ಪಂಚಲಿಂಗೇಶ್ವರ ಬುಗ್ಗಿ ಪ್ರವಾಸಿ ತಾಣವೆಂದು ಘೋಷಿಸಲು ಮನವಿ

ಚಿಂಚೋಳಿ,ಏ.7- ಪುರಸಭೆ ವ್ಯಾಪ್ತಿಗೆ ಬರುವ ಸುಕ್ಷೇತ್ರ ಪಂಚಲಿಂಗೇಶ್ವರ (ಬುಗ್ಗಿ) ದೇವಸ್ಥಾನವು ಸಾವಿರಾರು ವರ್ಷಗಳಿಂದ ಜಲಧಾರೆಯಿಂದ ಕುಡಿದ್ದು ವರ್ಷದ 365 ದಿನಗಳಕಾಲ ಇಲ್ಲಿನ ಪಂಚಲಿಂಗೇಶ್ವರ ಬುಗ್ಗಿಯಲ್ಲಿ ನೀರು ಬತ್ತದೆ ಇರುವುದು ವಿಷೇಶ ಮತ್ತು ಇತಿಹಾಸ ಇದನ್ನು ಪ್ರವಾಸಿ ತಾಣವಾಗಿ ಘೋಷಣೆ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಅವರಿಗೆ ಪುರಸಭೆ ಅಧ್ಯಕ್ಷೆ ಜಗದೇವಿ ಶಂಕರರಾವ ಗಡಂತಿ ಅವರು ಮನವಿ ಸಲ್ಲಿಸಿದರು.
ಸಾವಿರಾರು ವರ್ಷಗಳಿಂದ ಪ್ರತಿವರ್ಷ ಶಿವರಾತ್ರಿ ಹಬ್ಬದ ದಿನದಂದು, ಸ್ಥಳೀಯ ಹಾಗೂ ತಾಲೂಕಿನ ಸುತ್ತಮುತ್ತಲಿನ, ಸಾರ್ವಜನಿಕರು, ಬಂದು ಪಂಚಲಿಂಗಗಳಿಗೆ ವಿಷೇಶ ಅಭಿಷೇಕ, ಪೂಜೆ, ಸಲ್ಲಿಸುತ್ತಾರೆ,
ಚಿಂಚೋಳಿ ಪುರಸಭೆ ವ್ಯಾಪ್ತಿಗೆ ಬರುವ ಪಂಚಲಿಂಗೇಶ್ವರ (ಬುಗ್ಗಿ) ದೇವಸ್ಥಾನದ ಹತ್ತಿರ ಶಿವನ ಮೂರ್ತಿ ಪ್ರತಿಷ್ಠಾಸಬೇಕು ಮತ್ತು ಪ್ರವಾಸಿ ತಾಣವೆಂದು ಘೋಷಣೆ ಮಾಡಬೇಕೆಂದು ಅವರು ಮನವಿ ಮಾಡಿದರು.
ಸಂಸದ ಡಾ ಉಮೇಶ ಜಾಧವ, ಶಾಸಕ ಡಾ.ಅವಿನಾಶ ಜಾಧವ, ಪುರಸಭೆ ಅಧಿಕಾರಿಗಳು, ಪಂಚಲಿಂಗೇಶ್ವರ ಬುಗ್ಗಿ ಕಮಿಟಿ ಸದಸ್ಯರು, ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಯುವಮೋರ್ಚಾ ಅದ್ಯಕ್ಷ ಸತೀಶರೆಡ್ಡಿ ತಾಜಲಾಪೂರ, ಸದಸ್ಯರಾದ ಶೇಷಾದ್ರಿ ಕಳಸ್ಕರ, ಭಕ್ತರಾದ, ಅಗ್ನಿಹೋತ್ರಿ, ಮಲ್ಲಿಕಾರ್ಜುನ, ರೇವಣಸಿದ್ದಪ್ಪ ದಾದಾಪೂರ ನಾಗರಾಜ ಮಲಕೂಡ, ರಾಜು ಪಟಪಳ್ಳಿ, ತುಳಿಸಿರಾಮ ಪೆÇೀಳ, ವಾಸುದೇವ ಕುಲಕರ್ಣಿ, ಉಪಸ್ಥಿತರಿದ್ದರು.