ಪಂಚಾಯಿತಿ ಚುನಾವಣೆ ಟಿಎಂಸಿ ಜಯಭೇರಿ

ಕೊಲ್ಕತ್ತಾ, ಜು.೧೨- ಹಿಂಸಾಚಾರ, ಸರಣಿ ಕೊಲೆಗಳ ನಡುವೆ ನಡೆದ ಪಶ್ವಿಮ ಬಂಗಾಳದ ಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತು ಪಡಿಸಿದೆ

ರಾಜ್ಯ ಚುನಾವಣಾ ಆಯೋಗದ ಸದ್ಯದ ಮಾಹಿತಿ ಪ್ರಕಾರ, ಆಡಳಿತಾರೂಢ ಟಿಎಂಸಿ ೩೦,೩೯೧ ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ ಗೆದ್ದಿದೆ, ಜೊತೆಗೆ ೧,೭೬೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಪ್ರತಿಪಕ್ಷ ಬಿಜೆಪಿ ೮,೨೩೯ ಸ್ಥಾನಗಳನ್ನು ಗೆದ್ದು ೪೪೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಪಿಐ(ಎಂ) ೨,೫೩೪ರಲ್ಲಿ ಗೆಲುವು ಸಾಧಿಸಿದ್ದು, ೨೩೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ೨,೧೫೮ ಸ್ಥಾನಗಳನ್ನು ಗೆದ್ದು ೧೫೧ ರಲ್ಲಿ ಮುನ್ನಡೆ ಸಾಧಿಸಿದೆ.ಒಟ್ಟು ೬೩,೨೨೯ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು

ಆಡಳಿತಾರೂಢ ಟಿಎಂಸಿ ೨,೬೧೨ ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದು ೬೨೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ೨೭೫ ಗೆದ್ದು ೧೪೯ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಿಪಿಐ(ಎಂ) ೬೩ ಸ್ಥಾನಗಳಲ್ಲಿ ಗೆದ್ದು ೫೩ ಇತರರಲ್ಲಿ ಮತ್ತು ಕಾಂಗ್ರೆಸ್ ೫೦ ಸ್ಥಾನಗಳಲ್ಲಿ ಗೆದ್ದು ೨೬ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ೯,೭೨೮ ಪಂಚಾಯತ್ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಇಲ್ಲಿಯವರೆಗೆ ಪ್ರಕಟವಾದ ಎಲ್ಲಾ ೮೮ ಜಿಲ್ಲಾ ಪರಿಷತ್ ಫಲಿತಾಂಶ ಟಿಎಂಸಿಗೆ ಜಯದ ಮಾಲೆ ಸಿಕ್ಕಿದೆ. ಇತರರು ೧೬೩ ರಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಸಿಪಿಐ(ಎಂ) ೪ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್ ೨ ಮತ್ತು ಬಿಜೆಪಿ ೧೩ ರಲ್ಲಿ ಮುನ್ನಡೆ ಸಾಧಿಸಿದೆ. ಒಟ್ಟಾರೆಯಾಗಿ ೯೨೮ ಜಿಲ್ಲಾ ಪರಿಷತ್‌ಗಳಿವೆ.

ಮತ ಎಣಿಕೆ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದಿದ್ದರೂ ಮತ ಎಣಿಕೆ ಕೇಂದ್ರದ ಹೊರಗೆ ಬಾಂಬ್ ಎಸೆದ ಘಟನೆಗಳು ಹಾಗೂ ವಿವಿಧ ಪಕ್ಷಗಳ ರಾಜಕೀಯ ಕಾರ್ಯಕರ್ತರು ಘರ್ಷಣೆ ನಡೆಸಿದ ಘಟನೆಗಳು ನಡೆದಿವೆ

ಧನ್ಯವಾದ : ಸಿಎಂ

ಪಂಚಾಯಿತಿ ಚುನಾವಣೆಯ ಸನಯದಲ್ಲಿ ರಾಜ್ಯದಲ್ಲಿ ನಡೆದ ಹಿಂಸಾಚಾರದ ನಡುವೆ ಟಿಎಂಸಿಗೆ ಅತ್ಯಧಿಕ ಸ್ಥಾನ ನೀಡಿದ ರಾಜ್ಯದ ಜನರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧನ್ಯವಾದ ಅರ್ಪಿಸಿದ್ದಾರೆ.

ಪಕ್ಷದ ಮೇಲೆ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ತಿಳಿಸಿದ್ದಾರೆ.