ಪಂಚಲೋಹದ ಡಾ.ಅಂಬೇಡ್ಕರ್ ಪ್ರತಿಮೆ ಅನಾವರಣ

ಸಿಂದಗಿ, ಎ.17-ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೀಡಿದ ಸಂವಿಧಾನ ಬದ್ಧ ಹಕ್ಕು ಮೀಸಲಾತಿ, ಈ ಸಮಾಜದಲ್ಲಿ ಅಸ್ಪುಷೃತೆ ಎಲ್ಲಿಯವರೆಗೆ ಜೀವಂತ ವಾಗಿರುತದೆಯೊ ಅಲ್ಲಿಯ ವರೆಗೆ ಮೀಸಲಾತಿ ಬೇಕೆ ಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ತಾಲೂಕಿನ ರಾಂಪೂರ ಪಿ,ಎ. ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕ ಶಾಖೆ ಸಿಂದಗಿ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಸೇರಿ ಮಹಾ ಡಾ.ಬಿಆರ್. ಅಂಬೇಡ್ಕರ್ ರವರ ಪಂಚಲೋಹದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಶತ ಶತಮಾನದಗಳಿಂದ ಶೋಷಣೆಗೆ ಒಳಗಾದ ತಳ ಸಮುದಾಯಗಳು ಒಂದುಗೂಡಿ ಹೋರಾಟ ರೂಪಿಸುವುದು ಅನಿವಾರ್ಯ ವಾಗಿದೆ ಅಲ್ಲದೆ ಪಟ್ಟಬದ್ರ ಹಿತಾಸಕ್ತಿಗಳ ವಿರುದ್ಧ ನಿರಂತರ ಸಮರ ಸಾರುವದರೊಂದಿಗೆ ಜಾಗೃತಿಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಡಿಎಸ್ಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ವಾಯ್.ಸಿ. ಮಯೂರ ಅವರು ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಪೂಜ್ಯ ಸಂಘಪಾಲ ಬಂತೇಜಿ, ರಾಂಪೂರ ಆರೂಡ ಮಠದ ನಿತ್ಯಾನಂದ ಮಹಾರಾಜರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಜ್ಯೋತಿ ಬೇಳಗಿಸಿದ ಕಾಂಗ್ರೆಸ್ ನ ಯುವ ಮುಖಂಡ ಅಶೋಕ ಮನಗೂಳಿ ಮಾತನಾಡಿ, ರಾಂಪೂರ ಪಿಎ ಗ್ರಾಮದಲ್ಲಿ ಬಹುದಿನಗಳಿಂದ ಅನಾವರಣಗೊಳ್ಳದೇ ನೆನಗುದಿಗೆ ಬಿದ್ದಿದ್ದ ಬೋಧಿಸತ್ವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಅನಾವರಣ ಗೊಂಡಿದ್ದು ತುಂಬಾ ಶ್ಲಾಘನೀಯ ಕೆಲಸ ವಾಗಿದೆ. ಹಾಗೇನೆ ಅವರ ತತ್ವ ಸಿಧಾಂತಗಳನ್ನು ನಮ್ಮ ಯುವ ಜನತೆ ಅನುಸರಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ತಾಲೂಕಿನ ರಾಂಪೂರ ಪಿ.ಎ. ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅವರ ಪ್ರತಿಮೆ ಅನಾವರಣ ಗೊಂಡಿದ್ದು ತುಂಬಾ ಶ್ಲಾಘನೀಯ ಕೆಲಸ ವಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಬಿ.ಆರ್. ಸಿಸ್ಟರ್ ಅನಿತಾ ಡಿ’ಸೋಜಾ, ಡಾ. ದಸ್ತಗೀರ ಮುಲ್ಲಾ, ಶಿವಾಜಿ ಮೆಟಗಾರ, ಮಾತನಾಡಿದರು.
ವೇದಿಕೆ ಮೇಲೆ ಮೈಬೂಬಸಾಬ್ ತಾಂಬೋಳಿ, ಮಾಜಿ ಜಿಪಂ ಉಪಾಧ್ಯಕ್ಷ ಸಿದ್ದರಾಮ ಪಾಟೀಲ, ವಿನಾಯಕ ಗುಣಸಾಗರ, ಶರಣು ಶಿಂಧೆ, ಅಶೋಕ ಚಲವಾದಿ, ಆರ್.ಎಂ. ಚೌರ, ಮಂಜು ಯಂಟಮಾನ, ಚಂದ್ರಕಾಂತ ಸಿಂಗೆ, ಸೋಮು ಮೇಲಿನಮನಿ, ಪ್ರಕಾಶ ಗುಡಿಮನಿ ಶ್ರೀಕಾಂತ ಸೋಮಜಾಳ, ನೀಲಕಂಠ ಹೊಸಮನಿ, ಶರಣು ಚಲವಾದಿ, ಸೈಬಣ್ಣ ದೊಡಮನಿ, ಜೈಭೀಮ ತಳಕೇರಿ, ಹಾಗೂ ಇತರರು ಇದ್ದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮೈಯೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಆಲಮೇಲ ನಿರೂಪಿಸಿದರು. ಶಿವಪುತ್ರ ಮೇಲಿನಮನಿ ವಂದಿಸಿದರು.