ಪಂಚಾಯತಿ ಆಡಳಿತ ನಿರ್ಲಕ್ಷ್ಯವೇ ಕಾರಣ : ಅಯ್ಯಪ್ಪ

ಗಬ್ಬೂರು.ಏ.೨೪-ಗಬ್ಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಗ್ಗೇರಿ ಓಣಿಯ ೦೫ ನೇ ವಾರ್ಡಿನಲ್ಲಿ ಚರಂಡಿ ನೀರು ಹೊರಗಡೆ ಹೋಗದಂತೆ ಭರ್ತಿಯಾಗಿ ಮನೆಗಳಿಗೂ ಕಿರಾಣಿ ಅಂಗಡಿಗಳಿಗೂ ನೀರು ನುಗ್ಗುತ್ತಿದ್ದವೆ ಅಸ್ವಚ್ಛತೆಯಿಂದ ಕಸ ಕಡ್ಡಿ ಚರಂಡಿಯಲ್ಲಿ ಇರುವುದರಿಂದ ಹೊರಗಡೆ ನೀರು ಹೋಗದಂತೆ ಪರಿಸ್ಥಿತಿ ಬಂದಿದೆ. ಕೋವಿಡ್ ೧೯ ಎರಡನೇ ಅಲೆ ಮಹಾಮಾರಿ ರೋಗಕ್ಕೆ ಜನ ಜೀವನ ತತ್ತರಿಸಿ ಹೋಗಿದ್ದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ೫ ನೇ ಗ್ರಾಮ ಪಂಚಾಯತ್ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ.೦೫ ನೇ ವಾರ್ಡಿನಲ್ಲಿ ಜನರಿಗೆ ಚರಂಡಿಯ ದುರ್ವಾಸನೆಗೆ ರೋಗ ರುಜಿನಗಳು ಬರುವ ಎಲ್ಲಾ ಸಂದರ್ಭಗಳು ಕಾಣುತ್ತಿವೆ ಚರಂಡಿಯ ನೀರಿನ ದುರ್ವಾಸನಕ್ಕೆ ಜನ ಜೀವನಕ್ಕೆ ತುಂಬಾ ತೊಂದರೆಯಾಗಿದೆ ಸಾರ್ವಜನಿಕರು ಚರಂಡಿ ಸ್ವಚ್ಚತೆ ಮಾಡುತ್ತಿರುವುದು ದೃಶ್ಯ ನೋಡಬಹುದಾಗಿದೆ. ಗ್ರಾಮ ಪಂಚಾಯತ್ ಆಡಳಿತ ನಿರ್ಲಕ್ಷ್ಯವೇ ಕಾರಣ ಎನ್ನಬಹುದು.ಕೂಡಲೇ ತಾಲ್ಲೂಕು ಆಡಳಿತ ಚರಂಡಿಯ ನೀರು ಸ್ವಚ್ಚತೆ ಮಾಡಿಸಿಬೇಕೆಂದು ೦೫ ನೇ ವಾರ್ಡಿನ ಗ್ರಾಮಸ್ಥರು ಮನವಿ ಯಾಗಿದೆ.ಈ ಸಂದರ್ಭದಲ್ಲಿ ಅಯ್ಯಪ್ಪ ಗಬ್ಬೂರು ಜಿಲ್ಲಾಧ್ಯಕ್ಷರು ಸಿದ್ದರಾಮಯ್ಯ ಯುವ ಬ್ರಿಗೇಡ್ ರಾಯಚೂರು. ಬಷೀರ್ ಸಾಬ್ ರೈತ ಸಂಘ,ಅಮರೇಶ್ ಅನ್ವರಿ, ಶರಣಯ್ಯ ಸ್ವಾಮಿ,ಶಿವಣ್ಣ ಕರಿಗಾರ ಗಬ್ಬೂರು ಹೋಬಳಿ ಗೌರವಧ್ಯಕ್ಷರು ಸಿದ್ದರಾಮಯ್ಯ ಯುವ ಬ್ರಿಗೇಡ್ ಉಪಸ್ಥಿತರಿದ್ದರು.