ಪಂಚಾಯಿತಿಗೊಬ್ಬ ಪರಿಸರ ಅಧಿಕಾರಿ ನೇಮಕ ಅಗತ್ಯ

ಕೋಲಾರ: ಜೂ ೭: ವಿಷಮಯವಾಗುತ್ತಿರುವ ಜೀವ ಸಂಕುಲ ಉಳಿಯ ಬೇಕಾದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಪಂಚಾಯಿತಿಗೊಬ್ಬ ಪರಿಸರ ಅದಿಕಾರಿಯನ್ನು ನೇಮಕ ಮಾಡಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ತಮ್ಮ ತೋಟದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಜಿಲ್ಲಾಡಳಿತಕ್ಕೆ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸಲಹೆ ನೀಡಿದರು.
ಏರುತ್ತಿರುವ ತಾಪಮಾನ ದೇಶದ ಜೀವರಾಶಿಗಳ ಅವನತಿಯ ದಿಕ್ಸೂಚಿ ಕಾಣುತ್ತಿದೆ ಆದರೂ ಮನುಷ್ಯ ಮಾತ್ರ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಇದೇ ರೀತಿ ಮನುಷ್ಯನ ದಬ್ಬಾಳಿಕೆ ಪರಿಸರ ಮೇಲೆ ನಡೆಯುತ್ತಿದ್ದರೆ ಕೆಲವೇ ವರ್ಷಗಳಲ್ಲಿ ಉಸಿರಾಟಕ್ಕೆ ಬೇಕಾಗುವ ಗಾಳಿಗಾಗಿ ಬೆನ್ನಿಗೆ ಆಕ್ಸಿಜನ್ ಸಿಲೆಂಡರ್‌ಗಳನ್ನು ಕಟ್ಟಿಕೊಂಡು ಓಡಾಡುವ ಕಾಲ ದೂರವಿಲ್ಲ ಎಂದು ಭವಿಷ್ಯ ನುಡಿದರು.
ಗಿಡ ನೆಟ್ಟು ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ಮನುಷನ ದುರಾಸೆ ಮತ್ತು ಆದುನೀಕತೆಗೆ ಮರುಳಾಗಿ ದಿನೇ ದಿನೇ ಪರಿಸರವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ ಒಂದು ಕಡೆ ಸರ್ಕಾರಗಳು ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ಪ್ರದೇಶಗಳನ್ನು ನಾಶ ಮಾಡುತ್ತಿದ್ದು, ಆದುನಿಕತೆ ಹೆಚ್ಚಾದಂತೆ ಮರಗಿಡಗಳ ಸಂಖ್ಯೆ ದಿನೇ ದಿನೇ ಕಡಿಮೆ ಆಗಿ ಪರಿಸರ ಮಾಲಿನ್ಯಕ್ಕೆ ನೂರು ವಷ ಬದುಕುವ ಜೀವದ ಜೊತೆಗೆ ಇಡೀ ಜೀವಕುಲವೇ ಅವನತಿಯತ್ತ ಸಾಗುತ್ತಿದೆ.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪರಿಸರ ಉಳಿಸಿ ಆರೋಗ್ಯವಂತ ಜೀವನ ರೂಪಿಸ ಬೇಕಾದರೆ ಜನ ಜಾಗೃತಿ ಮೂಡಿಸಲು ಪ್ರತಿ ಪಂಚಾಯಿತಿಗೊಬ್ಬ ಪರಿಸರ ಅಧಿಕಾರಿ ನೇಮಕ ಮಾಡಿ ಜನರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಲು ಅವಕಾಶ ಮಾಡಬೇಕು ಎಂದು ಅಭಿಪ್ರಾಯಪಟ್ಟರು
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗೀರೀಶ್, ಸುನಿತಾ, ಪುಷ್ಪ, ರತ್ನಮ್ಮ, ಭಾಗ್ಯ, ಭಾರತಿ, ನಾಗಮ್ಮ, ರೋಜ, ಕಾವ್ಯ, ಲಕ್ಷಮ್ಮ, ಪದ್ಮಮ್ಮ, ಶೈಲಜ, ನಾಗರತ್ನ ಹಾಗೂ ಕೃಷಿ ಕಾರ್ಮಿಕರು ಮುಂತಾದವರಿದ್ದರು