ಪಂಚಾಯತಿಗೆ ಬಾರದ ಪಿಡಿಒ

ಗಬ್ಬೂರು,ಜೂ.೦೯-ದೇವದುರ್ಗ ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತಿಯಲ್ಲಿ ಸುಮಾರು ೧೨ ವರ್ಷ ಆದರೂ ಚುನಾವಣಾ ನಡೆಯದ ಕಾರಣ ತಾವು ಆಡಿದೆ ಆಟ ಎಂಬುವಂತೆ ವರ್ತಿಸುತ್ತಿರುವ ಗ್ರಾ.ಪಂ ಪಿಡಿಒ ಹಾಗೂ ಸಿಬ್ಬಂದಿಗಳು ಹೇಮನಾಳ ಗ್ರಾಮ ಪಂಚಾಯತಿಗೆ ಸರಿಯಾದ ಸಮಯಕ್ಕೆ ಪಂಚಾಯತಿಗೆ ಬಾರದೇ ಕಾಟಚಾರಕ್ಕೆ ಎಂಬಂತೆ ಮೈಬೂಬ ಸಾಬ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುತ್ತಿದ್ದಾರೆ. ಸಕಾಲಕ್ಕೆ ಜನರ ಕೆಲಸ ಕಾರ್ಯಗಳಾಗದೆ ಪರದಾಡುವಂತಾಗಿದ್ದು ಸಮಸ್ಯೆಗಳಿಗೆ ಸ್ಪಂದಿಸದ ಇಲ್ಲಿನ ಸ್ಥಳೀಯರು ಬೇಸರಗೊಂಡು ಪಂಚಾಯತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ನಾಗಪ್ಪ ಖಾನಾಪೂರ, ಮಲ್ಲಯ್ಯ ಖಾನಾಪೂರ, ಸಿದ್ದಲಿಂಗ ನಾಯಕ ಸೇರಿದಂತೆ ಅನೇಕರಿದ್ದರು.