
ಶಿರಹಟ್ಟಿ,ನ.18: ಜವಾಹರಲಾಲ್ ನೆಹರೂ ಅವರು ಶಾಂತಿ ಮತ್ತು ಸೌಹಾರ್ದತೆಗೆ ಹೆಚ್ಚು ಒತ್ತು ನೀಡಿದ್ದು, ವೈಜ್ಞಾನಿಕ ಮತ್ತು ಕ್ಷೀರಕ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಿದವರಾಗಿದ್ದರು ಎಂದು ಲೋಕಸಭಾ ಮಾಜಿ ಸದಸ್ಯ ಐ.ಜಿ. ಸನದಿ ಹೇಳಿದರು.
ಪಟ್ಟಣದ ನೆಹರು ವೃತ್ತದಲ್ಲಿ ಶಾಕಿರ್ ಸನದಿ ಅಭಿಮಾನಿ ಬಳಗದ ವತಿಯಿಂದ ಮಕ್ಕಳ ದಿನಾಚರಣೆ ಹಾಗೂ ಜವಾಹರಲಾಲ್ ನೆಹರು ಜನ್ಮದಿನದ ಅಂಗವಾಗಿ, ನೆಹರೂ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು,
ನೆಹರೂ ಅವರು ಪಂಚವಾರ್ಷಿಕ ಯೋಜನೆಗಳನ್ನು ತಂದ ಮಹಾನ್ ಚೇತನವಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಸಿ. ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಮುತ್ತುರಾಜ ಭಾವಿಮನಿ. ಮಾನವ ಬಂಧುತ್ವ ವೇಧಿಕೆ ಸಂಚಾಲಕ ದೇವರಾಜ ಕಟ್ಟಿಮನಿ. ಹಮೀದ ಸನದಿ. ಚಾಂದಸಾಬ್ ಮುಳಗುಂದ. ರವಿ ಗುಡಿಮನಿ. ಮಲ್ಲಿಕ್ ನಗಾರಿ. ಷರೀಪ ಗುಡಿಮನಿ. ಉಡಚಪ್ಪ ನೀಲಣ್ಣವರ. ಉಮೇಶ ಬಡೆಣ್ಣವರ. ದೇವಪ್ಪ ಪೂಜಾರ. ಹನಮಂತಪ್ಪ ಬಡ್ಡೆಪ್ಪನವರ ಹಾಗೂ ಅನೇಕರು ಇದ್ದರು.