ಪಂಚಲೋಹದ ಮೂರ್ತಿಯ ಪ್ರಾಣಪ್ರತಿಷ್ಠಾಪನ,ಶಿಲಾ ಮಂಟಪ ಉದ್ಘಾಟನೆ

ರಾಯಚೂರು,ನ.೨೧- ರಾಯಚೂರು ತಾಲೂಕಿನ ಹಿರಾಪೂರ ಗ್ರಾಮದಲ್ಲಿ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಸಮ್ಮುಖದಲ್ಲಿ ನವೆಂಬರ್ ೨೨ ರಿಂದ ೨೩ ರವರೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪಂಚಲೋಹದ ಮೂರ್ತಿಯ ಪ್ರಾಣ ಪ್ರತಿಷ್ಟಾಪನ ಹಾಗೂ ನೂತನ ಶೀಲಾಮಂಟಪ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾಮತ ಸಮಾಜ ಸೇವಾ ಸಂಘ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ನವೆಂಬರ್ ೨೧ ರಂದು ಬೆಳಗ್ಗೆ ೬ ಗಂಟೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶ್ರೀ ಪಂಚಲೋಹದ ಮೂರ್ತಿ ಮೆರವಣಿಗೆಯು ಶ್ರೀ ವೀರಾಂಜನೇಯ ದೇವಸ್ಥಾನದಿಂದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾ ಮಂಟಪದವರೆಗೆ ಮುತೈದೆಯರಿಂದ ಕುಂಭ, ಕಳಸ,ಕನ್ನಡಿ, ಬಾಜಿ ಭಜಂತ್ರಿ ಮಂಗಳವಾದ್ಯ ವೈಭಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದರು.
ನವೆಂಬರ್ ೨೩ ರಂದು ಬೆಳಗಿನ ಜಾವ ೪-೧೫ ರಿಂದ ೫-೧೫ ಶುಭ ಮುಹೂರ್ತದಲ್ಲಿ ಮಹಾತ್ಮರ ಅಮೃತ ಹಸ್ತದಿಂದ ಮೂರ್ತಿಯ ಪ್ರತಿಷ್ಟಾಪನೆ ಗ್ರಾಮದ ಬೊಡ್ಡೆಕಲ್ಲು ಪ್ರತಿಷ್ಟಾಪನೆ,ನಂತರ ಪ್ರತಿಸ್ತಂಗ ಹೋಮ ಪೂರ್ಣಹೂತಿ ಮಹಾಮಂಗಳಾರತಿ ನಡೆಯಲಿದೆ.ಬೆಳಿಗ್ಗೆ ೧೦ ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.
ದಿವ್ಯ ಸಾನಿಧ್ಯವನ್ನು ನರಸೀಪುರ ಸುಕ್ಷೇತ್ರ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿ,ಬಿಜ್ಜಾಲಿ ಗಬ್ಬರು ಮಟಮಾರಿ
ಸಾವಿರದೇವರ ಸಂಸ್ಥಾನ ಮಠದ ವೀರತಪಸ್ವಿ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಹಿದ್ದಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ,ಸಂಸದ ರಾಜಾ ಅಮರೇಶ್ವರ ನಾಯಕ,ರಾಯಚೂರು ಶಾಸಕರಾದ ಬಸನಗೌಡ ದದ್ದಲ್,ಶಿವರಾಜ ಪಾಟೀಲ್,ವಿಧಾನ ಪರಿಷತ್ ಸದಸ್ಯ ತಿಮ್ಮಣಪ್ಪ ಕಮಕ್ಕುನೂರು,ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಗಂಗಾಮತ ಸಮಾಜ ರಾಜ್ಯಾಧ್ಯಕ್ಷ ಮೌಲಾಲಿ, ಗಂಗಾಮತ ಸಮಾಜ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಕೆ.ಶಾಂತಪ್ಪ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಡಗೋಲ ಆಂಜನೇಯ ಸೇರಿದಂತೆ ಇತರರು ಉಪಸ್ಥಿತರಿದ್ದರು.