(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.23: ಶೋಭಕೃತ ನಾಮ ಸಂವತ್ಸರ ಚೈತ್ರಶುಕ್ಲ ಪಾಡ್ಯಮಿ ಶುಭದಿನದಂದು ಬಳ್ಳಾರಿ ಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಸಾಯಂಕಾಲ ಪಂಚಾಂಗ ಪಠಣ,ಭಕ್ತಾದಿಗಳಿಂದ ಪಂಚಾಂಗ ಶ್ರವಣ ಜರುಗಿತು.
ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್,ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ, ಶ್ರೀಕನಕ ದುರ್ಗಮ್ಮ ದೇವಸ್ಥಾನ,ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ *ಶ್ರೀಶೋಭಕೃತ ನಾಮ ನಾಮ ಸಂವತ್ಸರ*ಪಂಚಾಂಗ ಶ್ರವಣ* ಕಾರ್ಯಕ್ರಮ ದಲ್ಲಿ ಉಮಾಮಹೇಶ್ವರ ಪಂಚಾಂಗ ಕರ್ತರಾದ ಪಂಡಿತ್ ಮಠಂ ಗುರು ಪ್ರಸಾದ್ ರವರು ಪಂಚಾಂಗ ಪಠಣ ಮಾಡಿದರು.
ಕೊಕ್ಕರಚೇಡಿನ ಶ್ರೀ ಶಂಕರಾನಂದ ಗಿರಿ ಗುರು ಸೇವಾಶ್ರಮದ ಪೂಜ್ಯ ಶ್ರೀ ಗುರುಚರಣಾನಂದ ಗಿರಿ ಮಾತಾಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಶೋಭಕೃಯತ್ ನಾಮ ಸಂವತ್ಸರದ *ಉಮಾ ಮಹೇಶ್ವರ ಪಂಚಾಂಗ* ವನ್ನು ಲೋಕಾರ್ಪಣೆ ಗೊಳಿಸಿ,ಪಂಚಾಂಗದ ಐದು ಅಂಗಗಳಾದ ತಿಥಿ,ವಾರ,ನಕ್ಷತ್ರ,ಯೋಗ ಮತ್ತು ಕರಣ ಗಳು ಮನುಷ್ಯನ ಸುಗಮ ಜೀವನಕ್ಕೆ ಮಾರ್ಗದರ್ಶಿಗಳು .ಇವು ಅವನ ಗೋಚಾರವನ್ನು ಬದಲಿಸಲಾರವು.ಜನರ ತಪ್ಪು ತಿಳುವಳಿಕೆಯಿಂದ ಜ್ಯೋತಿಷ್ಯ ಪಂಚಾಂಗ ಗಳು ಮೂಢಾಚರಣೆಗಳೆಂದು ತಿಳಿಯುವಂತೆ ಆಗಿದೆ ಎಂದರು. ಪಂಚಾಂಗ ಕರ್ತರಾದ ಪಂಡಿತ್ ಮಠಂ ಗುರುಪ್ರಸಾದ್ ರವರು ಶೋಭಕೃತ್ ನಾಮ ಸಂವತ್ಸರದ ರಾಜಕೀಯ ವಿದ್ಯಮಾನ,ಮಳೆ-ಬೆಳೆ,ನವ ನಾಯಕರ ಪಾತ್ರ ಮತ್ತು ಗೋಚಾರ ಫಲಗಳನ್ನು ತಿಳಿಸಿದರು.ಚೀಟಿ ಎತ್ತುವ ಮೂಲಕ ಅದೃಷ್ಟ ಶಾಲಿಗಳಿಗೆ ಮತ್ಸ್ಯ ಯಂತ್ರ,ವಾಸ್ತು ಯಂತ್ರಗಳನ್ನು ಉಚಿತವಾಗಿ ವಿತರಿಸಲಾಯಿತು.
ಕನಕ ದುರ್ಗಮ್ಮ ದೇವಸ್ಥಾನದ ಪ್ರಧಾನ ಧರ್ಮಕರ್ತರಾದ ಪಿ,ಎಂ,ರಾಜಶೇಖರ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಮೋದಪಲ್ಲಿ ರಾಜೇಶ್ವರಿ ಯವರು ಅಧ್ಯಕ್ಷತೆ ವಹಿಸಿದ್ದರು.ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿ,ಹನುಮಂತಪ್ಪ,ಪ್ರಧಾನ ಅರ್ಚಕರಾದ ಪಿ,ಗಾದೆಪ್ಪ,ಪದಾಧಿಕಾರಿಗಳಾದ ವಿ,ರವಿಕುಮಾರ್,ಡಾ.ಎಂ,ಟಿ,ಮಲ್ಲೇಶಪ್ಪ,ಎನ್,ಪ್ರಕಾಶ್,ವಿ,ರಾಮಚಂದ್ರ,ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಎಂ,ಶಿವಾಜಿ ರಾವ್,ಮಹಾನಗರ ಪಾಲಿಕೆ ಸದಸ್ಯರಾದ ಗುಡಗಂಟಿ ಹನುಮಂತ,ಇತಿಹಾಸ ಅಕಾಡೆಮಿ ಸದಸ್ಯ ಟಿ,ಹೆಚ್,ಎಂ,ಬಸವರಾಜ ರವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನ 50 ನೇ ವರ್ಷದ ಸುವರ್ಣಮಹೋತ್ಸವ,ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿ, ಹನುಮಂತಪ್ಪ, ಪ್ರಧಾನ ಧರ್ಮಕರ್ತರಾದ ಪಿ,ಎಂ, ರಾಜಶೇಖರ, ಪ್ರಧಾನ ಅರ್ಚಕರಾದ ಪಿ, ಗಾದೆಪ್ಪ ನವರನ್ನು ಶೀಲಾ ಬ್ರಹ್ಮಯ್ಯ ನವರು ಸನ್ಮಾನಿಸಿದರು.ರಂಗೋಲಿ ಸ್ಪರ್ಧೆ ಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ಅತಿಥಿ ಗಳು ನೀಡಿದರು.
ಕಾರ್ಯಕ್ರಮದಲ್ಲಿ ನೃತ್ಯ ಗುರುಗಳಾದ ಜೀಲಾನ್ ಭಾಷಾ,ಶ್ರೀಲಕ್ಷ್ಮಿ ಕಲಾ ಕ್ಷೇತ್ರ ಟಿ,ನಾಗಭೂಷಣಂ ರವರು ಶ್ರೀ ತುಂಗ ಗಂಗಾ ಸಾಂಸ್ಕ್ರತಿಕ ಕಲಾ ಟ್ರಸ್ಟ್ ನ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ನೀಡಿದರು.ಅಸೋಸಿಯೇಷನ್ನಿನ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯವರು ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು.ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿ, ಹನುಮಂತಪ್ಪ ವಂದನಾರ್ಪಣೆ ಮಾಡಿದರು.ಕೆ.ಬಿ.ಸಿದ್ಧಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.