ಪಂಚರತ್ನ ಯೋಜನೆ ರಥಯಾತ್ರೆ ಜ. 7ಕ್ಕೆಹುಮನಾಬಾದ್‍ಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮನ: ಸಿಎಂ ಪೈಜ್

ಹುಮನಾಬಾದ್: ಜ.5:ಜಾತ್ಯತೀತ ಜನತಾದಳ ಕರ್ನಾಟಕ ಪಕ್ಷದ ಮಹತ್ವದ ಪಂಚರತ್ನ ಯೋಜನೆಯ ರಥಯಾತ್ರೆಯೂ ಇದೇ ಜನವೇರಿ 7ರಂದು ಪಟ್ಟಣದಲ್ಲಿ ನೆರವೇರಲಿದ್ದು ಅಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ, ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂ ಪೈಜ್ ಹೇಳಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು. ಪಂಚರತ್ನ ರಥಯಾತ್ರೆಯೂ ಜನೆವರಿ 5ರಂದು ಬೀದರ್ ಉತ್ತರ, 6 ರಂದು ಬೀದರ್ ದಕ್ಷಿಣ, 7ರಂದು ಹುಮನಾಬಾದ್ ಕ್ಷೇತ್ರದಲ್ಲಿ ನಡೆಯಲಿದ್ದು ಅಂದು ಬೆಳಿಗ್ಗೆ 9ಕ್ಕೆ ತಾಳಮಡಗಿ ಇಂದ ಪ್ರಾರಂಭವಾದ ಪಂಚರತ್ನ ರಥಯಾತ್ರೆ ಕಂದಗೋಳ, ಮರಕಲ್, ಸೀತಾಳಗೇರಾ, ಹೋಸಳ್ಳಿ, ಚಿಟಗುಪ್ಪಾ ಗಾಂಧಿ ವೃತ್ತ, 9.40 ಗಂಟೆಗೆ ದರ್ಗಾ ಭೇಟಿ ಭಾಷಣ, ಇಂದ್ರಾನಗರ, 10.30 ಕ್ಕೆ ಹುಡಗಿ, 10.55 ಕ್ಕೆ ನಂದಗಾವ್, ಮಲ್ಕಾಪುರವಾಡಿ, ಬೇನಚಿಂಚೋಳಿ, 11.25ಕ್ಕೆ ಹಳ್ಳಿಖೇಡ(ಬಿ) ಭಾಷಣ, ಸೀಮಿ ನಾಗನಾಥ ದೇವಾಲಯ ಭೇಟಿ, ನಮದಾಪುರವಾಡಿ, ಮುಗನೋರ್, 12.25ಕ್ಕೆ ದುಬಲಗುಂಡಿ ಭಾಷಣ, ಓತಗಿ, ಹಂದಿಕೇರಾ, 1.10 ಕ್ಕೆ ಘೋಡವಾಡಿ ದರ್ಗಾ ಭೇಟಿ ಭಾಷಣ, 1.40 ಕ್ಕೆ ಘಾಟಬೋರಳ ಭಾಷಣ, 2.10 ಕ್ಕೆ ರಾಜೋಳ ಭೇಟಿ ರೈತರರೊಂದಿಗೆ ಸಭೆ, ಹುಣಸಗೇರಾ, ಕನಕಟ್ಟ, 3.30 ಕ್ಕೆ ಮಾಣಿಕನಗರ ಮಾಣಿಕಪ್ರಭು ದೇವಸ್ಥಾನಕ್ಕೆ ಭೇಟಿ, 3.45 ಕ್ಕೆ ಹುಮನಾಬಾದ್‍ನ ಪ್ರವಾಸಿ ಮಂದಿರದಿದ ಡಾ.ಅಂಬೇಡ್ಕರ್ ವೃತ್ತಕ್ಕೆ ತೇರಳಿ ಮಾಲಾರ್ಪಣೆ ಮಾಡಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವರು. ಇಲ್ಲಿನ ಬಸವೇಶ್ವರ ವೃತ್ತಕ್ಕೆ ತೆರಳಿ ಮಾಲಾರ್ಪಣೆ ಮಾಡುವರು. ಬಳಿಕ 4.30 ಕ್ಕೆ ನಡೆಯುವ ಬೃಹತ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಾಯಂಕಾಲ 7 ಗಂಟೆಗೆ ರಾಜೇಶ್ವರ, 7.30 ತಡೋಳ ಬಳಿಕ 8ಕ್ಕೆ ಕೌಡಿಯಾಳದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ, ಎಂದು ತಿಳಿಸಿದರು. ಈ ಪಂಚರತ್ನ ಯೋಜನೆ ರಥಯಾತ್ರೆಯಲ್ಲಿ ನಿಖಿಲ್‍ಕುಮಾರ ಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಮ್, ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಂಚರತ್ನ ಯೋಜನೆ ರಥಯಾತ್ರೆ ಯಶಸ್ವಿಗೊಳಿಸಬೇಕು, ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ ಪೈಜ್ ಮನವಿ ಮಾಡಿದರು.

ಇದೇ ವೇಳೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗೌತಮ ಸಾಗರ್, ಪ್ರಮುಖರಾದ ಶಿವಪುತ್ರ ಮಾಳಗೆ, ಬಾಬಾ ಬುಖಾರಿ, ಸುರೇಶ್ ಸೀಗಿ, ನಸೀರ್, ಮೋಯಿಜ್, ಹಪೀಜ್, ಇದ್ದರು.