ಪಂಚಾಯಿತಿ ಅಖಾಡ : ಗೆದ್ದ ಅಭ್ಯರ್ಥಿಗಳ ಸಂಭ್ರಮ ಇಮ್ಮಡಿ

ದುರುಗಪ್ಪ ಹೊಸಮನಿ
ಲಿಂಗಸುಗೂರು.ಡಿ.೩೦- ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳ ಸಂಭ್ರಮ ಇಮ್ಮಡಿಯಾಗಿತ್ತು. ಸ್ಥಳೀಯ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದ ಮುಂಭಾಗ ನೆರೆದಿದ್ದ ಸಹಸ್ರಾರು ಅಭಿಮಾನಿ ಕಾರ್ಯಕರ್ತರಲ್ಲಿ ತಮ್ಮ ಅಭ್ಯರ್ಥಿಯ ಗೆಲುವಿನ ಕೌತುಕ ಮನೆ ಮಾಡಿತ್ತು.
ಮತಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ್ದ ಜನರು ತಮ್ಮ ತಮ್ಮ ಅಭ್ಯರ್ಥಿಗಳ ಫಲಿತಾಂಶವನ್ನು ಮೈಕ್‌ಮೂಲಕ ಕೇಳುತ್ತಲೇ ಕೇಕೆ, ಶಿಳ್ಳೆಗಳನ್ನು ಹಾಕುತ್ತಾ ಗೆಲುವನ್ನು ಸಂಭ್ರಮಿಸಿದರು. ಸೋತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಬೇಸರಪಟ್ಟುಕೊಂಡು ವಾಪಸ್ಸಾದರು.
ಗೆಲುವಿನ ನಗೆ ಬೀರಿದ ನೂತನ ಪಂಚಾಯಿತಿ ಸದಸ್ಯರಿಗೆ ಖರ್ಚು ಮಾಡಿದ ಬಗ್ಗೆ ಯಾವುದೇ ಆಕ್ಷೇಪವಿರಲಿಲ್ಲ. ಆದರೆ, ಸೋತವರು ಮಾತ್ರ ಖರ್ಚು ಮಾಡಿದ್ದೂ ಹೋಯ್ತು ಗೆಲ್ಲಲ್ಲೂ ಆಗಲಿಲ್ಲ ಎನ್ನುವ ಕೊರಗಿನಿಂದಲೇ ವಾಪಸ್ಸಾದರು.
ಈಗ ಆಯ್ಕೆಯಾದ ಅಭ್ಯರ್ಥಿಗಳಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಎಷ್ಟರ ಮಟ್ಟಿಗೆ ಜನರ ನಿರೀಕ್ಷೆಗಳಿಗೆ ನೂತನ ಸದಸ್ಯರು ಸ್ಪಂಧಿಸುತ್ತಾರೋ ಕಾದು ನೋಡೋಣ.

೩೦ಎಲ್‌ಎನ್‌ಜಿ-೨. ಗೆಲುವಿನ ಸಂಭ್ರಮದಲ್ಲಿ ನೂತನ ಸದಸ್ಯರು ಹಾಗೂ ಕಾರ್ಯಕರ್ತರು.