಬಣಿ ಮುನೇಗೌಡ, ರವೀಂದ್ರರೆಡ್ಡಿ, ಇ.ಎ.ಚಲಪತಿ, ತಮ್ಮೇಗೌಡ, ನಾರಾಯಣಸ್ವಾಮಿ, ನಾಗರಾಜ್, ಶಿಳ್ಳಂಗೆರೆ ಗೋಪಾಲ್ ಮುಂತಾದವರು ಹಾಜರಿದ್ದರು.